ETV Bharat / state

ಕಾಂಗ್ರೆಸ್ ಮಾಜಿ ಶಾಸಕರು ಬಿಜೆಪಿಗೆ ಹೋದ್ಮೇಲೆ ಕೆಸರಿನಲ್ಲಿ ಬಿದ್ದ ಕಲ್ಲಿನಂತಾಗಿದ್ದಾರೆ: ಸಚಿವ ಬಿ ನಾಗೇಂದ್ರ

author img

By

Published : Jun 27, 2023, 7:18 PM IST

''ಕಾಂಗ್ರೆಸ್ ಶಾಸಕರು ಬಿಜೆಪಿಗೆ ಹೋದ ಮೇಲೆ ಕೆಸರಿನಲ್ಲಿ ಬಿದ್ದ ಕಲ್ಲಿನಂತಾಗಿದ್ದಾರೆ'' ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ ನಾಗೇಂದ್ರ ಹೇಳಿದರು.

MLA B Nagendra
ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ

ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಮಾತನಾಡಿದರು.

ಬಳ್ಳಾರಿ: ಆಪರೇಷನ್ ಕಮಲದಿಂದಲೇ ಬಿಜೆಪಿ ಸೋಲು ಅಂತಾ ಮಾಜಿ ಸಚಿವ ಕೆ ಎಸ್​ ಈಶ್ವರಪ್ಪ ಹೇಳಿಕೆ ನೀಡಿರುವುದಕ್ಕೆ ಸಂಬಂಧಿಸಿದಂತೆ ಜಿಲ್ಲಾ ಉಸ್ತುವಾರಿ ಸಚಿವ ಬಿ. ನಾಗೇಂದ್ರ ಪ್ರತಿಕ್ರಿಯೆ ನೀಡಿದರು. ''ಕೆ.ಎಸ್. ಈಶ್ವರಪ್ಪನವರು ಬಿಜೆಪಿ ಆಂತರಿಕ ವಿಚಾರವನ್ನು ಹೊರಗೆ ಹಾಕಿದ್ದಾರೆ. ಅವರ ಪಕ್ಷದಲ್ಲಿ ಒಳಗೆ ಏನು ನಡೆಯುತ್ತದೆ ಎಂಬುದನ್ನು ಈಶ್ವರಪ್ಪನವರು ಸರಿಯಾಗಿ ಹೇಳಿದ್ದಾರೆ. ವಲಸಿಗ ಶಾಸಕರು ನಮ್ಮ ಪಕ್ಷದಲ್ಲಿದ್ದಾಗ ವಜ್ರದಂತೆ ಇದ್ದರು. ನಂತರ, ಅವರು ಕೇಸರಿನಲ್ಲಿ ಬಿದ್ದು ಮೌಲ್ಯವನ್ನು ಕಳೆದುಕೊಂಡಿದ್ದಾರೆ ಎಂದು ಹೇಳಿದರು.

''ಕಾಂಗ್ರೆಸ್ ಶಾಸಕರು ಬಿಜೆಪಿಗೆ ಹೋದ ಮೇಲೆ ಕೆಸರಿನಲ್ಲಿ ಬಿದ್ದ ಕಲ್ಲಿನಂತಾಗಿದ್ದಾರೆ. ಬಿಜೆಪಿಗೆ ಹೋದ ಮೇಲೆ ವಜ್ರದಂತಹ ಮೌಲ್ಯವನ್ನು ಅವರು ಕಳೆದುಕೊಂಡರು'' ಎಂದ ಅವರು, ''ನಮ್ಮ ಪಕ್ಷದ ಸಿದ್ಧಾಂತಗಳನ್ನು ಮೆಚ್ಚಿಕೊಂಡು ತತ್ವ ಸಿದ್ಧಾಂತಗಳನ್ನು ಒಪ್ಪಿಕೊಂಡು ಪಕ್ಷಕ್ಕೆ ಬಂದರೆ ಸ್ವಾಗತ'' ಎಂದರು. ''ರಾಜ್ಯ ಹಾಗೂ ಕೇಂದ್ರ ನಾಯಕರು ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕೆ ಅಥವಾ ಬೇಡವೆನ್ನುವ ಬಗ್ಗೆ ತೀರ್ಮಾನ ಮಾಡುತ್ತಾರೆ. 2024ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ 28ಕ್ಕೆ 28 ಕ್ಷೇತ್ರಗಳಲ್ಲೂ ಗೆಲ್ಲಲಿದೆ'' ಎಂಬ ವಿಶ್ವಾಸ ವ್ಯಕ್ತಪಡಿಸಿದರು.

