ETV Bharat / state

ಸದನ ಎಷ್ಟು ದಿನ ನಡೆಯುತ್ತೆ ಅನ್ನೋ ಕಾಮನ್ ಸೆನ್ಸ್ ಇಲ್ಲವೇ: ಅಧಿಕಾರಿಗಳ ವಿರುದ್ಧ ಸಭಾಪತಿ ಗರಂ

author img

By

Published : Dec 27, 2022, 2:14 PM IST

ಅಧಿಕಾರಿಗಳ ವಿರುದ್ಧ ಗರಂ ಆದ ಸಭಾಪತಿ ಬಸವರಾಜ ಹೊರಟ್ಟಿ - ಪ್ರಶ್ನೆಗೆ ಉತ್ತರ ನೀಡಲು 15 ದಿನಗಳ ಕಾಲಾವಕಾಶ ಕೇಳಿದ್ದಕ್ಕೆ ಕೋಪಗೊಂಡ ಸಭಾಪತಿ - ಅಬ್ದುಲ್ ಜಬ್ಬಾರ್ ಪ್ರಶ್ನೆ 15 ದಿನದ ಕಾಲಾವಕಾಶ ಕೇಳಿದ್ದ ಅಧಿಕಾರಿಗಳು.

speaker Basavaraj Horatti angry against the officers
ಅಧಿಕಾರಿಗಳ ವಿರುದ್ಧ ಸಭಾಪತಿ ಗರಂ

ಬೆಂಗಳೂರು: ಸದನ ಎಷ್ಟು ದಿನ ನಡೆಯಲಿದೆ ಎಂದು ಅಧಿಕಾರಿಗಳಿಗೆ ಗೊತ್ತಿಲ್ಲವೇ? ಅವರಿಗೆ ಕಾಮನ್ ಸೆನ್ಸ್ ಇಲ್ಲವಾ? ಇಂತಹ ವರ್ತನೆ ಸಹಿಸಲು ಇನ್ಮುಂದೆ ಸಾಧ್ಯವಿಲ್ಲ, ಅಧಿಕಾರಿಗಳು ಕೇಳಿದಂತೆ ಸಮಯ ಕೊಡಲು ಸಾಧ್ಯವಿಲ್ಲ ಎಂದು ಸಭಾಪತಿ ಬಸವರಾಜ ಹೊರಟ್ಟಿ ಸರ್ಕಾರದ ವಿರುದ್ಧ ಗರಂ ಆದರು.

ಪ್ರಶ್ನೋತ್ತರ ಕಲಾಪದ ವೇಳೆ ಕಾಂಗ್ರೆಸ್ ಸಚೇತಕ ಪ್ರಕಾಶ್ ರಾಥೋಡ್ ಕೇಳಿದ ಪ್ರಶ್ನೆಗೆ ಕೊನೆ ಕ್ಷಣದಲ್ಲಿ ಉತ್ತರ ನೀಡಲು 15 ದಿನ ಸಮಯ ಕೇಳಿ ಸಚಿವರು ಪತ್ರ ಕಳಿಸಿದ್ದರು. ಇದಕ್ಕೆ ಕೆರಳಿದ ಸಭಾಪತಿ ಹೊರಟ್ಟಿ. ಅಧಿವೇಶನ ಎಷ್ಟು ದಿನ ನಡೆಯಲಿದೆ ಎನ್ನುವ ಕಾಮನ್ ಸೆನ್ಸ್ ಅಧಿಕಾರಿಗಳಿಗೆ ಇಲ್ಲವಾ? ಇದು ಪದ್ದತಿಯಲ್ಲ, ಅಧಿಕಾರಿಗಳಿಗೆ ಹೇಳಿ ಬಿಗಿ ಮಾಡಿ ತಾಕೀತು ಮಾಡಿದರು.

ನಂತರ ಸದಸ್ಯ ಅಬ್ದುಲ್ ಜಬ್ಬಾರ್ ಪ್ರಶ್ನೆಗೂ 15 ದಿನದ ಕಾಲಾವಕಾಶದ ಪತ್ರ ಸಭಾಪತಿಗಳ ಮುಂದೆ ಬಂದಿತು. ಇದಕ್ಕೆ ಮತ್ತೆ ಕೆರಳಿದ ಸಭಾಪತಿ ಬಸವರಾಜ ಹೊರಟ್ಟಿ ಅಧಿಕಾರಿಗಳು ಮನಸ್ಸಿಗೆ ಬಂದಂತೆ ಸಮಯ ಕೇಳಿದರೆ ನಾನು ಒಪ್ಪಲ್ಲ ಎಂದು ಸದಸ್ಯರ ಪ್ರಶ್ನೆಗೆ ಹೆಚ್ಚಿನ ಕಾಲಾವಕಾಶ ಕೋರಿದ ಅಧಿಕಾರಿಗಳ ವಿರುದ್ಧ ಸಭಾಪತಿ ಕೆಂಡವಾದರು.

ಕಲಾಪ ಎಷ್ಟು ದಿನ ನಡೆಯುತ್ತೆ ಗೊತ್ತಿಲ್ಲವಾ?: ಸದಸ್ಯ ಅಬ್ದುಲ್ ಜಬ್ಬಾರ್ ಪ್ರಶ್ನೆಗೆ 15 ದಿನ ಸಮಯ ಕೇಳಿದ್ದಾರೆ. ಸದನ ಎಷ್ಟು ದಿನ ನಡೆಯಲಿದೆ. 15-20 ದಿನ ಮೊದಲೇ ಪ್ರಶ್ನೆ ಕಳುಹಿಸಿಕೊಟ್ಟಿದ್ದಾರೆ. ಆದರೂ 15 ದಿನ ಕಾಲಾವಕಾಶ ಈಗ ಯಾಕೆ ಕೇಳುತ್ತಾರೆ? ಮುಂದಿನ ಬಾರಿ ಈ ರೀತಿ ಆಗಬಾರದು, ಸಭೆ ಮುಗಿಯುವ ಒಳಗೆ ಕೊಡಬೇಕು, ಮನಸ್ಸಿಗೆ ಬಂದಂತೆ ಕೇಳಿದರೆ ನಾನೂ ಒಪ್ಪಲ್ಲ ಎಂದರು. ಸಭಾಪತಿ ಗರಂ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಸಭಾನಾಯಕ ಕೋಟಾ ಶ್ರೀನಿವಾಸ ಪೂಜಾರಿ ಸದನ ಮುಗಿಯುವುದರೊಳಗೆ ಕೊಡಿಸುವ ಭರವಸೆ ನೀಡಿದರು.

ಇದನ್ನೂ ಓದಿ: 8001.12 ಕೋಟಿ ರೂ. ಮೊತ್ತದ ಎರಡನೇ ಕಂತಿನ ಪೂರಕ ಅಂದಾಜು ವಿಧಾನಸಭೆಯಲ್ಲಿ ಮಂಡನೆ,

ETV Bharat Logo

Copyright © 2024 Ushodaya Enterprises Pvt. Ltd., All Rights Reserved.