ETV Bharat / state

ರಾಷ್ಟ್ರೀಯ ಹೆದ್ದಾರಿಗಳಲ್ಲಿ ಲಾರಿ ಚಾಲಕರ ಮೇಲೆ ಹಲ್ಲೆ-ದರೋಡೆ ಪ್ರಕರಣ: ಮೂವರ ಬಂಧನ

author img

By

Published : Nov 3, 2020, 4:43 PM IST

ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ಲಾರಿ ಚಾಲಕರ ಮೇಲಿನ ಹಲ್ಲೆ-ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಅಂತಾರಾಜ್ಯ ಕಳ್ಳರನ್ನು ಬಂಧಿಸಲಾಗಿದೆ.

three accused arrest
ಮೂವರು ಆರೋಪಿಗಳ ಬಂಧನ

ಬಳ್ಳಾರಿ: ಬೀದರ್, ಬಳ್ಳಾರಿ-ಶ್ರೀರಂಗಪಟ್ಟಣದ ರಾಷ್ಟ್ರೀಯ ಹೆದ್ದಾರಿ ನಂ.150 (ಎ)ರಲ್ಲಿ ಸಂಚರಿಸುತ್ತಿದ್ದ ಲಾರಿ ಚಾಲಕರ ಮೇಲಿನ ಹಲ್ಲೆ-ದರೋಡೆ ಪ್ರಕರಣದಲ್ಲಿ ಭಾಗಿಯಾಗಿದ್ದ ಮೂವರು ಅಂತಾರಾಜ್ಯ ಖದೀಮರನ್ನು ತೆಕ್ಕಲಕೋಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮಹಾರಾಷ್ಟ್ರದ ಉಸ್ಮನಾಬಾದ್ ಜಿಲ್ಲೆಯ ಸುಭಾಷ್ ಕಾಳೆ (29),‌ ನಾನಾ ಕಾಳೆ (40), ಸುಭಾಷ್ ಕಾಳೆ (25) ಬಂಧಿತರು. ಎರಡು ಲಾರಿಗಳನ್ನು ಜಪ್ತಿಗೊಳಿಸಲಾಗಿದೆ ಎಂದು ಎಸ್ಪಿ ಸೈದುಲು ಅಡಾವತ್ ತಿಳಿಸಿದ್ದಾರೆ. ಈ ಪ್ರಕರಣದಲ್ಲಿ ಇನ್ನೂ ಮೂವರು ತಲೆಮರೆಸಿಕೊಂಡಿದ್ದು, ಶೀಘ್ರದಲ್ಲೇ ಬಂಧಿಸುತ್ತೇವೆ ಎಂದಿದ್ದಾರೆ.

ಸರಕು‌ ಸಾಗಣೆ ಲಾರಿಗಳಲ್ಲಿ ಚಾಲಕ ಮತ್ತು ಕ್ಲೀನರ್​​ಗಳಾಗಿ ಬಂದು ಹೆದ್ದಾರಿಯ ಮೇಲೆ ಸುಲಿಗೆ, ದರೋಡೆ, ಟೈಯರ್​​ಗಳ ಕಳ್ಳತನ, ಡೀಸೆಲ್ ಕಳ್ಳತನ, ಮನೆಗಳ್ಳತನ ಹಾಗೂ ರಸ್ತೆಯುದ್ದಕ್ಕೂ ರಸ್ತೆಯ ಆಜು-ಬಾಜುಗಳಲ್ಲಿರುವ ಅಂಗಡಿಗಳ ಕಳ್ಳತನ ಮಾಡುತ್ತಿದ್ದರು ಎನ್ನಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.