ETV Bharat / state

ಬೆಳಗಾವಿ : ನ್ಯಾಯಾಲಯದ ಆವರಣದಲ್ಲೇ ಪತ್ನಿಯ ಕಾಲು ಕತ್ತರಿಸಿದ ಪತಿ..

author img

By

Published : Sep 29, 2021, 2:51 PM IST

Updated : Sep 29, 2021, 3:46 PM IST

ವಿಚಾರಣೆಗೆ ಬಂದ ಪತ್ನಿಯ ಮೇಲೆ ಆತ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಪರಿಣಾಮ ಪತ್ನಿ ಜಯಮಾಲಾ ಸ್ಥಿತಿ ಗಂಭೀರವಾಗಿದೆ. ಹೀಗಾಗಿ, ಆಕೆಯನ್ನು ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಬೈಲಹೊಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ..

court
ನ್ಯಾಯಾಲಯದ ಆವರಣ

ಬೆಳಗಾವಿ : ಜಿಲ್ಲೆ ಬೈಲಹೊಂಗಲ ನ್ಯಾಯಾಲಯದ ಆವರಣದಲ್ಲೇ ಪತ್ನಿಯ ಮೇಲೆ ಪತಿ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ.

man-assault-his-wife-infront-of-court
ಪತ್ನಿಯ ಮೇಲೆ ಮಾರಣಾಂತಿಕ ಹಲ್ಲೆ

ನನಗುಂಡಿಕೊಪ್ಪದ ನಿವೃತ್ತ ಸೈನಿಕ ಶಿವಪ್ಪ ಅಡಕಿ ಎಂಬಾತ ಪತ್ನಿ ಜಯಮಾಲಾ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿ ಆಕೆಯ ಕಾಲನ್ನೇ ಕತ್ತರಿಸಿದ್ದಾನೆ. ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಪತಿ-ಪತ್ನಿಯ ಮಧ್ಯೆ ಕಲಹ ಇತ್ತು ಎನ್ನಲಾಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಪ್ರಕರಣ ಇತ್ತು.

11 ವರ್ಷಗಳ ಹಿಂದೆ ಧಾರವಾಡ ಜಿಲ್ಲೆಯ ವರೂರ್ ಗ್ರಾಮದ ಜಯಮಾಲಾರನ್ನು ಸೈನಿಕ ಶಿವಪ್ಪ ಮದುವೆಯಾಗಿದ್ದ. ಇಬ್ಬರ ನಡುವೆ ಕಲಹ ಇದ್ದುದ್ದರಿಂದ ಇಂದು ಬೈಲಹೊಂಗಲ ದಿವಾಣಿ ನ್ಯಾಯಾಲಯದಲ್ಲಿ ವಿಚಾರಣೆ ಇತ್ತು.

ವಿಚಾರಣೆಗೆ ಬಂದ ಪತ್ನಿಯ ಮೇಲೆ ಆತ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಪರಿಣಾಮ ಪತ್ನಿ ಜಯಮಾಲಾ ಸ್ಥಿತಿ ಗಂಭೀರವಾಗಿದೆ. ಹೀಗಾಗಿ, ಆಕೆಯನ್ನು ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಬೈಲಹೊಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಓದಿ: ಮೈಸೂರು: ಸೊಸೆಗೆ ಚಾಕು ಚುಚ್ಚಿದ ಅತ್ತೆ.. ಬಳಿಕ ನೇಣು ಬಿಗಿದುಕೊಂಡು ಆತ್ಮಹತ್ಯೆ

Last Updated : Sep 29, 2021, 3:46 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.