ETV Bharat / state

ಕಿತ್ತೂರು ಉತ್ಸವದಲ್ಲಿ ಜನಸಾಗರ: ಕಲರ್‌ಫುಲ್‌ ಕೋಟೆಯಲ್ಲಿ ಸೆಲ್ಫಿಗೆ ಮುಗಿಬಿದ್ದ ಜನ

author img

By ETV Bharat Karnataka Team

Published : Oct 25, 2023, 7:36 PM IST

ಕಿತ್ತೂರು ಉತ್ಸವಕ್ಕೆ ಆಗಮಿಸಿದ್ದ ಜನರು ಕೋಟೆಯಲ್ಲಿ ಸೆಲ್ಫಿ ಫೋಟೋ ತೆಗೆಸಿಕೊಳ್ಳಲು ಮುಗಿಬಿದ್ದಿರು. ಉತ್ಸವ ಮೈಸೂರು ದಸರಾ ಮಾದರಿಯಲ್ಲಿ ನಡೆಯಲಿ ಎಂದು ಆಶಿಸಿದರು.

ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಗಿ ಬಿದ್ದ ಜನ
ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಗಿ ಬಿದ್ದ ಜನ

ಕಿತ್ತೂರು ಉತ್ಸವ: ಜನ ಏನಂದ್ರು?

ಬೆಳಗಾವಿ: ಚನ್ನಮ್ಮನ ಉತ್ಸವಕ್ಕೆ ಜನಸಾಗರವೇ ಕಿತ್ತೂರಿಗೆ ಹರಿದು ಬಂದಿದೆ. ಕಲರ್​ಫುಲ್ ಲೈಟಿಂಗ್ಸ್‌ನಿಂದ​ ಕಂಗೊಳಿಸುತ್ತಿದ್ದ ಕೋಟೆಯಲ್ಲಿ ಜನರು ಸೆಲ್ಫಿ ಫೋಟೋ ತೆಗೆಸಿಕೊಳ್ಳುತ್ತಿರುವುದು ಸಾಮಾನ್ಯವಾಗಿದೆ. ಉತ್ಸವಕ್ಕೆ ಬಂದವರು ಕೋಟೆ ಅಭಿವೃದ್ಧಿಯಾಗಿ, ಪ್ರಸಿದ್ಧ ಪ್ರವಾಸಿ ತಾಣವಾಗಬೇಕು, ದಸರಾ ಮಾದರಿಯಲ್ಲಿ ಕಿತ್ತೂರು ಉತ್ಸವ ಜರುಗಬೇಕು ಎಂದು ಆಶಿಸಿದರು.

ವೀರರಾಣಿ ಚನ್ನಮ್ಮಾಜಿ ಆಳಿದ ಕೋಟೆಯಲ್ಲಿ ಯುವಕ, ಯುವತಿಯರು, ಚಿಕ್ಕ ಮಕ್ಕಳು, ಮಹಿಳೆಯರು ಸೇರಿ ಇಡೀ ಕುಟುಂಬಸ್ಥರು ಫೋಟೋ ತೆಗೆಸಿಕೊಂಡು ಸಂಭ್ರಮಿಸಿದರು. ವಸ್ತು ಪ್ರದರ್ಶನದಲ್ಲಿ ಮಾರಾಟಕ್ಕೆ ಇಟ್ಟಿರುವ ವಿವಿಧ ವಸ್ತುಗಳ ಖರೀದಿ ಭರಾಟೆ ಕೂಡ ಜೋರಾಗಿದೆ. ಫಲಪುಷ್ಪ ಪ್ರದರ್ಶನದಲ್ಲಿ ಸುಂದರ ಕಲಾಕೃತಿಗಳನ್ನು ಕಣ್ತುಂಬಿಕೊಂಡರು. ತೊಟ್ಟಿಲು ಆಟ, ಉಗಿ ಬಂಡಿ ಸೇರಿ ಇನ್ನಿತರ ಆಟಗಳು ಮಕ್ಕಳನ್ನು ಆಕರ್ಷಿಸಿದವು.

