ETV Bharat / state

ಬೀದಿಬದಿ ವ್ಯಾಪಾರಿಗಳಿಗೆ ನೀಡುತ್ತಿರುವ ಸಾಲದ ಬಡ್ಡಿ ಕಡಿತ ಕುರಿತು ಕೇಂದ್ರದೊಂದಿಗೆ ಮಾತುಕತೆ : ಅಶ್ವತ್ಥ್‌ ನಾರಾಯಣ

author img

By

Published : Dec 21, 2021, 3:12 PM IST

ಸದ್ಯ ರಾಜ್ಯದಲ್ಲಿ ಬೀದಿಬದಿ ವ್ಯಾಪಾರಿಗಳಿಗೆ ₹15 ಕೋಟಿ ವ್ಯಯ ಮಾಡಿ 43 ಮಾರಕಟ್ಟೆಯನ್ನು ಮಾಡಿಕೊಡಲಾಗುತ್ತಿದೆ. ಅಸಂಘಟಿತ ವಲಯದಲ್ಲಿರುವ ಇವರಿಗೆ ಸರ್ಕಾರ ಅಗತ್ಯ ನೆರವು ನೀಡುತ್ತಿದೆ. ಸರ್ಕಾರ ಎಲ್ಲ ಅನುಕೂಲಕತೆ ಕಲ್ಪಿಸಿ ಕೊಡುತ್ತಿದೆ. ಬಡ್ಡಿ ಕಡಿಮೆ ದರದಲ್ಲಿ ಸಾಲ ಕೊಡಿಸುವ ಕುರಿತು ಕೇಂದ್ರದ ಗಮನಕ್ಕೆ ತರಲಾಗುತ್ತದೆ..

ಅಶ್ವತ್ಥನಾರಾಯಣ
ಅಶ್ವತ್ಥನಾರಾಯಣ

ಬೆಂಗಳೂರು : ಬೀದಿಬದಿ ವ್ಯಾಪಾರಿಗಳಿಗೆ ಶೇ.7ರ ಬಡ್ಡಿ ದರದಲ್ಲಿ ವ್ಯಾವಹಾರಿಕ ಸಾಲ ಸೌಲಭ್ಯ ಕಲ್ಪಿಸಲಾಗುತ್ತಿದೆ. ಬಡ್ಡಿದರದಲ್ಲಿ ಕಡಿಮೆ ಮಾಡುವಂತೆ ಕೇಂದ್ರ ಸರ್ಕಾರದ ಜೊತೆ ಮಾತುಕತೆ ನಡೆಸಲಾಗುತ್ತದೆ ಎಂದು ಉನ್ನತ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ದಿ ಸಚಿವ ಡಾ.ಅಶ್ವತ್ಥ್‌ ನಾರಾಯಣ ತಿಳಿಸಿದ್ದಾರೆ.

ಬೀದಿಬದಿ ವ್ಯಾಪಾರಿಗಳಿಗೆ ಸಾಲ ಸೌಲಭ್ಯ ನೀಡುವ ಕುರಿತಂತೆ ಸಚಿವ ಡಾ ಅಶ್ವತ್ಥ್‌ ನಾರಾಯಣ ಹೇಳಿಕೆ ನೀಡಿರುವುದು..

ಪ್ರಶ್ನೋತ್ತರ ಕಲಾಪದಲ್ಲಿ ಜೆಡಿಎಸ್ ಸದಸ್ಯ ಗೋವಿಂದರಾಜು ಪ್ರಶ್ನೆಗೆ ಉತ್ತರಿಸಿದ ಸಚಿವರು, 1.60 ಲಕ್ಷ ಬೀದಿಬದಿ ವ್ಯಾಪಾರಿಗಳಿಗೆ ತಲಾ 2 ಸಾವಿರ ಹಣ ನೀಡಲಾಗಿದೆ. ಇವರಿಗೆ 8 ಕಾರ್ಯಕ್ರಮ ವಿಸ್ತರಣೆ ಮಾಡಿದ್ದು, ಗುರಿತಿನ ಚೀಟಿ ಕೊಡಲಾಗುತ್ತಿದೆ.

