ETV Bharat / state

ದಕ್ಷಿಣ ಭಾರತ ಜೈನ ಸಭೆಯ ಅಧ್ಯಕ್ಷರಾಗಿ ರಾವಸಾಹೇಬ ಪಾಟೀಲ ಪುನರಾಯ್ಕೆ

author img

By

Published : Feb 15, 2021, 11:02 AM IST

ಚಿಕ್ಕೋಡಿ ತಾಲೂಕಿನ ಬೊರಗಾಂವ್​ ಗ್ರಾಮದ ನಿವಾಸಿಯಾದ ರಾವಸಾಹೇಬ ಪಾಟೀಲ ದಕ್ಷಿಣ ಭಾರತ ಜೈನ ಸಭೆಯ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

Ravasaheb Patil
ರಾವಸಾಹೇಬ ಪಾಟೀಲ

ಚಿಕ್ಕೋಡಿ(ಬೆಳಗಾವಿ): ಅಲ್ಪಸಂಖ್ಯಾತರಲ್ಲಿ ಒಂದಾದ ಜೈನ ಸಮೂದಾಯವು ತನ್ನದೇ ಆದ ಪರಂಪರೆಯನ್ನು ಹೊಂದಿದ್ದು,‌ ಕರ್ನಾಟಕ-ಮಹಾರಾಷ್ಟ್ರದಲ್ಲಿ ಜೈನ ಧರ್ಮದ ಅಭಿವೃದ್ಧಿಗೆ ಶ್ರಮಿಸಿ, ಸಮಾಜದ ಧಾರ್ಮಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸಿರುವ ದಕ್ಷಿಣ ಭಾರತ ಜೈನ ಸಭೆಯ ಅಧ್ಯಕ್ಷರಾಗಿ ರಾವಸಾಹೇಬ ಪಾಟೀಲ ಪುನರ್​ ಆಯ್ಕೆಯಾಗಿದ್ದಾರೆ.

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಬೊರಗಾಂವ್​ ಗ್ರಾಮದ ನಿವಾಸಿಯಾದ ಇವರು, 2010, 2014,‌ 2018 ರಲ್ಲಿ ದಕ್ಷಿಣ ಭಾರತದ ಜೈನ ಸಭೆಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಸಂಸ್ಕಾರ, ಶಿಕ್ಷಣ ಹಾಗೂ ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡಿ ಸಭೆಯ ಕಾರ್ಯ ಹೆಚ್ಚಿಸಿದರು.

ಕರ್ನಾಟಕದ ಹುಬ್ಬಳಿಯಲ್ಲಿ ವ್ಯಾಪಾರ ಮಳಿಗೆಗಳು, ಸ್ತವನಿಧಿಯಲ್ಲಿ ಭವ್ಯ ಬ್ರಹ್ಮನಾಥ ಭವನ ನಿರ್ಮಾಣ, ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ 3 ಮಹಡಿ ಕಟ್ಟಡ, ಜಯಸಿಂಗಪುರದಲ್ಲಿ ಮಹಿಳಾ ಕಾರ್ಯಾಲಯ, ಸಂಸ್ಕೃತಿಕ ಭವನ ನಿರ್ಮಾಣಕ್ಕೆ 1 ಏಕರೆ ಜಾಗ ಖರೀದಿ, ಸಾಂಗಲಿಯಲ್ಲಿ ಬೋರ್ಡಿಂಗ್, ಶ್ರಾವಿಕಾಶ್ರಮ ಸೇರಿದಂತೆ ವಿವಿಧ ಸಾಮಾಜಿಕ ಕಾರ್ಯಗಳನ್ನು ಕೈಗೊಂಡಿದ್ದರು.

ಬಡ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದ್ದ ಶಿಷ್ಯವೇತನ ಹಣವನ್ನು 2.62 ಕೋಟಿ ಮಾಡಿಸಿ ಉನ್ನತ ಶಿಕ್ಷಣಕ್ಕೆ ಅವಕಾಶ ಕಲ್ಪಿಸಿ ಕೊಟ್ಟಿದ್ದಾರೆ. ಈಗ ಮತ್ತೆ 2021 ರಲ್ಲಿ ದಕ್ಷಿಣ ಭಾರತದ ಜೈನ ಸಭೆಯ ಅಧ್ಯಕ್ಷರಾಗಿ ಮತ್ತೆ ರಾವಸಾಹೇಬ ಪಾಟೀಲ ಅವಿರೋಧವಾಗಿ ಪುನರ್ ಆಯ್ಕೆಯಾಗಿದ್ದಾರೆ.

ಇದನ್ನೂ ಓದಿ: ಶಿವಾಜಿ ಮಹಾರಾಜರು ಭಾರತದ ಆಸ್ತಿ : ಸಚಿವ ರಮೇಶ್​ ಜಾರಕಿಹೊಳಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.