ಹಂತ ಹಂತವಾಗಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ: ಶಿಕ್ಷಣ ಸಚಿವ ಬಿ.ಸಿ ನಾಗೇಶ್

author img

By

Published : Dec 16, 2021, 5:32 PM IST

BC Nagesh

ಎನ್​​​ಇಪಿ ಹಂತ ಹಂತವಾಗಿ ಜಾರಿ ಮಾಡಲು ಈಗಾಗಲೇ ಟಾಸ್ಕ್​​ಫೋರ್ಸ್​ ಸಮಿತಿ ರಚಿಸಲಾಗಿದೆ. 2030ರ ಒಳಗೆ ಈ ನೀತಿಯ ಜಾರಿ ಪೂರ್ಣವಾಗಲಿದೆ ಎಂದು ಬಿ.ಸಿ ನಾಗೇಶ್ ಸದನಕ್ಕೆ ಮಾಹಿತಿ ನೀಡಿದ್ದಾರೆ.

ಬೆಳಗಾವಿ: ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಹಂತ ಹಂತವಾಗಿ ಜಾರಿಗೆ ತರುತ್ತೇವೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ವಿಧಾನಸಭೆಯಲ್ಲಿ ಇಂದು ತಿಳಿಸಿದ್ದಾರೆ. ಪ್ರಶ್ನೋತ್ತರ ವೇಳೆ ಶಾಸಕ ಮಹಾಂತೇಶ್ ಕೌಜಲಗಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಹಂತ ಹಂತವಾಗಿ ನೀತಿ ತರುತ್ತೇವೆ. ಟಾಸ್ಕ್​​​ಪೋರ್ಸ್ ಸಮಿತಿ ರಚನೆ ಆಗಿದೆ, ಅಂಗನವಾಡಿ ಮತ್ತು ಪ್ರಾಥಮಿಕ ಶಾಲೆ ಶಿಕ್ಷಕರಿಗೆ ತರಬೇತಿ ನೀಡುತ್ತೇವೆ ಎಂದರು.

ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಕುರಿತು ಬಿಸಿ ನಾಗೇಶ್ ಪ್ರತಿಕ್ರಿಯೆ

ಮುಂದಿನ ವರ್ಷದಲ್ಲಾದರೂ ಎನ್​ಇಪಿ ಪರಿಚಯಿಸುವ ಇರಾದೆ ಇದೆ, ಆತುರವಾಗಿ ಎನ್​ಇಪಿ ಪರಿಚಯಿಸಲ್ಲ, ತರಬೇತಿ ಕೊಡದೇ ಎನ್​ಇಪಿ ಪರಿಚಯಿಸುವುದಿಲ್ಲ.‌ 2030ರ ಒಳಗೆ ರಾಷ್ಟ್ರೀಯ ಶಿಕ್ಷಣ ನೀತಿ ಪೂರ್ಣಗೊಳಿಸಲಾಗುವುದು ಎಂದರು. ಇದಕ್ಕೂ ಮುನ್ನ ಕಾಂಗ್ರೆಸ್ ಶಾಸಕ ಮಹಾಂತೇಶ ಕೌಜಲಗಿ ಅವರು, ರಾಷ್ಟ್ರೀಯ ಶಿಕ್ಷಣ ನೀತಿ ಹಂತ ಹಂತವಾಗಿ ತರಲಾಗುತ್ತದೆ ಎಂದು ಹೇಳಿದ್ದೀರಿ, ಅದು ಯಾವಾಗ ಎಂದು ಪ್ರಶ್ನಿಸಿದ್ದರು.

ಇದನ್ನೂ ಓದಿ: ಮರಾಠ ಅಭಿವೃದ್ಧಿ ನಿಗಮಕ್ಕೆ ಕೂಡಲೇ ಅಧ್ಯಕ್ಷರು, ಸದಸ್ಯರ ನೇಮಕ: ಸಚಿವ ಆರ್. ಅಶೋಕ್ ಅಭಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.