ಇಂಜೆಕ್ಷನ್ ಪಡೆದ ಸ್ವಲ್ಪಹೊತ್ತಲ್ಲೇ ಮಹಿಳೆ ಸಾವು; ಆಸ್ಪತ್ರೆ ವಿರುದ್ಧ ಸಂಬಂಧಿಕರ ಆಕ್ರೋಶ

author img

By

Published : Oct 1, 2021, 6:01 PM IST

Updated : Oct 1, 2021, 6:07 PM IST

A  woman died after get injection in govt hospital
ಮೈ ಕೈ ನೋವು, ಜ್ವರ ಎಂದು ಆಸ್ಪತ್ರೆಗೆ ಹೋದ ಮಹಿಳೆಗೆ ಇಂಜೆಕ್ಷನ್ ()

ಆರೋಗ್ಯ ಸಿಬ್ಬಂದಿ ಇಂಜೆಕ್ಷನ್ ನೀಡಿದ ಅರ್ಧಗಂಟೆಯಲ್ಲೇ ಮಹಿಳೆ ಸಾವಿಗೀಡಾಗಿದ್ದಾರೆ. ಆಸ್ಪತ್ರೆ ಸಿಬ್ಬಂದಿಯ ಅಜಾಗರೂಕತೆಯೇ ಘಟನೆಗೆ ಕಾರಣ ಎಂದು ಮಹಿಳೆಯ ಪೋಷಕರು ಆಕ್ರೋಶ ವ್ಯಕ್ತಪಡಿಸಿದರು.

ಹೊಸಪೇಟೆ(ವಿಜಯನಗರ): ಆರೋಗ್ಯ ಸಿಬ್ಬಂದಿ ಇಂಜೆಕ್ಷನ್ ನೀಡಿದ ಅರ್ಧಗಂಟೆಯಲ್ಲೇ ಮಹಿಳೆ ಮೃತಪಟ್ಟಿರುವ ಘಟನೆ ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿಯ ಸರ್ಕಾರಿ ಆಸ್ಪತ್ರೆಯಲ್ಲಿ ಜರುಗಿದೆ.

ಶಾಂತಮ್ಮ (55) ಸಾವನ್ನಪ್ಪಿದ ಮಹಿಳೆ. ಶಾಂತಮ್ಮ ಮೈಕೈ ನೋವು, ಜ್ವರ ಎಂದು ಸರ್ಕಾರಿ ಆಸ್ಪತ್ರೆಗೆ ಬಂದಿದ್ದರು. ವೈದ್ಯರು ಪರೀಕ್ಷೆ ಮಾಡಿ ರಕ್ತ ಪರೀಕ್ಷೆ ಮಾಡಿಸಿಕೊಂಡು ಬನ್ನಿ ಎಂದು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಆರೋಗ್ಯ ಸಿಬ್ಬಂದಿ ಶಾಂತಮ್ಮಗೆ ಇಂಜೆಕ್ಷನ್ ನೀಡಿದ್ದಾರೆ. ಇದಾದ ಬಳಿಕ ಅರ್ಧಗಂಟೆಯಲ್ಲಿಯೇ ಅವರು ನಾಲಿಗೆ ಕಚ್ಚಿಕೊಂಡು ಮೃತಪಟ್ಟಿದ್ದಾರೆ. ಆರೋಗ್ಯ ಸಿಬ್ಬಂದಿಯ ಯಡವಟ್ಟಿನಿಂದ ಮಹಿಳೆ ಸಾವಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಇಂಜೆಕ್ಷನ್ ಪಡೆದ ಸ್ವಲ್ಪಹೊತ್ತಲ್ಲೇ ಮಹಿಳೆ ಸಾವು

'ನಾಲಿಗೆ ಕಚ್ಚಿ ಒದ್ದಾಡಿ ಜೀವ ಬಿಟ್ಟಾಳ್ರೀ. ಕಣ್ಣಮುಂದೆ ಜೀವ ತೆಗೆದ್ರಲ್ಲೋ..' ಎಂದು ತಾಯಿ ಮೃತದೇಹದ ಮುಂದೆ ಮಗಳು ಅತ್ತು ಗೊಗರೆದರು.

'ಮಹಿಳೆ ಸಾವು ಇಂಜೆಕ್ಷನ್ ರಿಯಾಕ್ಷನ್‌ನಿಂದ ಕೂಡ ಆಗಿರಬಹುದು ಅಥವಾ ಹಾರ್ಟ್ ಅಟ್ಯಾಕ್‌ನಿಂದಲೂ ಆಗಿರಬಹುದು. ರಿಪೋರ್ಟ್ ಬಂದ ನಂತರ ಮಾಹಿತಿ ಸಿಗುತ್ತೆ' ಎಂದು ವೈದ್ಯರು ತಿಳಿಸಿದರು.

Last Updated :Oct 1, 2021, 6:07 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.