ETV Bharat / state

ಬಳ್ಳಾರಿ: ಲಾರಿ ಅಪಘಾತದಲ್ಲಿ ಗಾಯಗೊಂಡ ಕ್ಲೀನರ್ ಸಾವು, ಕಣ್ಣುಗಳ ದಾನ

author img

By

Published : Oct 21, 2022, 4:55 PM IST

ಸಂಡೂರು ಪಟ್ಟಣದ ಭುಜಂಗನಗರ ಬೈಪಾಸ್‌ ರಸ್ತೆಯಲ್ಲಿ ಲಾರಿಯೊಂದು ಅಪಘಾತಕ್ಕೆ ಈಡಾಗಿ ಕ್ಲೀನರ್​ವೊಬ್ಬರು ಬೆಂಗಳೂರಿನ ಸಂಜಯ್​ಗಾಂಧಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಎನ್. ಯರಿಸ್ವಾಮಿ
ಎನ್. ಯರಿಸ್ವಾಮಿ

ಬಳ್ಳಾರಿ: ಲಾರಿ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಕ್ಲೀನರ್​ ಬೆಂಗಳೂರಿನ ಸಂಜಯ್ ಗಾಂಧಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಎನ್.ಯರಿಸ್ವಾಮಿ (20) ಮೃತ ಯುವಕ.

ಸಂಡೂರು ಪಟ್ಟಣದ ಭುಜಂಗನಗರ ಬೈಪಾಸ್‌ ರಸ್ತೆಯಲ್ಲಿ ಇವರಿದ್ದ ಲಾರಿ ಅ. 11ರಂದು ಅಪಘಾತವಾಗಿತ್ತು. ಯುವಕನ ತಂದೆ ದೇವೇಂದ್ರಪ್ಪ ಲಾರಿ ಚಾಲನೆ ಮಾಡುತ್ತಿದ್ದರು. ಅಪಘಾತದಲ್ಲಿ ಅವರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಸದ್ಯ ಚೇತರಿಸಿಕೊಂಡಿದ್ದಾರೆ.

ತೀವ್ರವಾಗಿ ಗಾಯೊಂಡಿದ್ದ ಯರಿ ಸ್ವಾಮಿಯನ್ನು ಸಂಜಯ್ ಗಾಂಧಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ. ಯುವಕನ ಕಣ್ಣುಗಳನ್ನು ಬೆಂಗಳೂರಿನ ಲಯನ್ ಇಂಟರ್ ನ್ಯಾಷನಲ್ ಕಣ್ಣಿನ ಬ್ಯಾಂಕ್‌ಗೆ ದಾನ ಮಾಡಲಾಗಿದೆ. ಮೃತದೇಹವನ್ನು ಕುಟುಂಬಸ್ಥರಿಗೆ ಮರಳಿಸಲಾಗಿದೆ.

ಇದನ್ನೂ ಓದಿ: ಕದ್ದ ಹಣದಲ್ಲಿ ಶೋಕಿ, ಸ್ವಲ್ಪ ದಾನ ಧರ್ಮ: ಮಡಿವಾಳ ಪೊಲೀಸರಿಂದ ಆರೋಪಿ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.