ETV Bharat / state

ಅಲ್ ​ಖೈದಾ ಮುಖ್ಯಸ್ಥನ ಹೇಳಿಕೆಗೆ ನಮ್ಮ ಸರ್ಕಾರ ಸೊಪ್ಪು ಹಾಕುವುದಿಲ್ಲ: ಲಕ್ಷ್ಮಣ ಸವದಿ

author img

By

Published : Apr 7, 2022, 9:14 AM IST

ಉಗ್ರಗಾಮಿಗಳು ಅಂದ್ರೆ ದೇಶದ್ರೋಹ ಕೆಲಸ ಮಾಡುವವರು. ಇಂಥವರ ಹೇಳಿಕೆಗೆ ನಮ್ಮ ಸರ್ಕಾರ ಸೊಪ್ಪು ಹಾಕುವುದಿಲ್ಲ, ಸಮಾಜದ ಸ್ವಾಸ್ಥ್ಯ ಕೆಡಿಸುವ ಕಾರ್ಯ ಯಾರೇ ಮಾಡಲಿ ಸರ್ಕಾರ ಅವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುತ್ತದೆ ಎಂದು ಅಮನ್ - ಅಲ್ ​- ಜವಾಹಿರಿ ಹೇಳಿಕೆಯನ್ನು ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಖಂಡಿಸಿದರು.

ಲಕ್ಷ್ಮಣ ಸವದಿ
ಲಕ್ಷ್ಮಣ ಸವದಿ

ಅಥಣಿ(ಬೆಳಗಾವಿ): ಉಗ್ರಗಾಮಿಗಳು ಎಂದರೆ ದೇಶದ್ರೋಹ ಕೆಲಸ ಮಾಡುವವರು. ಇಂಥವರ ಹೇಳಿಕೆಗೆ ನಮ್ಮ ಸರ್ಕಾರ ಸೊಪ್ಪು ಹಾಕುವುದಿಲ್ಲ ಎಂದು ಅಲ್ ​ಖೈದಾ ಮುಖ್ಯಸ್ಥ ಅಮನ್ - ಅಲ್ ​- ಜವಾಹಿರಿ ಹೇಳಿಕೆಯನ್ನು ಮಾಜಿ ಉಪಮುಖ್ಯಮಂತ್ರಿ, ಮಾಜಿ ಸಾರಿಗೆ ಸಚಿವ ಲಕ್ಷ್ಮಣ ಸವದಿ ತೀವ್ರವಾಗಿ ಖಂಡಿಸಿದ್ದಾರೆ.

ಅಥಣಿ ಪಟ್ಟಣದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ಉಗ್ರಗಾಮಿಗಳು ಅಂದ್ರೆ ದೇಶದ್ರೋಹ ಕೆಲಸ ಮಾಡುವವರು. ಇಂಥವರ ಹೇಳಿಕೆಗೆ ನಮ್ಮ ಸರ್ಕಾರ ಸೊಪ್ಪು ಹಾಕುವುದಿಲ್ಲ, ಸಮಾಜದ ಸ್ವಾಸ್ಥ್ಯ ಕೆಡಿಸುವ ಕಾರ್ಯ ಯಾರೇ ಮಾಡಲಿ, ಸರ್ಕಾರ ಅವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುತ್ತದೆ. ಕಾನೂನು ಸುವ್ಯವಸ್ಥೆ ಕಾಪಾಡಲು ಮುಖ್ಯಮಂತ್ರಿ ಸೂಕ್ತ ಕ್ರಮ ಕೈಗೊಂಡಿದ್ದಾರೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಉಗ್ರಗಾಮಿಗಳ ಹೇಡಿ ಕೃತ್ಯ ನಡೆದಿದೆ ಎಂದು ವಾಗ್ದಾಳಿ ನಡೆಸಿದರು.

ಅಥಣಿ ಪಟ್ಟಣದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಲಕ್ಷ್ಮಣ ಸವದಿ

ವಿಜಯಪುರ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್ ಅವರು ನನಗೆ ರಾಜಯೋಗ ಬಂದಿದೆ ಎಂಬ ಹೇಳಿಕೆ ನೀಡಿರುವುದರ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಲಕ್ಷ್ಮಣ ಸವದಿ, ನಮ್ಮ ಸರ್ಕಾರ ಬಂದಾಗ ನಮಗೆ ರಾಜ್ಯ ಯೋಗ ಇರುತ್ತದೆ. ಯತ್ನಾಳ್​ ಅವರು ಯಾವ ಸಂದರ್ಭದಲ್ಲಿ ಈ ವಿಚಾರ ಹೇಳಿದ್ದಾರೆಂಬುದು ಗೊತ್ತಿಲ್ಲ. ಆದರೂ ರಾಜಯೋಗ ಬಂದಿದ್ದರೆ ಒಳ್ಳೆಯದು ಎಂದರು.

ಇದನ್ನೂ ಓದಿ: ತಲೆಗೆ ಗನ್​ಯಿಟ್ಟು ದರೋಡೆ, ಹಲ್ಲೆ ಆರೋಪ.. ಬಿಜೆಪಿ ಎಂಎಲ್​ಎ ಪುತ್ರನ ವಿರುದ್ಧ ಎಫ್​ಐಆರ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.