ETV Bharat / state

ಮಳೆ ನಿಂತ್ರೂ‌ ಉಕ್ಕಿ ಹರಿಯುತ್ತಿರುವ ನದಿಗಳು... ಬೆಳಗಾವಿಯಲ್ಲಿ ಸೇತುವೆಗಳು ಜಲಾವೃತ

author img

By

Published : Sep 11, 2019, 5:31 PM IST

ಚಿಕ್ಕೋಡಿ ಭಾಗದ ಜಲಾನಯನ ಪ್ರದೇಶಗಳಲ್ಲಿ ಮಳೆ ತಗ್ಗಿದರೂ ನದಿಗಳ ನೀರಿನ ಮಟ್ಟ ಹೆಚ್ಚಾಗೇ ಇರುವುದರಿಂದ ಹಲವೆಡೆ ಬ್ಯಾರೇಜ್​ಗಳು ಜಲಾವೃತಗೊಂಡಿವೆ.

ಸೇತುವೆಗಳು ಜಲಾವೃತ

ಚಿಕ್ಕೋಡಿ: ಬೆಳಗಾವಿಯ ಕೆಲ ಭಾಗಗಳ ಜಲಾನಯನ ಪ್ರದೇಶಗಳಲ್ಲಿ ಮಳೆಯ ಅಬ್ಬರ ತಗ್ಗಿದೆ. ದೂಧ್​ಗಂಗಾ ನದಿ ಒಳಹರಿವಿನಲ್ಲಿ ನಿರಂತರ ಏರಿಕೆ ಕಂಡು ಬರುತ್ತಿದ್ದು, ಸದಲಗಾ ಹಾಗೂ ಬೋರಗಾಂವ ಗ್ರಾಮಗಳ ಮಧ್ಯೆ ಇರುವ ಸೇತುವೆ ಹಾಗೂ ಯಕ್ಸಂಬಾ ಮತ್ತು ದಾನವಾಡ ಗ್ರಾಮಗಳ ಮಧ್ಯೆ ಇರುವ ಸೇತುವೆ ದೂಧ್‌ಗಂಗಾ ನದಿ ನೀರಿನಲ್ಲಿ ಮುಳುಗಡೆಯಾಗಿದೆ.

ಮುಳುಗಡೆಯಾಗಿರುವ ಸೇತುವೆಗಳು:
ಕಲ್ಲೋಳ ಹಾಗೂ ಯಡೂರ ಗ್ರಾಮಗಳ ನಡುವಿನ ಸೇತುವೆ, ಮಲಿಕವಾಡ ಹಾಗೂ ದತ್ತವಾಡ ನಡುವಿನ ಸೇತುವೆ, ನಿಪ್ಪಾಣಿ ತಾಲೂಕಿನ ಗ್ರಾಮಗಳಾದ ಕಾರದಗಾಭೋಜ್‌ ಹಾಗೂ ಭೋಜ್‌ವಾಡಿ ನಡುವಿನ ಸೇತುವೆ ಜಲಾವೃಗೊಂಡಿವೆ. ಅಲ್ಲದೇ ಕನ್ನೂರ, ಜತ್ರಾಟ, ಭೀವಶಿ, ಅಕ್ಕೋಳ, ಸಿದ್ನಾಳ, ಮಾಂಗೂರ, ಕುನ್ನೂರ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆ ಕೂಡ ಮುಳುಗಡೆಯಾಗಿದೆ.

ಸೇತುವೆಗಳು ಜಲಾವೃತ

ಜೊತೆಗೆ ರಾಯಭಾಗ ತಾಲೂಕಿನ ಕುಡಚಿ ಹಾಗೂ ಉಗಾರ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆ ಮತ್ತು ಕಾಗವಾಡ ತಾಲೂಕಿನ ಉಗಾರ, ಉಗಾರ ಬಿಕೆ ಗ್ರಾಮಗಳ ಸಂಪರ್ಕ ಸೇತುವೆಗಳು ಜಲಾವೃತಗೊಂಡಿವೆ. ಇನ್ನು ಹುಕ್ಕೇರಿ ತಾಲೂಕಿನ ಹೀರಣ್ಯಕೇಶಿ ನದಿ ಕೂಡಾ ಉಕ್ಕಿ ಹರಿಯುತ್ತಿದ್ದು, ಗೋಟುರು ಮತ್ತು ನಾಗನೂರ ಸೇತುವೆ ಮುಳುಗಡೆಯಾಗಿದೆ. ಹಿರಣ್ಯಕೇಶಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆ ಇದಾಗಿದ್ದು, ಜಲಾವೃತಗೊಂಡಿರುವ ಪರಿಣಾಮ ಕರ್ನಾಟಕ-ಮಹಾರಾಷ್ಟ್ರ ಸಂಪರ್ಕ ಕಡಿತವಾಗಿದೆ. ಸಂಚಾರಕ್ಕೆ ಉಭಯ ರಾಜ್ಯದ ಜನತೆ ಪರದಾಡುವಂತಾಗಿದೆ. ಸೇತುವೆಗಳು ಜಲಾವೃತ ಸ್ಥಿತಿಯಲ್ಲಿಯೇ ಇದ್ದು, ಸಾರ್ವಜನಿಕರು ಸುತ್ತು ಬಳಸಿ ಯಾವ್ಯಾವುದೋ ಮಾರ್ಗಗಳ ಮೂಲಕ ಪ್ರಯಾಣಿಸಬೇಕಾದ ಅನಿವಾರ್ಯತೆ ಹಾಗೂ ಸಂಕಷ್ಟ ಎದುರಾಗಿದೆ.