ಯುವತಿ ರಾಣಿ ಈಟಿವಿ ಭಾರತ್‌ನೊಂದಿಗೆ ಮಾತನಾಡಿ, "ರಾಣಿ ಚನ್ನಮ್ಮ, ಕಿತ್ತೂರು ಎಂದರೆ ಇಡೀ ನಾಡಿಗೆ ಹೆಮ್ಮೆ. ಇಂತಹ ನಾಡಿನ ಇತಿಹಾಸ ಅಜರಾಮರಗೊಳಿಸುವ ಕೆಲಸವನ್ನು ಸರ್ಕಾರ ಮಾಡಬೇಕು. ಕೋಟೆ ಅಭಿವೃದ್ಧಿಪಡಿಸಿದರೆ ಬಹಳಷ್ಟು ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಉತ್ಸವ ಮೈಸೂರು ದಸರಾ ಮಾದರಿಯಲ್ಲಿ ಆಗಬೇಕು. ಆ ನಿಟ್ಟಿನಲ್ಲಿ ರಾಜಕಾರಣಿಗಳು ಯೋಚಿಸಬೇಕು. ಸಿನಿಮಾ ತಾರೆಯರು ತಾವೇ ಸ್ವಯಂ ಅಭಿಮಾನದಿಂದ ಉತ್ಸವಕ್ಕೆ ಬರಬೇಕು" ಎಂದು ಹೇಳಿದರು.

ಇದನ್ನೂ ಓದಿ: ಕಿತ್ತೂರು ಉತ್ಸವ: ಸಿರಿಧಾನ್ಯಗಳಲ್ಲಿ ಅರಳಿದ ಚನ್ನಮ್ಮನ ಮೂರ್ತಿ, ತರಕಾರಿಯಲ್ಲಿ ಆಕರ್ಷಣೀಯ ಕಲಾಕೃತಿಗಳು

ಮತ್ತೋರ್ವ ಯುವತಿ ಶಶಿಕಲಾ ಮಾತನಾಡಿ, "ವೀರರಾಣಿ ಚನ್ನಮ್ಮನ ನಾಡಿನಲ್ಲಿ ನಾವು ಹುಟ್ಟಿರುವುದೇ ನಮ್ಮ ಪುಣ್ಯ. ಉತ್ಸವವನ್ನು ತುಂಬಾ ಎಂಜಾಯ್ ಮಾಡುತ್ತಿದ್ದೇವೆ. ಆದರೆ, ಕೋಟೆ ಹಾಳಾಗಿರುವುದು ಬೇಸರದ ಸಂಗತಿ. ಸರ್ಕಾರ ಗಮನಹರಿಸಿ ಕೋಟೆ ಅಭಿವೃದ್ಧಿಗೆ ಮುಂದಾಗಬೇಕು" ಎಂದರು.

ಕಲಭಾಂವಿಯಿಂದ ಕುಟುಂಬ ಸಮೇತವಾಗಿ ಆಗಮಿಸಿದ್ದ ಮಲ್ಲಪ್ಪ ಓಮನ್ನವರ ಮಾತನಾಡಿ, "ಕಿತ್ತೂರಿನ ಕೋಟೆಯ ಪಳೆಯುಳಿಕೆಗಳನ್ನಷ್ಟೇ ಈಗ ನಾವು ನೋಡುತ್ತಿದ್ದೇವೆ. ಕೋಟೆ ಮರು‌ ನಿರ್ಮಾಣವಾಗಿ, ಗತವೈಭವ ಮತ್ತೆ ಮರುಕಳಿಸಬೇಕು. ಇಡೀ ಭಾರತ ದೇಶದ ಜನ ಇತ್ತ ತಿರುಗಿ ನೋಡುವಂತಾಗಬೇಕು" ಎಂದರು.

ಇದನ್ನೂ ಓದಿ: ರಾಣಿ ಚನ್ನಮ್ಮಾಜಿ ಮಹಿಳಾ ಕುಲಕ್ಕೆ ಸ್ಫೂರ್ತಿಯ ಸಂಕೇತ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.