ETV Bharat / state

ಬಳ್ಳಾರಿ: ಕೃಷ್ಣ ಶಿಲೆಯಲ್ಲಿ ನಿರ್ಮಿಸಿದ ಅಪ್ಪು ಪ್ರತಿಮೆ ಅನಾವರಣ

author img

By

Published : Oct 27, 2022, 9:10 AM IST

Updated : Oct 27, 2022, 1:19 PM IST

ಅಪ್ಪು ಮರೆಯಾದ ಬಳಿಕ ಅವರ ನೆನಪು ಸಾಧನೆಗಳನ್ನು ಅಜರಾಮರಗೊಳಿಸಲು ಕಪ್ಪು ಶಿಲೆಯಲ್ಲಿ ಪ್ರತಿಮೆಯನ್ನು ನಿರ್ಮಿಸಲಾಗಿದೆ. ಜಿಆರ್​ಆರ್ ಡೆವಲಪರ್ ಮುಖ್ಯಸ್ಥ ಸುನೀಲ್ ಕುಮಾರ್ ನಿರ್ಮಿಸಿರುವ ಅಪ್ಪು ಹೆಸರಿನ ಪಾರ್ಕ್​ನಲ್ಲಿ ಪುನೀತ್​ ಪ್ರತಿಮೆ ಈಗ ಎಲ್ಲರ ಆಕರ್ಷಣೆಯ ಕೇಂದ್ರವಾಗಿದೆ.

appu-idol-made-in-krishna-stone-is-unveiled
ಕೃಷ್ಣ ಶಿಲೆಯಲ್ಲಿ ನಿರ್ಮಿಸಿದ ಅಪ್ಪು ಪ್ರತಿಮೆ ಅನಾವರಣ

ಬಳ್ಳಾರಿ: ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ಅಕಾಲಿಕ ಮರಣ ಅಭಿಮಾನಿಗಳಿಗೆ ಇನ್ನೂ ಅರಗಿಸಿಕೊಳ್ಳೋಕೆ ಆಗುತ್ತಿಲ್ಲ. ಅವರು ಮೃತಪಟ್ಟು ವರ್ಷ ಕಳೆಯುತ್ತಾ ಬಂದಿದೆ. ಅಪ್ಪು ಕಣ್ಮರೆಯಾದರು ಪುನೀತ್​ ರಾಜಕುಮಾರ್​ ಇನ್ನೂ ಅಭಿಮಾನಿಗಳ ಮನಸ್ಸಿನಿಂದ ಮಾಸಿಲ್ಲ. ಅಪ್ಪು ಇನ್ನಿಲ್ಲವಾದರೂ ತಮ್ಮ ನೆಚ್ಚಿನ ನಟ ಹಾಕಿಕೊಟ್ಟ ಮಾರ್ಗದಲ್ಲಿ ಅಭಿಮಾನಿಗಳು ನಡೆಯುತ್ತಿದ್ದಾರೆ.

ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ನಮ್ಮೊಂದಿಗೆ ಇಲ್ಲದಿದ್ದರೂ ಕೂಡ ಅವರು ಮಾಡಿರುವ ಸಮಾಜಮುಖಿ ಕೆಲಸಗಳು ಎಂದಿಗೂ ಜೀವಂತವಾಗಿದೆ. ಅಪ್ಪು ಮರೆಯಾದ ಬಳಿಕ ಗಣಿ ನಾಡು ಬಳ್ಳಾರಿಯಲ್ಲಿ ಕೃಷ್ಣ ಶಿಲೆಯಲ್ಲಿ ಅವರ ಅದ್ಬುತವಾದ ಪ್ರತಿಮೆ ಹಾಗೂ ಉದ್ಯಾನವನ ನಿರ್ಮಾಣವಾಗಿದೆ. ಬಳ್ಳಾರಿಯ ತಾಳೂರ ರಸ್ತೆಯ ಕುರುವಳ್ಳಿ ಎನ್ ಕ್ಲೈವ್​ನಲ್ಲಿ ಸ್ಥಾಪನೆ ಮಾಡಿರುವ ಅಪ್ಪು ಪ್ರತಿಮೆ ಅನಾವರಣಗೊಂಡಿದೆ.