Intro:ಮಳೆ ಇಳಿಮುಖವಾದರೂ‌ ನದಿಯ ನೀರಿನ ಮಟ್ಟ ಯಥಾಸ್ಥಿತಿ ಹಲವಾರು ಬ್ಯಾರೆಜ್ ಜಲಾವೃತ
Body:
ಚಿಕ್ಕೋಡಿ :

ನದಿ ಜಲಾನಯನ ಪ್ರದೇಶಗಳಲ್ಲಿ ಮಳೆಯ ಅಬ್ಬರ ತಗ್ಗಿದೆ. ಆದರೆ, ಕೃಷ್ಣೆಯ ಕೋಪ ಮಾತ್ರ ಇನ್ನೂ ತಣ್ಣಗಾಗುತ್ತಿಲ್ಲ.

ದೂಧಗಂಗಾ ನದಿ ಒಳ ಹರಿವಿನಲ್ಲೂ ನಿರಂತರ ಏರಿಕೆ ಕಂಡು ಬರುತ್ತಿದ್ದು, ಸದಲಗಾ – ಬೋರಗಾಂವ ಗ್ರಾಮಗಳ ಮಧ್ಯೆ ಇರುವ ಸೇತುವೆ ಹಾಗೂ ಯಕ್ಸಂಬಾ – ದಾನವಾಡ ಗ್ರಾಮಗಳ ಮಧ್ಯೆ ಇರುವ ಸೇತುವೆ ದೂಧ್‌ಗಂಗಾ ನದಿ ನೀರಿನಲ್ಲಿ ಮುಳುಗಡೆಯಾಗಿದೆ.

ಈ ಮುಂಚೆ ಮುಳುಗಡೆ
ಯಾಗಿರುವ ತಾಲ್ಲೂಕಿನ ಸೇತುವೆಗಳು ಕಲ್ಲೋಳ – ಯಡೂರ, ಮಲಿಕವಾಡ –ದ ತ್ತವಾಡ, ನಿಪ್ಪಾಣಿ ತಾಲ್ಲೂಕಿನ ಕಾರದಗಾ – ಭೋಜ್‌, ಭೋಜ್‌ವಾಡಿ – ಕುನ್ನೂರ, ಜತ್ರಾಟ – ಭೀವಶಿ, ಅಕ್ಕೋಳ – ಸಿದ್ನಾಳ, ಮಾಂಗೂರ – ಕುನ್ನೂರ ರಾಯಬಾಗ ತಾಲೂಕಿನ ಕುಡಚಿ - ಉಗಾರ ಸೇತುವೆ ಕಾಗವಾಡ ತಾಲೂಕಿನ ಉಗಾರ - ಉಗಾರ ಬಿಕೆ ಹಾಗೂ ಹುಕ್ಕೇರಿ ತಾಲೂಕಿನ ಹೀರಣ್ಯಕೇಶಿ ನದಿ ಹರಿಯುವಿನಲ್ಲಿ ಭಾರಿ ಪ್ರಮಾಣದ ನೀರು ಹೆಚ್ಚಳವಾಗಿದ್ದು, ಗೋಟುರು - ನಾಗನೂರ ಸೇತುವೆ ಮುಳುಗಡೆಯಾಗಿದ್ದು, ಪರಿಣಾಮ
ಕರ್ನಾಟಕ- ಮಹಾರಾಷ್ಟ್ರ ಸಂಪರ್ಕ ಕಡಿತವಾಗಿದೆ. ಹಿರಣ್ಯಕೇಶಿ ನದಿಗೆ ಅಡ್ಡಲಾಗಿ ನಿರ್ಮಾಸಿರುವ ಸೇತುವೆ ಇದಾಗಿದ್ದು, ಸಂಚಾರಕ್ಕೆ ಉಭಯ ರಾಜ್ಯದ ಜನತೆ ಪರದಾಡುವಂತಾಗಿದೆ.

ಸೇತುವೆಗಳು ಜಲಾವೃತ್ತ ಸ್ಥಿತಿಯಲ್ಲಿಯೇ ಇವೆ. ಸಾರ್ವಜನಿಕರು ಸುತ್ತು ಬಳಸಿ ಪ್ರಯಾಣಿಸಬೇಕಾದ ಅನಿವಾರ್ಯತೆ ಎದುರಾಗಿದೆ.

Conclusion:ಸಂಜಯ ಕೌಲಗಿ
ಚಿಕ್ಕೋಡಿ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.