ETV Bharat / state

ಕಲ್ಲು ಹೊಡೆದವರು ಪೊಲೀಸರು ಅಂದ್ರೆ ಜನ ಏನಂದಾರು.. ಸಿ ಟಿ ರವಿ ಪ್ರಶ್ನೆ

author img

By

Published : Jan 10, 2020, 4:50 PM IST

ಐತಿಹಾಸಿಕ ಪ್ರಸಿದ್ಧ ಹಂಪಿ‌ ಉತ್ಸವದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಪ್ರವಾಸೋದ್ಯಮ ಸಚಿವ ಸಿ ಟಿ ರವಿ ಚಾಲನೆ ನೀಡಿದರು.

ಹಂಪಿ‌ ಉತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಿ. ಟಿ. ರವಿ ಚಾಲನೆ
ಹಂಪಿ‌ ಉತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಿ. ಟಿ. ರವಿ ಚಾಲನೆ

ಬಳ್ಳಾರಿ: ಐತಿಹಾಸಿಕ ಪ್ರಸಿದ್ಧ ಹಂಪಿ‌ ಉತ್ಸವದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಪ್ರವಾಸೋದ್ಯಮ ಸಚಿವ ಸಿ ಟಿ ರವಿ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಮಂಗಳೂರು ಘಟನೆ ಬಗ್ಗೆ ನೀಡಿದ್ದ ಹೇಳಿಕೆಗೆ ಟಾಂಗ್‌ ನೀಡಿದರು. ಕುಮಾರಸ್ವಾಮಿ ಅವರು 2 ಅವಧಿಗೆ ಸಿಎಂ ಆಗಿದ್ದವರು. ಯಾವ ಹಿನ್ನೆಲೆಯಲ್ಲಿ ಹೇಳಿದ್ದಾರೋ ನನಗಂತೂ ಗೊತ್ತಿಲ್ಲ ಎಂದರು.

ಯಾವುದೋ ನಕಲಿ ವಿಡಿಯೋ ತುಣುಕು ಹಿಡಿದುಕೊಂಡು ಪೊಲೀಸರ ವಿರುದ್ಧ ಇಂತಹ ನಿರ್ಣಯಕ್ಕೆ ಬರೋದು ಸರಿಯಲ್ಲ. ರಾಜ್ಯ ಪೊಲೀಸರ ಆತ್ಮಸ್ಥೈರ್ಯ ಕುಗ್ಗಿಸುವ ಕೆಲಸವನ್ನು ಅವರು ಮಾಡಬಾರದು ಎಂದರು.

ಹಂಪಿ‌ ಉತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಿ ಟಿ ರವಿ ಚಾಲನೆ..

ರಾಶಿ ರಾಶಿ ಕಲ್ಲು ತಂದು ಎಸೆದವರು, ಬೀದಿಗಿಳಿಯುವಂತೆ ಪ್ರಚೋದನೆ ಮಾಡಿದವರು ಪೊಲೀಸರಾ? ಈ ಬಗ್ಗೆ ಕುಮಾರಸ್ವಾಮಿ ಮಾತಾಡಿದರೆ ಜೆಡಿಎಸ್ ಪಕ್ಷವನ್ನು ಸೆಕ್ಯುಲರ್ ಅನ್ನಬಹುದು. ಇಲ್ಲದೇ ಹೋದರೆ ಫಾದರ್ ಅಂಡ್ ಸನ್ ಪಾರ್ಟಿಯಾಗಲಿದೆ ಎಂದರು. ಕಲ್ಲು ಹೊಡೆದವರು ಪೊಲೀಸರು ಅಂದರೆ ಜನ ಏನಂದುಕೊಳ್ಳುತ್ತಾರೆ ಅಂತಾ ಪ್ರಶ್ನಿಸಿದರು.

ಚಿಕ್ಕಮಗಳೂರು ಜಿಲ್ಲಾ ಸಮ್ಮೇಳನಕ್ಕೆ ಅನುದಾನ ತಡೆ ಹಿಡಿದಿರೋದನ್ನ ಸಮರ್ಥಿಸಿಕೊಂಡರು. ಸಾಮರಸ್ಯ ವಾತಾವರಣದಲ್ಲಿ ಸಮ್ಮೇಳನ ಜರುಗಬೇಕು. ಕಾನೂನು ಕೈಗೆತ್ತಿಕೊಳ್ಳುವ ಕೆಲಸ ಯಾರೂ ಮಾಡಬಾರದು. ಕಾನೂನು ಸುವ್ಯವಸ್ಥೆಗೆ ಧಕ್ಕೆ ಬರಬಾರದು. ಅತಿರೇಕದ ವರ್ತನೆಗೆ ಅವಕಾಶ ಕೊಡಬಾರದು ಎಂದು ಜಿಲ್ಲಾಡಳಿತಕ್ಕೆ ಸೂಚನೆ‌ ನೀಡಿದ್ದೇನೆ ಎಂದರು.

