ETV Bharat / state

ನರೇಗಾ ಯೋಜನೆಯಡಿ ಕೆಲಸ ಮಾಡಿದ ಕಾರ್ಮಿಕರಿಗೆ ಕಡಿಮೆ ಸಂಬಳ ನೀಡಿದ್ದಕ್ಕೆ ಆಕ್ರೋಶ

author img

By

Published : May 28, 2020, 4:47 PM IST

ತಾಲೂಕಿನ ಮದಬಾವಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಲ್ಲಿ 290 ಜನರು ಕೆಲಸ ಮಾಡುತ್ತಿದ್ದಾರೆ. ಸರ್ಕಾರ ಒಂದು ದಿನಕ್ಕೆ 275 ರೂಪಾಯಿ ಕೊಡಬೇಕು ಎಂಬ ನಿಯಮವಿದ್ದರೂ ಅಧಿಕಾರಿಗಳು ತಡೆ ಹಿಡಿದು 170 ರೂಪಾಯಿ ನೀಡುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪ ಮಾಡುತ್ತಿದ್ದಾರೆ.

Outrage for lower salaries for workers worked under the Narega scheme in Athani
ನರೇಗಾ ಯೋಜನೆಯಡಿ ಕೆಲಸ ಮಾಡಿದ ಕಾರ್ಮಿಕರಿಗೆ ಕಡಿಮೆ ಸಂಬಳ ನೀಡಿದ್ದಕ್ಕೆ ಆಕ್ರೋಶ

ಅಥಣಿ: ಕೊರೊನಾ ವೈರಸ್ ಹಿನ್ನೆಲೆಯಲ್ಲಿ ದುಡಿಯುವ ವರ್ಗಕ್ಕೆ ಕೆಲಸವಿಲ್ಲದೇ ವಲಸೆ ಕಾರ್ಮಿಕರು ಹಾಗೂ ಗ್ರಾಮದ ಜನರು ಪರದಾಡುತ್ತಿದ್ದಾರೆ.

ಇವರಿಗೆ ಉದ್ಯೋಗ ನೀಡುವ ಉದ್ದೇಶದಿಂದ ಸರ್ಕಾರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ, ಹಾಗೂ ನರೇಗಾ ಯೋಜನೆಗಳ ಅಡಿ ಜನರಿಗೆ ಉದ್ಯೋಗ ನೀಡುವಂತೆ ಸರ್ಕಾರ ಆದೇಶ ಹೊರಡಿಸಿದೆ. ಸರ್ಕಾರ ಹೊರಡಿಸಿರುವ ನಿಗದಿತ ಸಂಬಳ ಬಿಟ್ಟು ಕಡಿಮೆ ಹಣ ನೀಡುತ್ತಿರುವುದಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾರ್ಮಿಕರಿಗೆ ಕಡಿಮೆ ಸಂಬಳ ನೀಡಿದ್ದಕ್ಕೆ ಆಕ್ರೋಶ

ತಾಲೂಕಿನ ಮದಬಾವಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಲ್ಲಿ 290 ಜನರು ಕೆಲಸ ಮಾಡುತ್ತಿದ್ದಾರೆ. ಸರ್ಕಾರ ಒಂದು ದಿನಕ್ಕೆ 275 ರೂಪಾಯಿ ಕೊಡಬೇಕು ಎಂಬ ನಿಯಮವಿದ್ದರೂ ಅಧಿಕಾರಿಗಳು ತಡೆ ಹಿಡಿದು 170 ರೂಪಾಯಿ ನೀಡುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪ ಮಾಡುತ್ತಿದ್ದಾರೆ. ಇದಕ್ಕೆ ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ಈ ಟಿವಿ ಭಾರತಗೆ ದೂರವಾಣಿ ಮೂಲಕ ಮಾತನಾಡಿದ, ಪಂಚಾಯಿತಿ ಗ್ರಾಮಿಣಭಿವೃದ್ಧಿ ಅಧಿಕಾರಿ ಎಸ್ ಟಿ ಸರನಾಯಕ, ನರೇಗಾ ಯೋಜನೆ ಅಡಿ ದಿನಗೂಲಿ ಸಂಬಳ ಇರಲ್ಲ. ಕೆಲಸದ ಪ್ರಮಾಣ ಮೇಲೆ ಸಂಬಳ ವಿತರಿಸಲಾಗುವುದು. ಅದು ಕೂಡ ತಾಲೂಕು ಪಂಚಾಯಿತಿ ವ್ಯಾಪ್ತಿಯ ಇಂಜಿನಿಯರ್ ಮೆಜರ್​ಮೆಂಟ್ ಮಾಡಿದ ಮೇಲೆ ಪ್ರತಿಯೊಬ್ಬರಿಗೂ ಸಂಬಳ ವಿತರಿಸಲಾಗುವುದು. ಕೆಲಸ ಮಾಡಿದಂತೆ ಸಂಬಳ ಇರುತ್ತದೆ ಎಂದು ತಿಳಿಸಿದರು. ಕೂಲಿ ಕಾರ್ಮಿಕರಿಗೆ ನೆರಳು ಮತ್ತು ನೀರಿನ ವ್ಯವಸ್ಥೆ ಮಾಡಲಾಗಿದೆ. ಕೆಲವರು ಸುಖಾ ಸುಮ್ಮನೆ ಆರೋಪ ಮಾಡುತ್ತಿದ್ದಾರೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.