ETV Bharat / state

ಗಡಿಯಲ್ಲಿ ಎಂಇಎಸ್ ಪುಂಡಾಟ: ರಾಜ್ಯ ಪ್ರವೇಶಿಸಲು ಯತ್ನ

author img

By

Published : Dec 19, 2022, 12:47 PM IST

ಎಂಇಎಸ್ ಮಹಾಮೇಳಕ್ಕೆ ಬೆಳಗಾವಿಯಲ್ಲಿ ಅವಕಾಶ ನೀಡದಿದ್ದಕ್ಕೆ ಮಹಾರಾಷ್ಟ್ರ ವಿಕಾಸ ಅಘಾಡಿ ಕಾರ್ಯಕರ್ತರು ಕರ್ನಾಟಕ ಗಡಿ ಪ್ರವೇಶಕ್ಕೆ ಯತ್ನಿಸಿ, ಗೊಂದಲದ ವಾತಾವರಣ ಸೃಷ್ಟಿಸಿದ್ದಾರೆ.

MES workers Attempt to enter Karnataka border
ನಿಪ್ಪಾಣಿಯಲ್ಲಿ ಎಂಇಎಸ್ ಪುಂಡಾಟ

ಎಂಇಎಸ್ ಕಾರ್ಯಕರ್ತರಿಂದ ಕರ್ನಾಟಕ ಗಡಿ ಪ್ರವೇಶಕ್ಕೆ ಯತ್ನ

ಬೆಳಗಾವಿ: ನಗರದಲ್ಲಿ ಎಂಇಎಸ್ ಯೋಜಿಸಿದ್ದ ಮಹಾಮೇಳಕ್ಕೆ ಬೆಳಗಾವಿ ಜಿಲ್ಲಾಡಾಳಿತ ತಡೆ ನೀಡಿದ ಹಿನ್ನೆಲೆ ಮಹಾರಾಷ್ಟ್ರ ವಿಕಾಸ ಅಘಾಡಿಯಿಂದ ಕಾರ್ಯಕರ್ತರು ಕರ್ನಾಟಕ ಗಡಿ ಪ್ರವೇಶಕ್ಕೆ ಯತ್ನಿಸಿ, ಗಡಿಯಲ್ಲಿ ಗೊಂದಲ ಸೃಷ್ಟಿಸಿದ್ದಾರೆ.

ನಿಪ್ಪಾಣಿ ತಾಲೂಕಿನ ಕುಗನೊಳ್ಳಿ ಚೆಕ್ ಪೋಸ್ಟ್​ನಲ್ಲಿ ಎಂಇಎಸ್ ಕಾರ್ಯಕರ್ತರು ಶಿವಸೇನೆ, ಎನ್​ಸಿಪಿ ಹಾಗೂ ಕಾಂಗ್ರೆಸ್ ಪಕ್ಷದ ಧ್ವಜ ಹಿಡಿದು ಗಡಿ ಪ್ರವೇಶಿಸಲು ಯತ್ನಿಸಿದ್ದರಿಂದ ಗದ್ದಲ ಉಂಟಾಗಿದೆ.

ಮುಂಜಾಗ್ರತಾ ಕ್ರಮವಾಗಿ ಕರ್ನಾಟಕದಿಂದ ಕುಗನೊಳ್ಳಿ ಚೆಕ್ ಪೋಸ್ಟ್​ನಲ್ಲಿ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಮಹಾರಾಷ್ಟ್ರ ಎಂಇಎಸ್ ಕಾರ್ಯಕರ್ತರ ಹುಚ್ಚಾಟಕ್ಕೆ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಸಂಚಾರ ಅಸ್ತವ್ಯಸ್ತವಾಗಿದೆ. ಗಡಿಯಲ್ಲಿ ನುಗ್ಗಲು ಯತ್ನಿಸಿ 500ಕ್ಕೂ ಅಧಿಕ ಕಾರ್ಯಕರ್ತರನ್ನು ಮಹಾರಾಷ್ಟ್ರ ಪೊಲೀಸರು ವಶಕ್ಕೆ ಪಡೆಯಲು ಹರಸಾಹಸ ಪಡುತ್ತಿದ್ದಾರೆ.

ಇದನ್ನೂ ಓದಿ: ಬೆಳಗಾವಿ: ಟಿಳಕವಾಡಿಯಲ್ಲಿ 144 ಸೆಕ್ಷನ್ ಜಾರಿ, ಐವರು ಎಂಇಎಸ್ ಕಾರ್ಯಕರ್ತರು ವಶಕ್ಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.