Intro:ಮಾಜಿ ಸಿಎಂ ಹೆಚ್ಡಿಕೆ ಹೇಳಿಕೆಗೆ ಸಚಿವ ಸಿಟಿ ರವಿ ಟಾಂಗ್
ಬಳ್ಳಾರಿ: ಮಾಜಿ ಸಿಎಂ ಹೆಚ್ಡಿಕೆ ಹೇಳಿಕೆಗೆ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಟಾಂಗ್ ನೀಡಿದ್ದಾರೆ.
ಜಿಲ್ಲೆಯ ಐತಿಹಾಸಿಕ ಪ್ರಸಿದ್ಧ ಹಂಪಿ‌ ಉತ್ಸವದ ನಿಮಿತ್ತ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತಾಡಿ, ಮಾಜಿ ಸಿಎಂ ಹೆಚ್ಡಿಕೆ ಯಾವ ಹಿನ್ನಲೆಯಲ್ಲಿ ಮಂಗಳೂರು ಘಟನೆ ಹೇಳಿದ್ದಾರೋ ನನಗಂತೂ ಗೊತ್ತಿಲ್ಲ. ಎರಡು ಅವಧಿಗೆ ಸಿಎಂ ಆದವರು ಕುಮಾರಸ್ವಾಮಿ
ಬಿಜೆಪಿ, ಕಾಂಗ್ರೆಸ್ ಇಲ್ಲವೇ ಜೆಡಿಎಸ್ ಪೊಲೀಸರು ಅಲ್ಲ
ಅವರು ರಾಜ್ಯದ ಪೊಲೀಸರು. ಕಟ್ ಅಂಟ್ ಫೇಸ್ಟ್ ವಿಡಿಯೊ ತುಣುಕು ಹಿಡಿದುಕೊಂಡು ಇಂಥಹ ನಿರ್ಣಯಕ್ಕೆ ಬರೋದು ಸರಿ ಯಲ್ಲ.
ರಾಜ್ಯ ಪೊಲೀಸರ ಆತ್ಮಸ್ಥೈರ್ಯ ಕುಗ್ಗಿಸುವ ಕೆಲಸ ಮಾಜಿ ಸಿಎಂ
ಹೆಚ್ಡಿಕೆ ಮಾಡಬಾರದು. ರಾಶಿ- ರಾಶಿ ಕಲ್ಲು ತಂದು ಎಸೆದವರು, ಬೀದಿಗೆ ಪ್ರಚೋದನೆ ಮಾಡಿದವರು ಪೊಲೀಸರಾ? ಇದರ ಬಗ್ಗೆ ಕುಮಾರಸ್ವಾಮಿ ಮಾತಾಡಿದರೆ ಸೆಕ್ಯುಲರ್. ಜೆಡಿಎಸ್ ಅನ್ನ ಬಹುದು. ಇಲ್ಲದೇ ಹೋದರೆ ಫಾದರ್ ಅಂಡ್ ಸನ್ ಪಾರ್ಟಿ ಯಾಗಲಿದೆ. ಕಲ್ಲು ಹೊಡೆದವರು ಪೊಲೀಸರು. ಅಂದರೆ ಜನ ಏನಂದುಕೊಳ್ಳುತ್ತಾರೆ ಎಂದು ಛೇಡಿಸಿದ್ದಾರೆ.
ಅಕ್ರಮ ಬಾಂಗ್ಲಾದೇಶಿ ಬಗ್ಗೆ ಯುಟರ್ನ್ ಹೊಡೆದ ಹೆಚ್ಡಿಕೆ
ಎಂದು ಜನ ಮಾತಾಡಿಕೊಳ್ಳುತ್ತಿದ್ದಾರೆ. ಬಾಂಗ್ಲಾ ವಾಸಿಗಳ
ಬಗ್ಗೆ ಎರಡು ರೀತಿ ಹೇಳಿಕೆ ನೀಡುತ್ತಾರೆ. ಅವರನ್ನು ಓಟು
ಬ್ಯಾಂಕ್ ರೀತಿ ಹೆಚ್ಡಿಕೆ ತವರದರು ಸೇರಿಸಿ ದೇಶಕ್ಕೆ ಹಾನಿ
ಯಾಗುವ ರೀತಿ ನಡೆದುಕೊಳ್ಳುವುದು ಸರಿಯಲ್ಲ.
