ETV Bharat / state

ಸೇತುವೆ ಬಂದ್‌, ಮನೆಯೊಳಗೆ ನೀರೇ ನೀರು, ನದಿಯಂತಾಯ್ತು ರಸ್ತೆ: ಕುಂದಾನಗರಿಗೆ ಜಲಬಂಧನ!

author img

By

Published : Aug 3, 2019, 4:54 PM IST

ಕರ್ನಾಟಕದಿಂದ ಮಹಾರಾಷ್ಟ್ರಕ್ಕೆ ಸೇರುವ ಏಕೈಕ ಮಾರ್ಗವಾದ ಉಗಾರ-ಕುಡಚಿ ಮಾರ್ಗ ಮಧ್ಯದ ಸೇತುವೆಯ ಮೇಲೆ 3 ಅಡಿ ನೀರು ಹರಿದಿರುವುದರಿಂದ ಸಾರಿಗೆ ಸಂಚಾರ ಸ್ಥಗಿತಗೊಂಡಿದೆ.

ಬೆಳಗಾವಿಯಲ್ಲಿ ಮಳೆಯ ಅವಾಂತರ

ಬೆಳಗಾವಿ : ಬೇಸಿಗೆಯಲ್ಲಿ ಬೀಕರ ಬರಗಾಲದಿಂದ ತತ್ತರಿಸಿದ್ದ ಕುಂದಾನಗರಿಯ ರೈತರಿಗೆ ಈಗ ಅನಾವೃಷ್ಟಿ ಆತಂಕ ಸೃಷ್ಟಿಸಿದೆ. ಮುಂಗಾರು ನಂಬಿ ನಾಟಿ ಮಾಡಿದ್ದ ಬೆಳೆ ವರುಣನ ಪ್ರತಾಪಕ್ಕೆ ಹಾನಿಗೊಂಡಿದೆ.

ಜಿಲ್ಲೆಯಲ್ಲಿ ಕಳೆದೊಂದು ವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಸಾವಿರಾರು ಎಕರೆ ಕೃಷಿ ಭೂಮಿಗೆ ನೀರು ನುಗ್ಗಿದೆ. ಕೃಷಿಯನ್ನೇ ನಂಬಿರುವ ರೈತನಿಗೆ ಮಳೆರಾಯ ಆಘಾತ ನೀಡಿದ್ದು, ಜಲಾವೃತವಾದ ಕೃಷಿ ಗದ್ದೆಯನ್ನು ನೋಡಿ ರೈತ ಕಂಗಾಲಾಗಿದ್ದಾನೆ. ನಗರದ ಯಡಿಯೂರಪ್ಪ ಮಾರ್ಗ ಹಾಗೂ ಸಾಮ್ರಾ ರಸ್ತೆಯಲ್ಲಿರುವ ಸಾವಿರಾರು ಎಕರೆ ಭತ್ತದ ಗದ್ದೆಗೆ ಮಳೆನೀರು ನುಗ್ಗಿ, ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ.

ಬೆಳಗಾವಿಯಲ್ಲಿ ಮಳೆಯ ಅವಾಂತರ

ಉಗಾರ-ಕುಡಚಿ ಸೇತುವೆ ಬಂದ್ :

ಕರ್ನಾಟಕ-ಮಹಾರಾಷ್ಟ್ರ ಸಂಧಿಸುವ ಏಕೈಕ ಕೊಂಡಿ ಉಗಾರ-ಕುಡಚಿ ಮಾರ್ಗದ ಮಧ್ಯದ ಸೇತುವೆಯ ಮೇಲೆ 3 ಅಡಿ ನೀರು ಬಂದಿರುವುದರಿಂದ ಸಾರಿಗೆ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಮಹಾರಾಷ್ಟ್ರದ ಮಹಾಬಳೇಶ್ವರ, ಕೊಂಕಣ ಹಾಗೂ ಸಹ್ಯಾದ್ರಿ ಶ್ರೇಣಿಯ ಘಟ್ಟ ಪ್ರದೇಶದಲ್ಲಿ ಕಳೆದ 5-6 ದಿನಗಳಿಂದ ಕುಂಭದ್ರೋಣ ಮಳೆ ಸುರಿಯುತ್ತಿದೆ. ಅಲ್ಲದೇ ಮಹಾರಾಷ್ಟ್ರದ ಕೊಯ್ನಾ ಜಲಾಶಯ ಶೇ 84 ರಷ್ಟು ಭರ್ತಿಯಾಗಿದ್ದು ಕೃಷ್ಣಾ ನದಿಗೆ ಪ್ರವಾಹ ಬಂದು ಉಗಾರ-ಕುಡಚಿ ಮಾರ್ಗದ ಸೇತುವೆಯ ಸಂಚಾರಕ್ಕೆ ತೊಂದರೆಯುಂಟಾಗಿದೆ.

