ETV Bharat / state

ನಾನು ನಿರಪರಾಧಿಯಾಗಿ ಹೊರ ಬರುತ್ತೇನೆ, ನನ್ನ ಕ್ಷೇತ್ರದ ಜನರಿಗಾಗಿ ಎಂಥಾ ಹೋರಾಟಕ್ಕೂ ಸಿದ್ಧ : ವಿನಯ್ ಕುಲಕರ್ಣಿ

author img

By

Published : Aug 21, 2021, 3:02 PM IST

Updated : Aug 21, 2021, 3:22 PM IST

ನಾನು, ನನ್ನ ಕುಟುಂಬಸ್ಥರು ಸಂಕಷ್ಟದಲ್ಲಿದ್ದ ಸಂದರ್ಭದಲ್ಲಿ ಹಲವಾರು ಸ್ವಾಮೀಜಿಗಳು, ರಾಜಕೀಯದ ಎಲ್ಲ ಮುಖಂಡರು, ನನ್ನ ಕ್ಷೇತ್ರದ ಜನರು, ಅಭಿಮಾನಿಗಳು ಸಾಕಷ್ಟು ಶ್ರಮಿಸಿದ್ದಾರೆ. ಅವರಿಗೆಲ್ಲ ನಾನು ಋಣಿಯಾಗಿರುತ್ತೇನೆ. ನನ್ನ ಕ್ಷೇತ್ರದ ಜನಕ್ಕಾಗಿ ಎಂಥ ಹೋರಾಟಕ್ಕೂ ನಾನು ಸಿದ್ಧನಾಗಿರುತ್ತೇನೆ. ಜೈಲಿನಲ್ಲಿದ್ದಾಗ ಟಾಸ್ಕ್ ನೀಡಿದ್ದರು. ಅದನ್ನು ಸದ್ಬಳಕೆ ‌ಮಾಡಿಕೊಂಡಿದ್ದೇನೆ..

ಮಾಜಿ ಸಚಿವ ವಿನಯ್ ಕುಲಕರ್ಣಿ ಹೇಳಿಕೆ
ಮಾಜಿ ಸಚಿವ ವಿನಯ್ ಕುಲಕರ್ಣಿ ಹೇಳಿಕೆ

ಬೆಳಗಾವಿ : ನಾನು ನಿರಪರಾಧಿಯಾಗಿ ಹೊರ ಬರುತ್ತೇನೆ ಎನ್ನುವ ವಿಶ್ವಾಸ ನನಗಿದೆ. ಸರ್ವೋನ್ನತ ನ್ಯಾಯಾಲಯ ನನಗೆ ಜಾಮೀನು ಮಂಜೂರು ಮಾಡಿದ್ದಕ್ಕೆ ಅಭಿನಂದನೆಗಳು ಸಲ್ಲಿಸುತ್ತೇನೆ ಎಂದು ಮಾಜಿ ಸಚಿವ ವಿನಯ್ ಕುಲಕರ್ಣಿ ಹೇಳಿದ್ದಾರೆ.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನ್ಯಾಯಾಂಗದ ಮೇಲೆ ನನಗೆ ಭರವಸೆ ಇದೆ. ನಿರಪರಾಧಿಯಾಗಿ ಹೊರ ಬರುತ್ತೇನೆ. ಕೋರ್ಟ್​ನಲ್ಲಿ ಹೋರಾಟ ಮುಂದುವರೆಸುತ್ತೇನೆ. ಜೈಲಿನಲ್ಲಿ ಸಾಕಷ್ಟು ವಿಚಾರಗಳ ಜೊತೆಗೆ ಓದುವುದನ್ನು ಕಲಿತುಕೊಂಡಿದ್ದೇನೆ. ನನ್ನ ಬದುಕಿನಲ್ಲಿ ಹಲವಾರು ಬದಲಾವಣೆ ಕಂಡುಕೊಂಡಿದ್ದೇನೆ. ಮುಂಬರುವ ದಿನಗಳಲ್ಲಿ ಯಾವ ರೀತಿ ಹೆಜ್ಜೆ ಇಡಬೇಕೆಂದು ಕಲಿತುಕೊಂಡಿದ್ದೇನೆ ಎಂದರು.

ಜೈಲಿನಿಂದ ಹೊರ ಬಂದ ಮೇಲೆ ಮಾಜಿ ಸಚಿವ ವಿನಯ್ ಕುಲಕರ್ಣಿ ಮೊದಲ ಪ್ರತಿಕ್ರಿಯೆ..

ರಾಜಕೀಯ ಜೀವನ ಬೇರೆ, ನನ್ನ ಜೀವನ ಬೇರೆ. ಸಾಮಾನ್ಯ ಜನರು ಕೂಡ ನನ್ನನ್ನು ಪ್ರೀತಿ, ವಿಸ್ವಾಸದಿಂದ ನೋಡುತ್ತಾರೆ. ನಾನು ಇಂದು ನಿನ್ನೆಯಿಂದ ರಾಜಕೀಯ ಮಾಡಿದವನಲ್ಲ. ರೈತ ಕುಟುಂಬದಿಂದ ಬಂದು ವಿದ್ಯಾರ್ಥಿ ಜೀವನದಲ್ಲಿ ನಾಯಕನಾಗಿ ಹೋರಾಟ ಮಾಡಿಕೊಂಡು ಬಂದಿದ್ದೇನೆ. ಮುಂದೆ‌ ಕೂಡ ನನ್ನ ಕ್ಷೇತ್ರದ ಜನರಿಗಾಗಿ ಯಾವುದೇ ಸಂದರ್ಭದಲ್ಲೂ ಹೋರಾಟ ಮಾಡುತ್ತೇನೆ ಎಂದರು.

