ETV Bharat / state

ರೈತರ ಪ್ರತಿಭಟನೆ: ಬೆಳಗಾವಿಯಲ್ಲಿ ಪ್ರತಿ ಬಸ್​ಗೂ ಪೊಲೀಸ್​ ಎಸ್ಕಾರ್ಟ್​

author img

By

Published : Sep 28, 2020, 9:59 AM IST

ಪ್ರತಿಭಟನೆ ಹಿನ್ನೆಲೆ ಸಾರಿಗೆ ಅಧಿಕಾರಿಗಳು ಕೆಲಹೊತ್ತು ಬಸ್ ಸಂಚಾರವನ್ನು ಸ್ಥಗಿತಗೊಳಿಸಿದ್ದರು. ಬಳಿಕ ಪೊಲೀಸರೇ ಪ್ರತಿ ಬಸ್​ಗೂ ಪೊಲೀಸ್ ಬೆಂಗಾವಲು ವಾಹನದ ಭದ್ರತೆ ನೀಡಿ ರಾಷ್ಟ್ರೀಯ ಹೆದ್ದಾರಿವರೆಗೆ ಬಸ್ ಬಿಟ್ಟು ಬರುವ ಕೆಲಸ ಮಾಡುತ್ತಿದ್ದಾರೆ.

Police escort for every bus in Belgaum
ಬೆಳಗಾವಿಯಲ್ಲಿ ಪ್ರತಿ ಬಸ್​ಗೂ ಪೊಲೀಸ್​ ಎಸ್ಕಾರ್ಟ್​

ಬೆಳಗಾವಿ: ರೈತ ಸಂಘಟನೆ ಕರೆ ನೀಡಿದ್ದ ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬೆಳಗ್ಗೆ ಕೇಂದ್ರ ಬಸ್ ನಿಲ್ದಾಣಕ್ಕೆ ಆಗಮಿಸಿದ್ದ ರೈತ ಹಾಗೂ ಕನ್ನಡ ಪರ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಕರ್ನಾಟಕ ನವ ನಿರ್ಮಾಣ ಸೇನೆ ಹಾಗೂ ರೈತ ಸಂಘಟನೆ ಮುಖಂಡರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಈ ವೇಳೆ ಸಾರಿಗೆ ಅಧಿಕಾರಿಗಳು ಕೆಲಹೊತ್ತು ಬಸ್ ಸಂಚಾರವನ್ನು ಸ್ಥಗಿತಗೊಳಿಸಿದ್ದರು. ಬಳಿಕ ಪೊಲೀಸರೇ ಪ್ರತಿ ಬಸ್​ಗೂ ಪೊಲೀಸ್ ಬೆಂಗಾವಲು ವಾಹನದ ಭದ್ರತೆ ನೀಡಿ ರಾಷ್ಟ್ರೀಯ ಹೆದ್ದಾರಿವರೆಗೆ ಬಸ್ ಬಿಟ್ಟು ಬರುತ್ತಿದ್ದಾರೆ.

ಬೆಳಗಾವಿಯಲ್ಲಿ ಪ್ರತಿ ಬಸ್​ಗೂ ಪೊಲೀಸ್​ ಎಸ್ಕಾರ್ಟ್​

ಬೆಳಗಾವಿಯಲ್ಲಿ ಎಂದಿನಂತೆ ಬಸ್, ಆಟೋಗಳ ಸಂಚಾರ ಆರಂಭಗೊಂಡಿದ್ದು, ಕೇಂದ್ರ ಬಸ್ ನಿಲ್ದಾಣ ಬಳಿ ಪೊಲೀಸ್ ಬಿಗಿ ಭದ್ರತೆ ಇದೆ. ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಗಿಂತ ಹೆಚ್ಚು ಪೊಲೀಸರೇ ಇದ್ದಾರೆ. ರೈತರು, ಕನ್ನಡ ಸಂಘಟನೆ ಮುಖಂಡರು, ಕನ್ನಡ ಸಂಘಟನೆ ಮುಖಂಡರು ಚೆನ್ನಮ್ಮ ವೃತ್ತದಲ್ಲಿ ಜಮಾವಣೆಗೊಳ್ಳಲಿದ್ದಾರೆ. ಬಳಿಕ ಬೃಹತ್ ಪ್ರತಿಭಟನೆ ನಡೆಸಲು ರೈತರು ನಿರ್ಧರಿಸಿದ್ದಾರೆ.

ಬೆಳಗಾವಿ ನಗರದ ಪ್ರಮುಖ ಮಾರುಕಟ್ಟೆಗಳಲ್ಲಿ ಸಂಚರಿಸಿ ಬಂದ್‌ಗೆ ಸಹಕರಿಸುವಂತೆ ಮನವಿ ಮಾಡಲಿದ್ದಾರೆ. ರೈತ ಸಂಘಟನೆಗಳು ಕರೆ ನೀಡಿದ ಬಂದ್‌ಗೆ ಕರ್ನಾಟಕ ರಕ್ಷಣಾ ವೇದಿಕೆ, ಕರ್ನಾಟಕ ನವ ನಿರ್ಮಾಣ ಸೇನೆ, ಎಐಡಿಎಸ್‌ಒ, ಸಿಐಟಿಯು ಸೇರಿ ಕೆಲ ಕಾರ್ಮಿಕ, ದಲಿತ ಸಂಘಟನೆಗಳು ಬಂದ್‌ಗೆ ಬೆಂಬಲ ನೀಡಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.