ETV Bharat / state

ಸಚಿವದ್ವಯರಿಂದ ಮಾದರಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪ

author img

By

Published : Apr 21, 2021, 6:41 PM IST

ಜಿಲ್ಲಾ ಉಸ್ತುವಾರಿ ಸಚಿವ ಆನಂದ್​ ಸಿಂಗ್ ಹಾಗೂ ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಕೈಗೊಂಡಿದ್ದ ಪ್ರಚಾರ ಕಾರ್ಯದಲ್ಲಿ ಮಾದರಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಜೊತೆ ಜೊತೆಗೆ ಕೋವಿಡ್ ನಿಯಮಗಳನ್ನೂ ಗಾಳಿಗೆ ತೂರಲಾಗಿದೆ ಎಂಬ ಆರೋಪ ಕೇಳಿಬಂದಿದೆ.

charges-of-violation-of-code-of-conduct-in-bellary
ಚುನಾವಣಾ ನೀತಿ ಉಲ್ಲಂಘನೆ

ಬಳ್ಳಾರಿ: ಮಹಾನಗರ ಪಾಲಿಕೆ ಚುನಾವಣೆ ನಿಮಿತ್ತ ಮಹಾನಗರ ಪಾಲಿಕೆ ವ್ಯಾಪ್ತಿಯ 25ನೇ ವಾರ್ಡ್​ನ ಅಭ್ಯರ್ಥಿ ಗೋವಿಂದರಾಜಲು ಪರವಾಗಿ ಸಚಿವರು ಪ್ರಚಾರ ಕೈಗೊಂಡಿದ್ದ ವೇಳೆ ಮಾದರಿ‌ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪ ಕೇಳಿಬಂದಿದೆ.

ಚುನಾವಣಾ ನೀತಿ ಉಲ್ಲಂಘನೆ ಆರೋಪ

ಜಿಲ್ಲಾ ಉಸ್ತುವಾರಿ ಸಚಿವ ಆನಂದ್​ ಸಿಂಗ್ ಹಾಗೂ ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಕೈಗೊಂಡಿದ್ದ ಪ್ರಚಾರ ಕಾರ್ಯದಲ್ಲಿ ಮಾದರಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಜೊತೆ ಜೊತೆಗೆ ಕೋವಿಡ್ ನಿಯಮಗಳನ್ನೂ ಗಾಳಿಗೆ ತೂರಲಾಗಿದೆ. ಅಭ್ಯರ್ಥಿ ಗೋವಿಂದರಾಜಲು ಪರ ಕೈಗೊಂಡಿದ್ದ ಪ್ರಚಾರದಲ್ಲಿ ‌ನೂರಾರು ಕಾರ್ಯಕರ್ತರೊಂದಿಗೆ ವಾರ್ಡ್​ನ ನಾನಾ ಪ್ರದೇಶಗಳಲ್ಲಿ ಸಚಿವದ್ವಯರು ಓಡಾಡಿದರಲ್ಲದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಚುನಾವಣಾ ಆಯೋಗದ ನಿಯಮಾವಳಿಗಳನ್ನ‌ ಗಾಳಿಗೆ ತೂರಿದ್ದಾರೆ ಎನ್ನಲಾಗಿದೆ.

ಈ‌ ಕುರಿತ ಮಾಹಿತಿಗೆ ಸಮಾಜ‌ ಕಲ್ಯಾಣ ಇಲಾಖೆ ತಾಲೂಕು ಅಧಿಕಾರಿ ಗಂಗಪ್ಪ‌ ಅವರನ್ನ ಈಟಿವಿ ಭಾರತ್​ ವರದಿಗಾರ ಸಂಪರ್ಕಿಸಿದಾಗ, ಅವರು 27ನೇ ವಾರ್ಡ್​ನಲ್ಲಿ ಪ್ರಚಾರ ಮಾಡಿದ್ದಾರೆ. ಅವರನ್ನೇ ಕೇಳಿ. ಅದೇನಾಗಿದೆ ಅಂತ ನನಗಂತೂ ಗೊತ್ತಿಲ್ಲ ಎಂದಿದ್ದಾರೆ. ಅವರ ನಂಬರ್ ಇದ್ದರೆ ಕೊಡಿ. ಅವರನ್ನ ಸಂಪರ್ಕಿಸುವೆ ಎಂದಾಗ, ಇಲ್ಲ. ನಾನು ಸ್ವಲ್ಪ ಬ್ಯುಸಿಯಾಗಿರುವೆ. ಬೇರೆ ಯಾರ ಬಳಿಯಾದರೂ ಕಲೆಕ್ಟ್ ಮಾಡಿ ಸಂಪರ್ಕಿಸಿ ಮಾಹಿತಿಯನ್ನ ಕಲೆಕ್ಟ್ ಮಾಡಿ ಎಂದಿದ್ದಾರೆ.

ಓದಿ: ರೀ ಡಿಸಿ, ಎಸ್ಪಿ ನೀವೇನ್ ಮಾಡ್ತಿದ್ದೀರಿ, ಏನಾದ್ರೂ ಹೆಚ್ಚು ಕಡಿಮೆಯಾದ್ರೇ.. ಸಚಿವ ಬೈರತಿ ಆಕ್ರೋಶ

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.