ಇದನ್ನೂ ಓದಿ : ಕೋವಿಡ್ ನಿಯಮ ಉಲ್ಲಂಘನೆ: ವಿನಯ್ ಕುಲಕರ್ಣಿ ಸೇರಿ 300 ಮಂದಿ ವಿರುದ್ಧ ಪ್ರಕರಣ ದಾಖಲು

ನಾನು, ನನ್ನ ಕುಟುಂಬಸ್ಥರು ಸಂಕಷ್ಟದಲ್ಲಿದ್ದ ಸಂದರ್ಭದಲ್ಲಿ ಹಲವಾರು ಸ್ವಾಮೀಜಿಗಳು, ರಾಜಕೀಯದ ಎಲ್ಲ ಮುಖಂಡರು, ನನ್ನ ಕ್ಷೇತ್ರದ ಜನರು, ಅಭಿಮಾನಿಗಳು ಸಾಕಷ್ಟು ಶ್ರಮಿಸಿದ್ದಾರೆ. ಅವರಿಗೆಲ್ಲ ನಾನು ಋಣಿಯಾಗಿರುತ್ತೇನೆ. ನನ್ನ ಕ್ಷೇತ್ರದ ಜನಕ್ಕಾಗಿ ಎಂಥ ಹೋರಾಟಕ್ಕೂ ನಾನು ಸಿದ್ಧನಾಗಿರುತ್ತೇನೆ.

ಜೈಲಿನಲ್ಲಿದ್ದಾಗ ಟಾಸ್ಕ್ ನೀಡಿದ್ದರು. ಅದನ್ನು ಸದ್ಬಳಕೆ ‌ಮಾಡಿಕೊಂಡಿದ್ದೇನೆ. ಜೈಲಿನಲ್ಲಿನಲ್ಲಿ ಅವರ ಕಾಯ್ದೆ, ಕಾನೂನಿನ ಪ್ರಕಾರ ಇದ್ದೆ. ಮುಂದೆ ಹೆಜ್ಜೆ ಹೇಗೆ ಇಡಬೇಕು ಅನ್ನೋದನ್ನು ಕಲಿತುಕೊಂಡಿದ್ದೇನೆ‌ ಎಂದರು.

ನಾಗನೂರ ಶ್ರೀ ರುದ್ರಾಕ್ಷಿಮಠದ ಶ್ರೀಗಳ ಆಶೀರ್ವಾದ ಪಡೆದ ವಿನಯ್ : ಶಿವಬಸವಗರದಲ್ಲಿರುವ ನಾಗನೂರ ಶ್ರೀ ರುದ್ರಾಕ್ಷಿಮಠಕ್ಕೆ ಭೇಟಿ ನೀಡಿದ ಮಾಜಿ ಸಚಿವ ವಿನಯ್ ಕುಲಕರ್ಣಿ, ಶ್ರೀಗಳ ಆಶೀರ್ವಾದ ಪಡೆದುಕೊಂಡು ಬೆಂಗಳೂರಿಗೆ ತೆರಳಲು ಸಾಂಬ್ರಾ ವಿಮಾನ ನಿಲ್ದಾಣಕ್ಕೆ ತೆರಳಿದರು.

ಧಾರವಾಡದ ಜಿಪಂ ಸದಸ್ಯ ಯೋಗೇಶ್ ಗೌಡ ಅವರ ಕೊಲೆ ಪ್ರಕರಣದಲ್ಲಿ ಹಿಂಡಲಗಾ ಜೈಲುಪಾಲಾಗಿದ್ದ ವಿನಯ ಕುಲಕರ್ಣಿ ಹೊರ ಬರುತ್ತಿದ್ದಂತೆ ಟೆಂಪಲ್ ರನ್ ಆರಂಭಿಸಿದ್ದಾರೆ. ಹಿಂಡಲಗಾ ಗ್ರಾಮದಲ್ಲಿರುವ ಗಣೇಶ ದೇವಸ್ಥಾನಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದುಕೊಂಡು, ಅಲ್ಲಿಂದ ನೇರವಾಗಿ ನಾಗನೂರು ರುದ್ರಾಕ್ಷಿ ಮಠಕ್ಕೆ ತೆರಳಿದದರು.

ನಾಗನೂರು ಮಠದ ಶ್ರೀಗಳು ಹಾಗೂ ಧಾರವಾಡ ಮುರುಘಾಮಠದ ಸ್ವಾಮೀಜಿಗಳ ಆಶೀರ್ವಾದ ಪಡೆದುಕೊಂಡರು. ಈ ವೇಳೆ ಶ್ರೀಗಳು ವಿನಯ ಕುಲಕರ್ಣಿಗೆ ಮೈಸೂರು ಪೇಟ ತೊಡಿಸಿ ಸನ್ಮಾನಿಸಿದರು. ಅವರಿಗೆ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್‌ ಸಾಥ್ ನೀಡಿದರು.

Last Updated : Aug 21, 2021, 3:22 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.