ಕೃಷ್ಣ ಶಿಲೆಯಲ್ಲಿ ನಿರ್ಮಿಸಿದ ಅಪ್ಪು ಪ್ರತಿಮೆ ಅನಾವರಣ

ಪುನೀತ್​ ರಾಜಕುಮಾರ್​ ಪ್ರತಿಮೆಯನ್ನು ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಲೋಕಾರ್ಪಣೆ ಮಾಡಿದ್ದಾರೆ. ಈ ವೇಳೆ, ಪುನೀತ ರಾಜಕುಮಾರ್ ಅವರನ್ನು ನೆನಪಿಸಿಕೊಂಡು ಬಾವುಕರಾದ ರೆಡ್ಡಿ, ಅಪ್ಪು ಜೊತೆಗೆ ತಮ್ಮಗಿದ್ದ ಒಡನಾಟ ವಿವರಿಸಿದರು. ಪುನೀತ್ ರಾಜಕುಮಾರ್ ಮೈಸೂರಿನಲ್ಲಿ ನಡೆಸುತ್ತಿರುವ ಶಕ್ತಿಧಾಮದ ಶಾಖೆಯನ್ನು ಬಳ್ಳಾರಿಯಲ್ಲೂ ಆರಂಭಿಸುವುದಾಗಿ ಘೋಷಣೆ ಮಾಡಿದ್ದರು. ಕೆಎಂಎಫ್ ರಾಯಭಾರಿಯಾಗಿದ್ದ ಅಪ್ಪುವಿನ ಸರಳತೆ ಗುಣಗಾನ ಮಾಡಿದ ಶಾಸಕ ಸೋಮಶೇಖರ ರೆಡ್ಡಿ ಅಪ್ಪು ನಮ್ಮಗೆಲ್ಲರಿಗೂ ಆದರ್ಶವಾಗಿದ್ದಾರೆ ಎಂದು ಸ್ಮರಿಸಿದರು.

ಯುವರತ್ನ ಪವರ್ ಸ್ಟಾರ್ ಪುನೀತ್ ರಾಜ್‍ ನಮ್ಮೊಂದಿಗೆ ಇಲ್ಲದಿದ್ದರೂ ಅವರು ಮಾಡಿರುವ ಸಮಾಜಮುಖಿ ಕೆಲಸಗಳು ಮಾದರಿಯಾಗಿವೆ. ಅಪ್ಪು ಮರೆಯಾದ ಬಳಿಕ ಅವರ ನೆನಪು ಸಾಧನೆಗಳನ್ನು ಅಜರಾಮರಗೊಳಿಸಲು ಕಪ್ಪು ಶಿಲೆಯಲ್ಲಿ ಪ್ರತಿಮೆಯನ್ನು ನಿರ್ಮಿಸಲಾಗಿದೆ. ಜಿಆರ್​ಆರ್ ಡೆವಲಪರ್ ಮುಖ್ಯಸ್ಥ ಸುನೀಲ್ ಕುಮಾರ್ ನಿರ್ಮಿಸಿರುವ ಅಪ್ಪು ಹೆಸರಿನ ಪಾರ್ಕ್​ನಲ್ಲಿ ಪುನೀತ್​ ಪ್ರತಿಮೆ ಈಗ ಎಲ್ಲರ ಆಕರ್ಷಣೆಯ ಕೇಂದ್ರವಾಗಿದೆ.

6.50 ಅಡಿ ಎತ್ತರದ ಕೃಷ್ಣ ಶಿಲೆಯಲ್ಲಿ ನಿರ್ಮಿಸಿರುವ ಪುನೀತ್​ ಪ್ರತಿಮೆ ಮುಂದೆ ಅಭಿಮಾನಿಗಳು ಸ್ಥಳೀಯರು ಸೆಲ್ಫಿ ಪೋಟೋ ತಗೆದುಕೊಂಡು ಸಂಭ್ರಮಿಸುತ್ತಿದ್ದಾರೆ. ಅಪ್ಪುವನ್ನು ಹತ್ತಿರದಿಂದ ನೋಡಲಾಗದಿದ್ದರೂ ಪುನೀತ್​ ಪ್ರತಿಮೆ ನೋಡಿ ಅಭಿಮಾನಿಗಳು ಅಪ್ಪು ಸ್ಮರಿಸುತ್ತಿದ್ದಾರೆ.

ಪುನೀತ್ ರಾಜ್‍ಕುಮಾರ್ ನಮ್ಮೊಂದಿಗೆ ಇಲ್ಲದಿದ್ದರೂ ಅವರ ಮೇಲಿನ ಅಭಿಮಾನ ಪ್ರೀತಿ ಗೌರವ ಇನ್ನೂ ಅಭಿಮಾನಿಗಳ ಮನಸ್ಸಿನಿಂದ ಮಾಸಿಲ್ಲ. ಅದಕ್ಕಾಗಿ ಹಳ್ಳಿ ಹಳ್ಳಿ ಊರು ಊರುಗಳಲ್ಲಿ ಪುನೀತ್​ ಪ್ರತಿಮೆ ಅನಾವರಣಗೊಳ್ಳುತ್ತಿವೆ. ಇದೇ ಅಲ್ವೆ ಅಭಿಮಾನ ಅಂದ್ರೆ.. ಅಪ್ಪು ಸಾಧನೆ ಅಭಿಮಾನಿಗಳ ಪ್ರೇರಣೆ ಆಗಿದೆ ಅನ್ನೋದಕ್ಕೆ ಇದೇ ಸಾಕ್ಷಿ ಎನ್ನಬಹುದು.

ಇದನ್ನೂ ಓದಿ: ಎಲ್ಲರೂ 'ಗಂಧದ ಗುಡಿ' ವೀಕ್ಷಿಸಿ, ಪುನೀತ್ ಪರಂಪರೆ ಮುಂದುವರೆಯಲಿ: ಅಮಿತ್ ಮಿಶ್ರಾ

Last Updated : Oct 27, 2022, 1:19 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.