ನಮ್ಮವರು ವಿದೇಶದಲ್ಲಿ ಕೆಲಸ ಮಾಡ್ತಾರೆ. ಕದ್ದು ಹೋದರೆ ಹೊರಗೆ ಹಾಕ್ತಾರೆ. ಹಾಗಾದ್ರೆ ಕದ್ದು ಒಳ ಬಂದವರಿಗೆ ಏನು ಮಾಡಬೇಕು. ಈ ಬಗ್ಗೆ ಹೆಚ್ ಡಿ ಕೆ ಪ್ರತಿಕ್ರಿಯೆ ನೀಡಲಿ
ಚಿಕ್ಕಮಗಳೂರು ಜಿಲ್ಲಾ ಸಮ್ಮೇಳನ ವಿಚಾರ: ಸಾಮರಸ್ಯ ವಾತಾವರಣದಲ್ಲಿ ಸಮ್ಮೇಳನ ಜರುಗಬೇಕು. ಕಾನೂನು ಕೈಗೆತ್ತಿಕೊಳ್ಳುವ ಕೆಲಸ ಯಾರು ಮಾಡಬಾರದು. ಕಾನೂನು ಸುವ್ಯವಸ್ಥೆ ಧಕ್ಕೆ ಬರಬಾರದು, ಅತಿರೇಕ ವರ್ತನೆಗೆ ಅವಕಾಶ ಕೊಡಬಾರದು, ಬಾಹುಬಲ ಅವಕಾಶವಿಲ್ಲ ಎಂದು ಜಿಲ್ಲಾಡಳಿತಕ್ಕೆ ಸೂಚನೆ‌ ನೀಡಿದ್ದೇನೆ.
Body:ಸೌಹಾರ್ದ ರೀತಿ ಕಾರ್ಯಕ್ರಮ ನಡೆಯಲಿ ಎನ್ನುವ ಕಾರಣಕ್ಕೆ ಸದ್ಯ ಮುಂದೂಡಿ ಎಂದು ಹೇಳಿದ್ದು ನಿಜ. ಸಂಘರ್ಷದ ವಾತಾ ವರಣದಲ್ಲಿ ನಡೆಯಬಾರದು. ಅದರಿಂದಾಗಿ ಅನುದಾನ ಕೊಡೋದು ಮುಂದೂಡಿ ಎಂದು ಹೇಳಿದ್ದೇನೆ. ಜೀವಪರವಾಗಿ ಸಮ್ಮೇಳನ ಇರಬೇಕು. ಜೀವ ತೆಗೆಯುವ ಸಮ್ಮೇಳನ ಆಗ ಬಾರದು.
ಹಂಪಿ ಉತ್ಸವಕ್ಕೆ ಸಿಎಂ ಸಂಜೆ ಬರುತ್ತಾರೆ. ವಿಜಯನಗರ ಘೋಷಣೆ ಮಾಡುವುದು ನನ್ನ ಕೆಲಸವಲ್ಲ. ವಿಜಯನಗರ ಸಾಮ್ರಾಜ್ಯ ಸ್ಥಾಪನೆಯಾಗಿ ಹಲವು ದಶಕಗಳೇ‌ ಕಳೆದಿವೆ.
ಆನಂದಸಿಂಗ್ ನೂತನ ಜಿಲ್ಲೆಯಾಗಲಿ ಎಂಬ ಅಪೇಕ್ಷೆಯಿದೆ.ಈ ಬಗ್ಗೆ ನಮ್ಮ ತಕರಾರು ಏನು ಇಲ್ಲ. ಆ ಕುರಿತಾದ ತೀರ್ಮಾನವನ್ನ ಸಿಎಂ ಕೈಗೊಳ್ಳಲಿದ್ದಾರೆ ಎಂದ್ರು.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:KN_BLY_2_MINISTER_CT_RAVI_BYTE_VSL_7203310

KN_BLY_2a_MINISTER_CT_RAVI_BYTE_VSL_7203310

KN_BLY_2b_MINISTER_CT_RAVI_BYTE_VSL_7203310

KN_BLY_2c_MINISTER_CT_RAVI_BYTE_VSL_7203310
ETV Bharat Logo

Copyright © 2024 Ushodaya Enterprises Pvt. Ltd., All Rights Reserved.