ಸವದತ್ತಿ ಶ್ರೀರೇಣುಕಾ ಯಲ್ಲಮ್ಮ ದೇವಿಯ ಹುಂಡಿ ಎಣಿಕೆ; ಸಂಗ್ರಹವಾದ ಹಣವೆಷ್ಟು ಗೊತ್ತಾ?

author img

By

Published : Sep 24, 2022, 12:10 PM IST

KN_BGM_01_

ಐದು ದಿನಗಳ ಕಾಲ ನಡೆದ ಸವದತ್ತಿ ಶ್ರೀರೇಣುಕಾ ಯಲ್ಲಮ್ಮ ದೇವಿಯ ಹುಂಡಿ ಎಣಿಕೆ ಕಾರ್ಯ ಮುಕ್ತಾಯಗೊಂಡಿದ್ದು, ಹುಂಡಿಯಲ್ಲಿ ಚಿನ್ನಾಭರಣ ಸೇರಿ ಒಟ್ಟು 70 ಲಕ್ಷ ರೂಪಾಯಿ ಸಂಗ್ರಹವಾಗಿದೆ.

ಬೆಳಗಾವಿ: ಕಳೆದ ಐದು ದಿನಗಳಿಂದ ನಡೆದಿದ್ದ ಸವದತ್ತಿ ಶ್ರೀರೇಣುಕಾ ಯಲ್ಲಮ್ಮ ದೇವಿಯ ಹುಂಡಿ ಎಣಿಕೆ ಕಾರ್ಯ ಮುಕ್ತಾಯವಾಗಿದ್ದು, 45ದಿನಗಳಲ್ಲಿ ನಗದು ಹಣ, ಚಿನ್ನಾಭರಣ ಸೇರಿ ಹುಂಡಿಯಲ್ಲಿ 70ಲಕ್ಷ ರೂ ಸಂಗ್ರಹವಾಗಿದೆ.

ಸವದತ್ತಿ ತಾಲೂಕಿನ ಶ್ರೀ ರೇಣುಕಾ ಯಲ್ಲಮ್ಮ ದೇವಿಯ ಹುಂಡಿಯ ಎಣಿಕೆ ಕಾರ್ಯ ನಿನ್ನೆ ಸಂಜೆ ಮುಕ್ತಾಯವಾಗಿದ್ದು, ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಯಲ್ಲಮ್ಮ ದೇವಸ್ಥಾನದ ಹುಂಡಿಯಲ್ಲಿ ಸಂಗ್ರಹವಾದ ನಗದು ಹಣ ಎಣಿಕೆ ಕಾರ್ಯ ನಡೆದಿತ್ತು. ಐದು ದಿನಗಳಿಂದ ನಡೆದಿದ್ದ ಎಣಿಕೆ ಕಾರ್ಯದಲ್ಲಿ ಒಟ್ಟು 65.70ಲಕ್ಷ ರೂ.ನಗದು ಹಣ, 4.13ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ 1.14ಲಕ್ಷ ಮೌಲ್ಯದ ಬೆಳ್ಳಿ ಸಂಗ್ರಹವಾಗಿದ್ದು, ಒಟ್ಟು 70ಲಕ್ಷ ರೂ. ಸಂಗ್ರಹವಾಗಿದೆ.

ಸವದತ್ತಿ ಶ್ರೀರೇಣುಕಾ ಯಲ್ಲಮ್ಮ ದೇವಿಯ ಹುಂಡಿ ಎಣಿಕೆ

ಇದರ ಜೊತೆಗೆ ಐದು ದಿನಗಳ ಎಣಿಕೆ ಕಾರ್ಯದಲ್ಲಿ ವಿದೇಶ ಕರೆನ್ಸಿ, ಬೆಳಗಾವಿ ಜಿಲ್ಲಾ ವಿಭಜನೆ ಸೇರಿ ಭಕ್ತರ ಚಿತ್ರವಿಚಿತ್ರ ಪತ್ರಗಳು ಪತ್ತೆಯಾಗಿವೆ.

ಇದನ್ನೂ ಓದಿ: ತಿರುಮಲ ದೇವಸ್ಥಾನಕ್ಕೆ 1 ಕೋಟಿ ರೂಪಾಯಿ ದೇಣಿಗೆ ಅರ್ಪಿಸಿದ ಮುಸ್ಲಿಂ ದಂಪತಿ

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.