''ನಾವು ಪ್ರಣಾಳಿಕೆಯಲ್ಲಿ ಕೊಟ್ಟ ಎಲ್ಲ ಭರವಸೆಗಳನ್ನು ಈಡೇರಿಸುತ್ತೇವೆ. ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಕ್ಷೇತ್ರಗಳಿಂದ ಯಾರು ಸ್ಪರ್ಧೆ ಮಾಡಬೇಕು ಎಂಬುದನ್ನು ಪಕ್ಷದ ನಾಯಕರು ತೀರ್ಮಾನ ಮಾಡಲಿದ್ದಾರೆ ಎಂದು ಅವರು, ನನ್ನ ಸಹೋದರ ವೆಂಕಟೇಶ ಪ್ರಸಾದ್ ಸ್ಪರ್ಧೆ ಮಾಡಲ್ಲ. ಅವರು ಟಿಕೆಟ್ ಆಕ್ಷಾಂಕಿಯಲ್ಲ. ನಮ್ಮ ಕುಟುಂಬದಿಂದ ಮತ್ತೆ ಯಾರು ಸ್ಪರ್ಧೆ ಮಾಡಲ್ಲ ಎಂದು ಸ್ಪಷ್ಟಪಡಿಸಿದರು. ಸಿರುಗುಪ್ಪ ಶಾಸಕ ಬಿ.ಎಂ. ನಾಗರಾಜ, ಕಾಂಗ್ರೆಸ್ ಮುಖಂಡ ರಾಂಪ್ರಸಾದ್, ಜೆರಾಲ್ಡ್ ಜೆರಿ, ಮುದಿಮಲ್ಲಯ್ಯ, ಬೆಣಕಲ್ ಸುರೇಶ್ ಸೇರಿದಂತೆ ಇತರರು ಇದ್ದರು.

ಬಿಜೆಪಿ ಪಕ್ಷದಲ್ಲಿನ ಅಶಿಸ್ತಿಗೆ ವಲಸಿಗರೇ ಕಾರಣ- ಕೆ.ಎಸ್​. ಈಶ್ವರಪ್ಪ: ಬಹಿರಂಗವಾಗಿ ಅಡ್ಜಸ್ಟ್‌ಮೆಂಟ್ ರಾಜಕಾರಣದ ಕುರಿತು ಚರ್ಚೆ ಆಗುತ್ತಿರುವುದು ದುರ್ದೈವದ ಸಂಗತಿ. ಬಹಿರಂಗವಾಗಿ ಹೀಗೆ ಯಾರೂ ಕೂಡ ಮಾತಾಡಬಾರದು. ಇದನ್ನು ನಾಲ್ಕು ಗೋಡೆಗಳ ನಡುವೆ ಮಾತಾಡಬೇಕು. ಬಿಜೆಪಿ ಪಕ್ಷದಲ್ಲಿ ಅಶಿಸ್ತು ಬರಲು ಪ್ರಮುಖ ಕಾರಣ ವಲಸಿಗರು. ಕಾಂಗ್ರೆಸ್ ಗಾಳಿ ನಮ್ಮ ಪಕ್ಷದ ಮೇಲೂ ಬೀಸಿದೆ. ಕಾಂಗ್ರೆಸ್ ಪಕ್ಷದ ನಾಯಕರನ್ನು ಕರೆದುಕೊಂಡು ಬಂದಿದ್ದರಿಂದ ನಾವು ಇದನ್ನೆಲ್ಲವನ್ನು ಅನುಭವಿಸುತ್ತಿದ್ದೇವೆ ಎಂದು ಪರೋಕ್ಷವಾಗಿ ಆಪರೇಷನ್ ಕಮಲದ ವಿರುದ್ಧ ಬಿಜೆಪಿ ಹಿರಿಯ ನಾಯಕ ಕೆ. ಎಸ್. ಈಶ್ವರಪ್ಪ ಅಸಮಾಧಾನ ವ್ಯಕ್ತಪಡಿಸಿದ್ದರು.

ನಗರದಲ್ಲಿ ಸೋಮವಾರ ನಡೆದಿದ್ದ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ್ದ ಅವರು, ''ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಸೋಲಿನ ಬಳಿಕ ಕಾರ್ಯಕರ್ತರು ನಿರಾಶೆಯಲ್ಲಿ ಇದ್ದಾರೆ. ಇದರಿಂದ ರಾಜ್ಯಾದ್ಯಂತ ಏಳು ತಂಡಗಳಲ್ಲಿ ಪ್ರವಾಸ ಕೈಗೊಳ್ಳುವ ಮೂಲಕ ಉತ್ಸಾಹ ತುಂಬುವ ಕಾರ್ಯಕೈಗೊಳ್ಳಲಾಗುತ್ತಿದೆ. ಲೋಕಸಭೆ ಚುನಾವಣೆಗೆ ಬಿಜೆಪಿಯಿಂದ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗುತ್ತದೆ ಎಂದು ಕೆ.ಎಸ್. ಈಶ್ವರಪ್ಪ ಹೇಳಿದ್ದರು.

ಇದನ್ನೂ ಓದಿ: ಹಿಂದಿನ ಸರ್ಕಾರದ ಎಲ್ಲಾ ಅವ್ಯವಹಾರ ತನಿಖೆ ಮಾಡಿಸುತ್ತೇವೆ.. ₹ 60 ಸಾವಿರ ಕೋಟಿ ಹೊರೆಯಾದ್ರೂ ಗ್ಯಾರಂಟಿ ಯೋಜನೆ ಜಾರಿಗೆ ಬದ್ಧ: ಸಿಎಂ ಸಿದ್ದರಾಮಯ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.