ETV Bharat / state

ಹಳ್ಳದ ನೀರಿನಲ್ಲಿ ಕೊಚ್ಚಿ ಹೋದ ಹೊಸಪೇಟೆಯ ದಂಪತಿ: ಪತಿ ಮೃತದೇಹ ಪತ್ತೆ, ಪತ್ನಿಗಾಗಿ ಶೋಧ

author img

By

Published : Jul 7, 2021, 9:20 AM IST

ವಿಜಯನಗರ ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಹಳ್ಳಗಳೆಲ್ಲ ತುಂಬಿದ್ದು, ನಿನ್ನೆ ಹಳ್ಳ ದಾಟುವಾಗ ಮಳೆಯ ನೀರಿನಿಂದ ದಂಪತಿ ಕೊಚ್ಚಿ ಹೋಗಿದ್ದಾರೆ.

A couple washed away from lake water
ಹಳ್ಳದ ನೀರಿನಲ್ಲಿ ಕೊಚ್ಚಿ ಹೋದ ದಂಪತಿ

ಹೊಸಪೇಟೆ: ಭಾರಿ ಮಳೆಯಿಂದ ಹಳ್ಳ ತುಂಬಿ ನೀರಿನ ರಭಸಕ್ಕೆ ದಂಪತಿ ಕೊಚ್ಚಿ ಹೋಗಿರುವ ಘಟನೆ ವಿಜಯನಗರ ‌ಜಿಲ್ಲೆಯ ಹೂವಿನಹಡಗಲಿಯ ತಾಲೂಕಿನ ಪೂರ್ವ ಮತ್ತು ಪಶ್ಚಿಮ ಕಾಲ್ವಿ ಗ್ರಾಮಗಳ ಬಳಿಯ ಹಳ್ಳದಲ್ಲಿ ಸಂಭವಿಸಿದೆ.

ಮಹಿಳೆಯ ಮೃತದೇಹದ ಶೋಧ ಕಾರ್ಯ

ನೀರಿನಲ್ಲಿ ಕೊಚ್ಚಿ ಹೋದವರನ್ನು ಮಲ್ಲಿಕಾರ್ಜುನ (55) ಎಂದು ಗುರುತಿಸಲಾಗಿದೆ. ದಂಪತಿ ಹಗರಿಬೊಮ್ಮನಹಳ್ಳಿಯ ತಾಲೂಕಿನ ತಂಬ್ರಹಳ್ಳಿ- ಮುತ್ಕೂರು ಗ್ರಾಮದ ನಿವಾಸಿಗಳಾಗಿದ್ದು, ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ತಳಕಲ್​​​ಗೆ ಹೋಗಿ ವಾಪಸ್ ಬರುವಾಗ ಈ ದುರ್ಘಟನೆ ನಡೆದಿದೆ.

A couple washed away from lake water at Hospet
ಮೃತ ವ್ಯಕ್ತಿ

ಬೆಳಗ್ಗೆ ವ್ಯಕ್ತಿಯ ಮೃತದೇಹ ಪತ್ತೆಯಾಗಿದ್ದು, ಮಹಿಳೆಗಾಗಿ ಹುಡುಕಾಟ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.