ETV Bharat / state

ಬ್ರಿಟಿಷ್​ ಅಧಿಕಾರಿಯ ಹುಟ್ಟಡಗಿಸಿದ್ದರು ಈ ಸ್ವಾತಂತ್ರ್ಯ ಸೇನಾನಿ.. ಹೋರಾಟದ ಕ್ಷಣಗಳನ್ನು ನೆನೆದ್ರು ಅಥಣಿಯ ಧನವಂತ ಹಳಿಂಗಳಿ

author img

By

Published : Aug 14, 2022, 6:59 PM IST

ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾದ 99 ವರ್ಷದ ಧನವಂತ ಹಳಿಂಗಳಿ ಅಂದಿನ ಸಂಗ್ರಾಮದ ಕ್ಷಣಗಳನ್ನು ಮೆಲುಕು ಹಾಕಿದ್ದಾರೆ.

Freedom fighter Dhanwant Halingali
ಅಥಣಿಯ ಸ್ವಾತಂತ್ರ್ಯ ಹೋರಾಟಗಾರ ಧನವಂತ ಹಳಿಂಗಳಿ

ಅಥಣಿ(ಬೆಳಗಾವಿ): ಭಾರತ ಸ್ವಾತಂತ್ರ್ಯ ಅಮೃತ ಅಮೋತ್ಸವ ಸಂಭ್ರಮದಲ್ಲಿದೆ. ದೇಶಕ್ಕಾಗಿ ಜೀವನ ಮುಡಿಪಿಟ್ಟ ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ಸಲ್ಲಿಸಲಾಗುತ್ತಿದೆ. ಅದೇ ರೀತಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾದ 99 ವರ್ಷದ ಧನವಂತ ಹಳಿಂಗಳಿ ಅಂದಿನ ಸಂಗ್ರಾಮದ ಕ್ಷಣಗಳನ್ನು ನೆನೆಸಿಕೊಂಡಿದ್ದಾರೆ.

ಅಥಣಿ ತಾಲೂಕಿನ ಝುಂಜರವಾಡ ಗ್ರಾಮದಲ್ಲಿ 1923ರಲ್ಲಿ ಜನಿಸಿದ ಇವರು, 14ನೇ ವಯಸ್ಸಿನಲ್ಲೇ ಸ್ವಾತಂತ್ರ್ಯ ಸಂಗ್ರಾಮಕ್ಕೆ ಧುಮುಕುತ್ತಾರೆ. ಇಂಚಿಗೇರಿಯ ಸಾಂಪ್ರದಾಯಿಕ ಗುರುಗಳಾದ ಪ್ರಭು ಮಾಧವಾನಂದರ ನೇತೃತ್ವದಲ್ಲಿ ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದ್ದೆರು. ಕಂಪನಿ ಸರ್ಕಾರದ ಹಲವಾರು ಕಚೇರಿಗಳನ್ನು ಧ್ವಂಸ ಮಾಡಿ, ಬ್ರಿಟಿಷ್ ಅಧಿಕಾರಿಯನ್ನು ಬೇಟೆಯಾಡಿದ್ದರು. ಹೀಗಾಗಿ ಜಮಖಂಡಿ ಸಾವಳಗಿ ಮತ್ತು ಕೇಂದ್ರ ಜೈಲುವಾಸ ಅನುಭವಿಸಿದ್ದರು.

ಅಂದಿನ ಬ್ರಿಟಿಷ್ ಸರ್ಕಾರದ ತೆರಿಗೆ ನೀತಿ, ಜನ ವಿರೋಧಿ ಕಾರ್ಯಗಳನ್ನು ವಿರೋಧಿಸಿ ಯುವಕರ ಸಂಘಟನೆ ಮಾಡಿಕೊಂಡು ಅವರ ವಿರುದ್ಧ ಹೋರಾಟಕ್ಕೆ ಇಳಿದೆವು. ಹೋರಾಟದಲ್ಲಿ ಮುಂದುವರೆಯುತ್ತ ಬಾಂಬೆ ಸತ್ಯಾಗ್ರಹದಲ್ಲಿ ಗಾಂಧೀಜಿಯವರನ್ನು ನಾನು ಒಮ್ಮೆ ದೂರದಿಂದ ನೋಡಿದೆ. ಗಾಂಧೀಜಿ ಅವರು ಭಾಷಣದಲ್ಲಿ ಹೇಳಿದ ಮಾತನ್ನು ನಾನು ಇಂದಿಗೂ ನೆನಪಿಟ್ಟುಕೊಂಡಿದ್ದೇನೆ. ದೇವರು ಸತ್ಯವಲ್ಲ, ಸತ್ಯವೇ ದೇವರು ಎಂದು ಗಾಂಧೀಜಿ ಹೇಳಿದ್ದರೆಂದು ತಿಳಿಸಿದರು.

ಅಥಣಿಯ ಸ್ವಾತಂತ್ರ್ಯ ಹೋರಾಟಗಾರ ಧನವಂತ ಹಳಿಂಗಳಿ

ನಾವು ಮೂಲತಃ ಅಥಣಿ ತಾಲೂಕಿನ ಝುಂಜರವಾಡ ಗ್ರಾಮದವರು. ಆದರೆ ಅಂದಿನ ಬ್ರಿಟಿಷ್ ಅಧಿಕಾರಿಗಳು ಹದ್ದುಪಾರು (ಗಡಿಪಾರು) ಮಾಡಿದ್ದರಿಂದ ಅಥಣಿ ತಾಲೂಕಿನ ತೇಲಸಂಗ ಗ್ರಾಮದಲ್ಲಿ ವಾಸವಾಗಿದ್ದೇವೆ. ಹಳಿಂಗಳಿ ಕುಟುಂಬದ ಸದಸ್ಯರೆಲ್ಲರೂ ಆಸ್ತಿ ಪಾಸ್ತಿ ಅಲ್ಲೇ ಬಿಟ್ಟು ಹಲವು ಗ್ರಾಮಗಳಲ್ಲಿ ವಾಸಿಸುವ ಪರಿಸ್ಥಿತಿ ಎದುರಾಯಿತು. ಹಳಿಂಗಳಿ ಕುಟುಂಬದಿಂದಲೇ 15 ಸ್ವಾತಂತ್ರ್ಯ ಸೇನಾನಿಗಳು ದೇಶಕ್ಕೆ ಸೇವೆ ಸಲ್ಲಿಸಿರುವುದು ನಮಗೆ ಹೆಮ್ಮೆ ತಂದಿದೆ ಎಂದು ತಿಳಿಸಿದರು.

ಇದನ್ನೂ ಓದಿ: ದೇಶ ಸ್ವತಂತ್ರವಾಗುವ ತನಕ ಮದುವೆಯಾಗಲ್ಲ ಎಂದು ಶಪಥ ಮಾಡಿದ್ದ ಹೋರಾಟಗಾರನ ಸ್ಮರಣೆ

ಆದರೆ ದೇಶದಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಣೆ ಸಂದರ್ಭದಲ್ಲಿ ಬೆರಳೆಣಿಕೆಯಷ್ಟು ಉಳಿದಿರುವ ಸ್ವಾತಂತ್ರ್ಯ ಯೋಧರನ್ನು ಸರ್ಕಾರ ಕಡೆಗಣಿಸುತ್ತಿದೆಯೆಂದು ಧನವಂತ ಹಳಿಂಗಳಿ ಪುತ್ರ ವಿವೇಕಾನಂದ ಹಳಿಂಗಳಿ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.