ETV Bharat / state

ಬೆಳಗಾವಿಯಲ್ಲಿ ನವವಿವಾಹಿತೆ ಆತ್ಮಹತ್ಯೆ ಕೇಸ್​: ಉರುಳಾಯ್ತು ಸೋಫಾ ಸೆಟ್​​ನ ಕ್ಷುಲ್ಲಕ ವಿಚಾರ!

author img

By

Published : Oct 27, 2020, 11:07 AM IST

ನವವಿವಾಹಿತೆ ಆತ್ಮಹತ್ಯೆ ಪ್ರಕರಣದ ಕುರಿತು ಕಾಕತಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಕುರಿತು ಪೊಲೀಸರು ತನಿಖೆ ನಡೆಸಿದಾಗ, ಕೇವಲ ಸೋಫಾ ಕೊಡಿಸಲಿಲ್ಲ ಎಂಬ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡ ವಿಚಾರ ಬೆಳಕಿಗೆ ಬಂದಿದೆ.

ಬೆಳಗಾವಿ ನವವಿವಾಹಿತೆ ಆತ್ಮಹತ್ಯೆ ಪ್ರಕರಣ:
ಬೆಳಗಾವಿ ನವವಿವಾಹಿತೆ ಆತ್ಮಹತ್ಯೆ ಪ್ರಕರಣ:

ಬೆಳಗಾವಿ: ತಾಲೂಕಿನ‌ ಸುಳಗಾ ಗ್ರಾಮದಲ್ಲಿ ಕಳೆದ ವಾರ ನವವಿವಾಹಿತೆಯೋರ್ವಳು ಆತ್ಮಹತ್ಯೆ ಮಾಡಿಕೊಂಡಿದ್ದಳು. ಈ ಕುರಿತು ಕಾಕತಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಕುರಿತು ಪೊಲೀಸರು ತನಿಖೆ ನಡೆಸಿದಾಗ, ಕೇವಲ ಸೋಫಾ ಕೊಡಿಸಲಿಲ್ಲ ಎಂಬ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡ ವಿಚಾರ ಬೆಳಕಿಗೆ ಬಂದಿದೆ.

ಡಿಸಿಪಿ ಡಾ. ವಿಕ್ರಮ ಆಮಟೆ

ಕಳೆದ ಮೂರು ತಿಂಗಳ ಹಿಂದೆ ಉಚಗಾಂವ ನಿವಾಸಿಯೊಬ್ಬರ ಜತೆ ಮದುವೆಯಾಗಿತ್ತು. ವಿವಾಹದ ನಂತರ ಮನೆಗೆ ಬಂದ ಮಗಳು ಜ್ಯೋತಿ ಸೋಫಾ ಸೆಟ್ ಕೊಡಿಸುವಂತೆ ತಂದೆಯ ಬಳಿ ಕೇಳಿದ್ದಳು. ಈ ವೇಳೆ ತಂದೆಗೆ ಹಣದ ಸಮಸ್ಯೆ ಇರುವ ಕಾರಣ ಸ್ವಲ್ಪ ದಿನ ಬಿಟ್ಟು ಕೊಡಿಸುವುದಾಗಿ ಹೇಳಿದ್ದರು. ಇದರಿಂದ ಮನನೊಂದ ಜ್ಯೋತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬುದು ತನಿಖೆ ವೇಳೆ ತಿಳಿದು ಬಂದಿದೆ. ಈ ಕುರಿತು ಕಾಕತಿ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ ಎಂದು ಡಿಸಿಪಿ ಡಾ. ವಿಕ್ರಮ ಆಮಟೆ ತಿಳಿಸಿದ್ದಾರೆ.

ಓದಿ:ಬೆಳಗಾವಿ: ನವವಿವಾಹಿತೆ ನೇಣಿಗೆ ಶರಣು, ಕಾರಣ ನಿಗೂಢ..

ಪ್ರಕರಣದ ಹಿನ್ನೆಲೆ: ತಾಲೂಕಿನ ಸುಳಗಾ ಗ್ರಾಮದ ನಿವಾಸಿ ಜ್ಯೋತಿ ಚೋಪ್ಡೆ (19) ನೇಣು ಬಿಗಿದುಕೊಂಡು ಆತ್ಮಹತ್ಯೆ ‌ಮಾಡಿಕೊಂಡಿದ್ದರು. ಕಳೆದ ಮೂರು‌ ತಿಂಗಳ ಹಿಂದಷ್ಟೇ ಉಚಗಾಂವ ಮೂಲದ ಕಟ್ಟಡ ಕಾರ್ಮಿಕ ನಿಖಿಲ್ ಚೋಪ್ಡೆ ಜೊತೆಗೆ ವಿವಾಹವಾಗಿದ್ದಳು. ಕಳೆದ‌ ಹಲವು ದಿನಗಳ ಹಿಂದಷ್ಟೇ ತವರು ಮನೆಗೆ ಉಳಿದುಕೊಳ್ಳಲು ಬಂದಿದ್ದಳು. ಆದರೆ ಅ. 21ರಂದು ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.