ETV Bharat / state

ರಾಜ್ಯದಲ್ಲಿ ರಮೇಶ್ ಜಾರಕಿಹೊಳಿ ವರ್ಚಸ್ಸಿದೆ, ಶೀಘ್ರದಲ್ಲೇ ಅವರಿಗೆ ದೊಡ್ಡ ಜವಾಬ್ದಾರಿ: ಅರುಣ್ ಸಿಂಗ್

author img

By

Published : Oct 17, 2022, 6:51 AM IST

ಬೆಳಗಾವಿ ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ರಮೇಶ್ ಜಾರಕಿಹೊಳಿ ಅವರ ವರ್ಚಸ್ಸಿದೆ. ಪಕ್ಷ ಅವರಿಗೆ ಶೀಘ್ರದಲ್ಲೇ ದೊಡ್ಡ ಜವಾಬ್ದಾರಿ ನೀಡಲಿದೆ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಹೇಳಿದರು.

arun singh
ಅರುಣ್ ಸಿಂಗ್

ಬೆಳಗಾವಿ: ಮುಂದಿನ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುವಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಪಾತ್ರ ಹಿರಿದಾಗಿದೆ. ಪಕ್ಷ ಅವರಿಗೆ ಶೀಘ್ರದಲ್ಲೇ ದೊಡ್ಡ ಜವಾಬ್ದಾರಿ ನೀಡಲಿದೆ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಹೇಳಿದರು.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದ ಜನರು ಬಿಜೆಪಿ ಕಡೆ ಒಲವು ತೋರಿಸುತ್ತಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಮತ್ತು ಮಾಜಿ ಸಚಿವ ರಮೇಶ್​ ಜಾರಕಿಹೊಳಿ ಅವರಿಗೆ ಪಕ್ಷದಲ್ಲಿ ಮಹತ್ತರ ಜವಾಬ್ದಾರಿ ನೀಡಲಾಗುತ್ತದೆ ಎಂದರು‌.

ಮಾಜಿ ಸಿಎಂ ಯಡಿಯೂರಪ್ಪ ಕರ್ನಾಟಕ ಬಿಜೆಪಿಯ ಅತುಲನೀಯ ಶಕ್ತಿಯಾಗಿದ್ದಾರೆ. ಮುಂಬರುವ ಚುನಾವಣೆ ಹಿನ್ನೆಲೆ ಪಕ್ಷದ ಶಕ್ತಿಸಂವರ್ಧನೆಗೆ ಅವರು ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳಲಿದ್ದಾರೆ. ಜನರು ಕೂಡ ಬಿಜೆಪಿಯೆಡೆ ಒಲವು ತೋರುತ್ತಿದ್ದಾರೆ. ಸಹಜವಾಗಿಯೇ ಬಿಜೆಪಿ ಮುಂದಿನ ಚುನಾವಣೆಯಲ್ಲಿ 150ಕ್ಕೂ ಹೆಚ್ಚು ಸ್ಥಾನ ಗೆಲ್ಲಲಿದೆ ಎಂದು ತಿಳಿಸಿದರು.

ಬೆಳಗಾವಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅರುಣ್ ಸಿಂಗ್

ಇದನ್ನೂ ಓದಿ: ಗೋಕಾಕ್​​​ ಶಾಸಕರಿಗೆ, ಸವದಿಗೆ ಸಚಿವ ಸಂಪುಟ ಸ್ಥಾನಮಾನ ಕೊಡಲಿ: ಮಹೇಶ್​ ಕುಮಠಳ್ಳಿ

ಮುಂದಿನ ಚುನಾವಣೆ ಗೆಲ್ಲುವಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಪಾತ್ರ ಹಿರಿದಾಗಿದೆ. ಪಕ್ಷ ಅವರಿಗೆ ಶೀಘ್ರದಲ್ಲೇ ದೊಡ್ಡ ಜವಾಬ್ದಾರಿ ನೀಡಲಿದೆ. ಬೆಳಗಾವಿ ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ರಮೇಶ್ ಜಾರಕಿಹೊಳಿ ಅವರ ವರ್ಚಸ್ಸಿದೆ. ಚುನಾವಣೆ ಬಳಿಕ ಬಿಜೆಪಿಯನ್ನ ಗಟ್ಟಿಗೊಳಿಸಲು ಅವರ ಯೋಗದಾನ ಮಹತ್ತರವಾಗಿದೆ. ಬೆಳಗಾವಿ ಬಿಜೆಪಿಯಲ್ಲಿ ಯಾವುದೇ ಮತಭೇದವಿಲ್ಲ ಎಂದರು.

ಇದನ್ನೂ ಓದಿ: ಖಂಡಿತವಾಗಿಯೂ ರಮೇಶ್ ಜಾರಕಿಹೊಳಿ ಸಚಿವರಾಗುತ್ತಾರೆ: ನಳಿನ್​ಕುಮಾರ್

ಇದಕ್ಕೂ ಮುಂಚೆ ಬೆಳಗಾವಿಗೆ ಆಗಮಿಸಿದ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ನಗರದ ಸರ್ಕ್ಯೂಟ್ ಹೌಸ್​ನಲ್ಲಿ ಬಿಜೆಪಿ ಮುಖಂಡರ ಸಭೆ ನಡೆಸಿದರು. ಅರಣ್ ಸಿಂಗ್ ಸಭೆಯಲ್ಲಿ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ, ಸಂಸದೆ ಮಂಗಳಾ ಅಂಗಡಿ, ಎಂಎಲ್‌ಸಿ ಲಕ್ಷ್ಮಣ ಸವದಿ, ಶಾಸಕರಾದ ಅನಿಲ್ ಬೆನಕೆ, ಮಹೇಶ್ ಕುಮಟ್ಟಳ್ಳಿ ಇದ್ದರು. ಈ ವೇಳೆ ಮಾಜಿ ಸಚಿವ ರಮೇಶ್​ ಜಾರಕಿಹೊಳಿ‌ ಜೊತೆ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಗುಪ್ತವಾಗಿ ಸಭೆ ನಡೆಸಿದರು‌.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.