ETV Bharat / state

ಬೆಳಗಾವಿಯಲ್ಲೂ ದುಷ್ಕೃತ್ಯ.. ಸಾರಿಗೆ ಸಿಬ್ಬಂದಿ ಮೇಲೆ ಸಹೋದ್ಯೋಗಿಯಿಂದಲೇ ಅತ್ಯಾಚಾರಕ್ಕೆ ಯತ್ನ

author img

By

Published : Aug 26, 2021, 12:32 PM IST

ಕರ್ತವ್ಯ ಮುಗಿಸಿ ಮನೆಗೆ ಹೋಗುತ್ತಿದ್ದ ಮಹಿಳಾ ಸಿಬ್ಬಂದಿಯನ್ನು ಸಾರಿಗೆ ಸಿಬ್ಬಂದಿ ಆಕೆ ಮನೆ ತಲುಪುವವರೆಗೂ ಹಿಂಬಾಲಿಸಿಕೊಂಡು ಹೋಗಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಕುಂದಾನಗರಿಯಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ.

ಸಾರಿಗೆ ಸಿಬ್ಬಂದಿ ಮೇಲೆ ಸಹೋದ್ಯೋಗಿಯಿಂದಲೇ ಅತ್ಯಾಚಾರಕ್ಕೆ ಯತ್ನ
ಸಾರಿಗೆ ಸಿಬ್ಬಂದಿ ಮೇಲೆ ಸಹೋದ್ಯೋಗಿಯಿಂದಲೇ ಅತ್ಯಾಚಾರಕ್ಕೆ ಯತ್ನ

ಬೆಳಗಾವಿ : ರಾಜ್ಯಾದ್ಯಂತ ಮೈಸೂರಿನಲ್ಲಿ ನಡೆದ ವಿದ್ಯಾರ್ಥಿನಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣ ಸದ್ದು ಮಾಡುತ್ತಿರುವ ಬೆನ್ನಲ್ಲೇ ಕುಂದಾನಗರಿಯಲ್ಲಿ ಅತ್ಯಾಚಾರ ಯತ್ನದ ಘಟನೆ ನಡೆದಿದೆ. ಮಹಿಳಾ ಸಾರಿಗೆ ಸಿಬ್ಬಂದಿ ಮೇಲೆ ಸಾರಿಗೆ ಸಿಬ್ಬಂದಿಯೇ ಅತ್ಯಾಚಾರಕ್ಕೆ ಯತ್ನ ನಡೆಸಿರುವ ಘಟನೆ ನಗರದಲ್ಲಿ ಬೆಳಕಿಗೆ ಬಂದಿದೆ.

ಬುಧವಾರ ರಾತ್ರಿ ಕರ್ತವ್ಯ ಮುಗಿಸಿ ಮನೆಗೆ ಹೋಗುತ್ತಿದ್ದ ಮಹಿಳಾ ಸಿಬ್ಬಂದಿಯನ್ನು ಸಾರಿಗೆ ಸಿಬ್ಬಂದಿ ಆಕೆ ಮನೆ ತಲುಪುವವರೆಗೂ ಹಿಂಬಾಲಿಸಿಕೊಂಡು ಹೋಗಿದ್ದಾನೆ. ನಂತರ ಯಾರೂ ಇಲ್ಲದ್ದನ್ನ ಗಮನಿಸಿ ಮನೆಗೆ ನುಗ್ಗಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎನ್ನಲಾಗ್ತಿದೆ.

ಹೆಚ್ಚಿನ ಓದಿಗೆ : Mysuru Gang Rape: ವಿಡಿಯೋ ಚಿತ್ರೀಕರಿಸಿ, ಮೂರು ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದ ಕಿರಾತಕರು

ಘಟನೆ ವೇಳೆ ಮಹಿಳೆ ಕಿರುಚಿದ್ದಾಳೆ. ಪರಿಣಾಮ ಅಕ್ಕಪಕ್ಕದ ಜನರು ಧಾವಿಸಲು ಮುಂದಾಗುತ್ತಿದ್ದಂತೆ ಆರೋಪಿ ಎಸ್ಕೇಪ್ ಆಗಿದ್ದಾನೆ. ಇದಕ್ಕೆ ಸಂಬಂಧಿಸಿದಂತೆ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ಸಾರಿಗೆ ನಿಗಮದಿಂದ ಅಮಾನತು ಕೂಡ ಮಾಡಲಾಗಿದೆ.

ಮೈಸೂರಿನಲ್ಲಿ ನಡೆದ ಗ್ಯಾಂಗ್​ ರೇಪ್​ ಪ್ರಕರಣದ ತನಿಖೆ ನಡೆಯುತ್ತಿರುವ ಹೊತ್ತಲ್ಲೇ ಬೆಳಗಾವಿಯಲ್ಲೂ ಇಂಥಹ ಕೃತ್ಯ ನಡೆದಿರುವುದು ರಾಜ್ಯದಲ್ಲಿ ಮಹಿಳೆಯರ ಸುರಕ್ಷತೆ ಬಗ್ಗೆ ಪ್ರಶ್ನೆ ಎದುರಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.