ಬ್ಯಾಂಕ್‌ನಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ಸಾಲ ಸಿಗಲ್ಲ, ಮೀಟರ್ ಬಡ್ಡಿ ಸಾಲ ಪಡೆಯುವ ಸ್ಥಿತಿ ಇತ್ತು. ಬೆಳಗ್ಗೆ ಸಾಲ ಪಡೆದು ಸಂಜೆ ವಾಪಸ್ ಮಾಡಬೇಕಿತ್ತು. ಆದರೆ, ಈಗ ನಾವು ಶೇ.7ರ ಬಡ್ಡಿ ದರದಲ್ಲಿ 10 ಸಾವಿರ ಸಾಲ ಕೊಡುತ್ತಿದ್ದೇವೆ.

ಅದನ್ನು ಮರಳಿಸಿದವರಿಗೆ 20-50 ಸಾವಿರ ಕೊಡುತ್ತಿದ್ದೇವೆ. ಅಲ್ಲದೆ ವ್ಯಾಪಾರಿಗಳಿಗೆ ಕೌಶಲ್ಯವನ್ನೂ ಕೊಡಲಾಗುತ್ತಿದೆ. ಅವರು ಉತ್ತಮವಾಗಿ ಬಾಳಿ ಬದಕಲು ಅಗತ್ಯ ವ್ಯವಸ್ಥೆ ಕಲ್ಪಿಸಿಕೊಡಲಾಗುತ್ತಿದೆ ಎಂದರು.

ಸದ್ಯ ರಾಜ್ಯದಲ್ಲಿ ಬೀದಿಬದಿ ವ್ಯಾಪಾರಿಗಳಿಗೆ ₹15 ಕೋಟಿ ವ್ಯಯ ಮಾಡಿ 43 ಮಾರಕಟ್ಟೆಯನ್ನು ಮಾಡಿಕೊಡಲಾಗುತ್ತಿದೆ. ಅಸಂಘಟಿತ ವಲಯದಲ್ಲಿರುವ ಇವರಿಗೆ ಸರ್ಕಾರ ಅಗತ್ಯ ನೆರವು ನೀಡುತ್ತಿದೆ. ಸರ್ಕಾರ ಎಲ್ಲ ಅನುಕೂಲಕತೆ ಕಲ್ಪಿಸಿ ಕೊಡುತ್ತಿದೆ. ಬಡ್ಡಿ ಕಡಿಮೆ ದರದಲ್ಲಿ ಸಾಲ ಕೊಡಿಸುವ ಕುರಿತು ಕೇಂದ್ರದ ಗಮನಕ್ಕೆ ತರಲಾಗುತ್ತದೆ ಎಂದರು.

ಸದನಕ್ಕೆ‌ ಬಾರದ ಸಚಿವರ ವಿರುದ್ಧ ಹೊರಟ್ಟಿ ಗರಂ : ಸದನದಲ್ಲಿ ಕಡ್ಡಾಯವಾಗಿ ಹಾಜರಿರಬೇಕಾದ ಸಚಿವರು ಪದೇಪದೆ ಗೈರಾಗುತ್ತಿರುವುದಕ್ಕೆ ಸಭಾಪತಿ ಬಸವರಾಜ ಹೊರಟ್ಟಿ ಗರಂ ಆದರು. ಸಭಾ ನಾಯಕರ ಕಿವಿ ಹಿಂಡಿದ ಸಭಾಪತಿಗಳು, ಸಚಿವರಾದ ಮುನಿರತ್ನ, ಶ್ರೀರಾಮುಲುಗೆ ಸದನಕ್ಕೆ ಬರಲು ಹೇಳಿ ಎಂದರು.

ಇದನ್ನೂ ಓದಿ : ಮೇಕೆದಾಟು ಯೋಜನೆ ಆರಂಭಿಸಲು ಸರ್ಕಾರ ಹಿಂದೇಟು ಹಾಕಿಲ್ಲ : ಸಿಎಂ ಬಸವರಾಜ ಬೊಮ್ಮಾಯಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.