ETV Bharat / state

ಕೃಷಿ ಹೊಂಡಕ್ಕೆ ಬಿದ್ದು ಇಬ್ಬರು ಮಕ್ಕಳು ದುರ್ಮರಣ..

author img

By

Published : Mar 22, 2023, 11:03 PM IST

ಕೃಷಿ ಹೊಂಡಕ್ಕೆ ಬಿದ್ದು ಇಬ್ಬರು ಮಕ್ಕಳು ದುರ್ಮರಣ ಹೊಂದಿರುವ ಘಟನೆ ಅಥಣಿ ತಾಲೂಕಿನ ಸಪ್ತಸಾಗರ ಗ್ರಾಮದಲ್ಲಿ ನಡೆದಿದೆ.

two-children-died-after-falling-into-a-farm-pit
ಕೃಷಿ ಹೊಂಡಕ್ಕೆ ಬಿದ್ದು ಇಬ್ಬರು ಮಕ್ಕಳು ದುರ್ಮರಣ..

ಚಿಕ್ಕೋಡಿ(ಬೆಳಗಾವಿ): ಕೃಷಿ ಹೊಂಡಕ್ಕೆ ಬಿದ್ದು ಇಬ್ಬರು ಮಕ್ಕಳು ದುರ್ಮರಣ ಹೊಂದಿರುವ ಘಟನೆ ಅಥಣಿ ತಾಲೂಕಿನ ಸಪ್ತಸಾಗರ ಗ್ರಾಮದಲ್ಲಿ ನಡೆದಿದೆ. ಶ್ರೀಧರ್ ಪಾರಿಸ್ ಹೊಸೂರು (15), ಹರ್ಷಿತಾ ಶೀತಲ ಚಿಪ್ಪಾಡಿ (9) ಮೃತ ಮಕ್ಕಳು ಎಂದು ಗುರುತಿಸಲಾಗಿದೆ.

ಬುಧುವಾರ ಯುಗಾದಿ ಹಬ್ಬದ ಪ್ರಯುಕ್ತ ಮಕ್ಕಳು ಗ್ರಾಮದ ಹೊರವಲಯದಲ್ಲಿ ಇರುವ ದೇವರ ದರ್ಶನಕ್ಕೆ ಹೋಗಿದ್ದರು. ಈ ವೇಳೆ ದೇವಸ್ಥಾನದ ಆವರಣದಲ್ಲಿ ಕುಳಿತು ಊಟ ಮಾಡಿ, ಪ್ಲೇಟು ತೊಳೆಯಲು ಪಕ್ಕದ ಕೃಷಿ ಹೊಂಡಕ್ಕೆ ಹರ್ಷಿತಾ ಇಳಿದಾಗ ಕಾಲು ಜಾರಿ ಬಿದ್ದಿದ್ದಾಳೆ, ಇದನ್ನು ಗಮನಿಸಿದ ಸ್ನೇಹಿತ ಶ್ರೀಧರ್, ಹರ್ಷಿತಾಳನ್ನು ರಕ್ಷಿಸಲು ಮುಂದಾಗಿದ್ದಾನೆ. ಆದರೆ ಶ್ರೀಧರ್ ಕೂಡಾ ಕಾಲು ಜಾರಿ ಹೊಂಡದಲ್ಲಿ ಬಿದ್ದು ಮೃತಪಟ್ಟಿದ್ದಾನೆ. ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.

ಇದನ್ನೂ ಓದಿ: ಕೊಡಗು: ವಿವಾಹಿತೆ ಮೇಲೆ ಅತ್ಯಾಚಾರ ಯತ್ನ.. ಓರ್ವನ ಬಂಧನ, ಎರಡು ಆಟೋ ವಶ

ಕೃಷಿ ಹೊಂಡಕ್ಕೆ ಬಿದ್ದು ತಾಯಿ- ಮಗ ಮೃತಪಟ್ಟಿದ್ದರು: ದೊಡ್ಡಬಳ್ಳಾಪುರ ತಾಲೂಕಿನ ಕಸಬಾ ಹೋಬಳಿ ಕೋಳೂರಿನಲ್ಲಿ ಕೃಷಿ ಹೊಂಡಕ್ಕೆ ತಾಯಿ-ಮಗ ಬಿದ್ದು ಮೃತಪಟ್ಟಿದ್ದ ದಾರುಣ ಘಟನೆ ಕಳೆದ ತಿಂಗಳು ನಡೆದಿತ್ತು. ಘಟನೆಯಲ್ಲಿ ಕೋಳೂರು ನಿವಾಸಿಗಳಾದ ರೂಪ (35), ಹೇಮಂತ್ (9) ಮೃತಪಟ್ಟಿದ್ದರು. ಕೋಳೂರಿನ ಕೃಷಿ ಹೊಂಡದ ಬಳಿ ಜಾನುವಾರು ಮೇಯಿಸುತ್ತಿದ್ದಾಗ ಈ ಅವಘಡ ಸಂಭವಿಸಿತ್ತು. 9 ವರ್ಷದ ಹೇಮಂತ್ ಕೃಷಿ ಹೊಂಡದ ಬಳಿ ಆಟವಾಡುವಾಗ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದಿದ್ದ. ಮಗನನ್ನು ರಕ್ಷಿಸಲು ಹೋದ ತಾಯಿ ಕೂಡ ಕೃಷಿ ಹೊಂಡಕ್ಕೆ ಬಿದ್ದು ಮೃತಪಟ್ಟಿದ್ದರು.

