ETV Bharat / state

ರಾಜ್ಯದಲ್ಲಿ ಮೊಟ್ಟಮೊದಲ ಬಾರಿಗೆ ಆಂಧ್ರಪ್ರದೇಶದ ಆನಂದಯ್ಯ ಆಯುರ್ವೇದಿಕ್ ಔಷಧ ವಿತರಣೆ

author img

By

Published : Jun 26, 2021, 7:39 PM IST

Updated : Jun 28, 2021, 8:15 AM IST

ಗೋವಿಂದಾನಂದ ಸ್ವರಸ್ವತಿ ಸ್ವಾಮೀಜಿ ಅವರ ನೇತೃತ್ವದಲ್ಲಿ 5 ಲಕ್ಷ ರೂ. ಮೌಲ್ಯದ ಆನಂದಯ್ಯ ಆಯುರ್ವೇದಿಕ್ ಔಷಧ ಪಾಕೇಟ್​ಗಳನ್ನು 500 ಜನರಿಗೆ ವಿತರಣೆ ಮಾಡಲಾಯಿತು

Anandya Ayurvedic medicine distribution
ಆನಂದಯ್ಯ ಆಯುರ್ವೇದಿಕ್ ಔಷಧಿ ವಿತರಣೆ

ಹೊಸಪೇಟೆ: ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಆಂಧ್ರಪ್ರದೇಶದ ಆನಂದಯ್ಯ ಆಯುರ್ವೇದಿಕ್ ಔಷಧವನ್ನು ತಾಲೂಕಿನ ಕಮಲಾಪುರದ ನಗರೇಶ್ವರ ಆಂಜನೇಯ ದೇವಸ್ಥಾನದಲ್ಲಿ ಇಂದು ಸಂಜೆ ಉಚಿತವಾಗಿ ವಿತರಣೆ ಮಾಡಲಾಯಿತು.

ಹೊಸ ಹಂಪಿಯ ಗೋವಿಂದಾನಂದ ಸ್ವರಸ್ವತಿ ಸ್ವಾಮೀಜಿ ಅವರ ನೇತೃತ್ವದಲ್ಲಿ 5 ಲಕ್ಷ ರೂ. ಮೌಲ್ಯದ ಔಷಧ ಪಾಕೇಟ್​ಗಳನ್ನು 500 ಜನರಿಗೆ ವಿತರಣೆ ಮಾಡಲಾಯಿತು.

ಗೋವಿಂದಾನಂದ ಸ್ವರಸ್ವತಿ ಸ್ವಾಮೀಜಿ

ಬಳಿಕ ಮಾತನಾಡಿದ ಸ್ವಾಮೀಜಿಯವರು, ಈ ಆಯುರ್ವೇದಿಕ್ ಔಷಧ ಪರಿಣಾಮಕಾರಿಯಾಗಿದೆ. ಹಾಗಾಗಿ ವಿತರಣೆ ಮಾಡಲಾಗುತ್ತದೆ. ಅದು ಕೂಡ ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಹಂಪಿ ಕ್ಷೇತ್ರದಲ್ಲಿ ವಿತರಣೆ‌ ಮಾಡಲಾಗುತ್ತಿದೆ ಎಂದರು.

ಇದನ್ನೂ ಓದಿ: ಆದಿಚುಂಚನಗಿರಿ ಮಠಕ್ಕೆ ಭೇಟಿ : ನಿರ್ಮಲಾನಂದನಾಥ ಶ್ರೀಗಳ ಜೊತೆ ಸಿ ಟಿ ರವಿ ರಹಸ್ಯ ಸಮಾಲೋಚನೆ

ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಕೃಷ್ಣಪಟ್ಟಣಂ ನಾಟಿ ವೈದ್ಯ ಆನಂದಯ್ಯ ಅವರು ಇದನ್ನು ಕಂಡು ಹಿಡಿದ್ದಾರೆ. ಈ ಔಷಧವು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲಿದೆ. ಕೊರೊನಾ ರೋಗಿಗಳಿಗೆ ಈ ಔಷಧವನ್ನು ಪ್ರಯೋಗ ಮಾಡಲಾಗಿದೆ. ಅವರಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಆಯುರ್ವೇದಿಕ್ ಗಿಡಮೂಲಿಕೆಯಿಂದ ತಯಾರಿಸಲಾಗಿದೆ ಎಂದು ಹೇಳಿದರು.

Last Updated : Jun 28, 2021, 8:15 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.