ಕೊಂಕಣ ಸುತ್ತಿ ಮೈಲಾರಕ್ಕೆ ಹೋದಂತೆ :

ಬಾಗಲಕೋಟ, ಜಮಖಂಡಿ, ಮುಧೋಳ, ಮಹಾಲಿಂಗಪೂರ, ಹಾರೂಗೇರಿ ಸೇರಿದಂತೆ ಹಲವಾರು ಪಟ್ಟಣಗಳಿಂದ ವ್ಯಾಪಾರ ವಹಿವಾಟುಗಳಿಗೆ ಈ ರಸ್ತೆ ಅನುಕೂಲಕರವಾಗಿತ್ತು. ಈ ಮಾರ್ಗ ಕಡಿತಗೊಂಡಿರುವುದರಿಂದ ಹಾರೂಗೇರಿ ಕ್ರಾಸ್ ಮಾರ್ಗವಾಗಿ ಅಥಣಿ, ಕಾಗವಾಡ ಮಾರ್ಗವಾಗಿ 50 ಕಿಮೀ ಹೆಚ್ಚಿಗೆ ಕ್ರಮಿಸಿ ಮಹಾರಾಷ್ಟ್ರಕ್ಕೆ ತೆರಳುವ ಪರಿಸ್ಥಿತಿ ಬಂದೊದಗಿದ್ದು ಕೊಂಕಣ ಸುತ್ತಿ ಮೈಲಾರಕ್ಕೆ ಹೋದ ಅನುಭವವಾಗುತ್ತಿದೆ.

ಮನೆಗಳಿಗೆ ನುಗ್ಗಿದ ನೀರು :

ಮಳೆಯ ಆರ್ಭಟ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದ್ದು, ನಗರದ 50 ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿದ್ದು ಜನರ ಬದುಕು ದುಸ್ತರವಾಗಿದೆ.

ನಗರದ ಪೀರನವಾಡಿ, ಲಕ್ಷ್ಮೀ ಗಲ್ಲಿ ಸೇರಿದಂತೆ ಅನೇಕ ಕಡೆಗಳಲ್ಲಿ 50 ಕ್ಕೂ ಹೆಚ್ಚು ಮನೆಗಳಿಗೆ ನೀರು ಸೇರಿ, ಜನಜೀವನ ಅಸ್ತವ್ಯಸ್ತಗೊಂಡಿದೆ. ಸಮರ್ಥ ನಗರದಲ್ಲಿ ಅಂಗನವಾಡಿ ಕೇಂದ್ರಕ್ಕೆ ಮಳೆ ನೀರು ನುಗ್ಗಿದ್ದು ಮಕ್ಕಳಿಗೆ ಅಂಗನವಾಡಿಗೆ ಬರದಂತೆ ಸೂಚಿಸಲಾಗಿದೆ. ಇದರ ಜೊತೆ ವಾಹನ ಸವಾರರಿಗೂ ಅಡಚಣೆಯಾಗುತ್ತಿದ್ದು, ಮಳೆ ಹೀಗೆಯೇ ಮುಂದುವರೆದರೆ ಜನರಿಗೆ ಮತ್ತಷ್ಟು ತೊಂದರೆಯಾಗುವ ಲಕ್ಷಣ ಗೋಚರಿಸಿದೆ.

Intro:ಅಬ್ಬರಿಸಿದ ಮಳೆರಾಯ : ನದಿಯಂತಾದ ಕೃಷಿ ಗದ್ದೆಗಳು

ಬೆಳಗಾವಿ : ತೀವ್ರ ಬರಗಾಲದಿಂದ ತತ್ತರಿಸಿ ಹೊಗಿದ್ದ ರೈತ ಮುಂಗಾರು‌ ಮಳೆಯನ್ನು ನಂಬಿ ನಾಟಿ ಮಾಡಿದ್ದ ಬೆಳೆಗಳು ಈಗ ಮಳೆಗೆ ಆಹುತಿಯಾಗಿವೆ. ಬೆಳಗಾವಿಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ರೈತರ ಕೃಷಿ ಭೂಮಿ ಈಗ ನದಿಯಂತಾಗಿವೆ.


Body:ಬೆಳಗಾವಿ ಜಿಲ್ಲೆಯಲ್ಲಿ ಕಳೆದು ಒಂದು ವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಸಾವಿರಾರು ಎಕರೆ ಕೃಷಿ ಭೂಮಿಗೆ ನೀರು ನುಗ್ಗಿದೆ. ಕೃಷಿಯನ್ನೇ ನಂಬಿ ಬದುಕಿದ್ದ ರೈತನಿಗೆ ಮಳೆರಾಯ ಭಾರಿ ಹೊಡೆತ ನೀಡಿದ್ದು ಜಲಾವೃತವಾದ ಕೃಷಿ ಗದ್ದೆಯನ್ನು ನೋಡಿ ರೈತ ಕಂಗಾಲಾಗಿದ್ದಾನೆ.
Conclusion:ನಗರದ ಯಡಿಯೂರಪ್ಪ ಮಾರ್ಗ ಹಾಗೂ ಸಾಮ್ರಾ ರಸ್ತೆಯ ಸಾವಿರಾರು ಎಕರೆ ಬತ್ತದ ಗದ್ದೆಗೆ ಮಳೆನೀರ ನುಗ್ಗಿದ್ದು ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ನರಕ್ಕೆ ಹೊಂದಿಕೊಂಡಿರುವ ಜಮೀನುಗಳಿದ್ದು ನೀರಿನ‌ಪ್ರಮಾಣ ಜಾಸ್ತಿಯಾಗಿದೆ. ಇದರಿಂದ ಬೆಳೆಯನ್ನೇ ನಂಬಿ ಬದುಕಿದ್ದ ರೈತನ ಬದುಕು ರಸ್ತೆಗೆ ಬಂದಂತಾಗಿದೆ.

ವಿನಾಯಕ ಮಠಪತಿ
ಬೆಳಗಾವಿ


ETV Bharat Logo

Copyright © 2024 Ushodaya Enterprises Pvt. Ltd., All Rights Reserved.