ನೀರು ಕುಡಿಯಲು ಹೋಗಿ ಕೃಷಿ ಹೊಂಡಕ್ಕೆ ಜಾರಿ ಬಿದ್ದು ಸಹೋದರರು ಮೃತಪಟ್ಟಿದ್ದರು: ನೀರು ಕುಡಿಯಲು ಕೃಷಿ ಹೊಂಡಕ್ಕೆ ಇಳಿದಿದ್ದ ಇಬ್ಬರು ಸಹೋದರರು ಹೊಂಡದಲ್ಲಿ ಮುಳುಗಿ ಸಾವನ್ನಪ್ಪಿದ್ದ ಹೃದಯ ವಿದ್ರಾವಕ ಘಟನೆ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಹುಣಶ್ಯಾಳ ಪಿ.ಬಿ.ಗ್ರಾಮದಲ್ಲಿ ನಡೆದಿತ್ತು. ರಾಯಪ್ಪ ಬಸವರಾಜ ಒಣಕಿಹಾಳ (12) ಹಾಗೂ ಮಹಾಲಿಂಗರಾಯ ಬಸವರಾಜ ಒಣಕಿಹಾಳ (7) ಮೃತಪಟ್ಟಿದ್ದರು. ಹುಣಶ್ಯಾಳ ಪಿ.ಬಿ.ಗ್ರಾಮದ ಪ್ರಾಥಮಿಕ ಶಾಲೆಗೆ ಹೋಗಿ ಮಧ್ಯಾಹ್ನವೇ ಮನೆಗೆ ಆಗಮಿಸಿ ಜಾನುವಾರು ಕಾಯಲು ವ್ಯಕ್ತಿಯೊಬ್ಬರ ಜಮೀನಿಗೆ ಮಕ್ಕಳು ಹೋಗಿದ್ದರು.

ಈ ವೇಳೆ ನೀರು ಕುಡಿಯಲು ಇಬ್ಬರೂ ಕೃಷಿ ಹೊಂಡಕ್ಕೆ ಇಳಿದಿದ್ದರು. ಆಗ ಕಾಲು ಜಾರಿ ಹೊಂಡದಲ್ಲಿ ಬಿದ್ದಿದ್ದರಿಂದ ಕೂಗಾಡಿದ್ದರು. ದಾರಿ ಎತ್ತಿನ ಬಂಡಿಯಲ್ಲಿ ಹೋಗುತ್ತಿದ್ದವರು ತಕ್ಷಣ ಬಂದು ಕಾಪಾಡಲು ಪ್ರಯತ್ನಿಸಿದರೂ ಸಾಧ್ಯವಾಗಿರಲಿಲ್ಲ. ಮೃತರ ತಂದೆಗೆ ಒಟ್ಟು ಮೂವರು ಗಂಡು ಮಕ್ಕಳಿದ್ದು, ಮಕ್ಕಳ ಸಾವಿನಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

ದಾಖಲೆ ಇಲ್ಲದೆ ಸಾಗಿಸುತ್ತಿದ್ದ 9 ಲಕ್ಷ ನಗದು, 16 ಲಕ್ಷ ಸೀರೆ ವಶಕ್ಕೆ ಪಡೆದ ಪೊಲೀಸರು: ವಿಧಾನಸಭಾ ಚುನಾವಣೆ ಘೋಷಣೆಗೂ ಮುನ್ನವೇ ಅತ್ತ ಎಲ್ಲಾ ಪಕ್ಷಗಳ ರಾಜಕೀಯ ನಾಯಕರು ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ. ಇತ್ತ ಪೊಲೀಸರು ಸಹ ಅಖಾಡಕ್ಕೆ ಇಳಿದಿದ್ದು, ಇದೀಗ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಒಂಬತ್ತು ಲಕ್ಷ ರೂ. ನಗದು ಮತ್ತು ಮತದಾರರಿಗೆ ಹಂಚುವ ಸೀರೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬೆಳಗಾವಿ ನಗರದ ಹೊರ ವಲಯದ ಕಣಬರಗಿ ಚೆಕ್ ಪೋಸ್ಟ್​ ಬಳಿ ಅಕ್ರಮವಾಗಿ ಸಾಗಿಸುತ್ತಿದ್ದ ಹಣವನ್ನು ವಶಕ್ಕೆ ಪಡೆಯಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.