ETV Bharat / state

ಬೆಳಗಾವಿ: ರಸ್ತೆ ಪಕ್ಕ ನಿಂತಿದ್ದ ಕ್ಯಾಂಟರ್​ಗೆ ಕಾರು ಡಿಕ್ಕಿ... ವೈದ್ಯ ದಂಪತಿ, ಮಗಳು ಸಾವು

author img

By

Published : Mar 13, 2022, 9:54 PM IST

Updated : Mar 13, 2022, 10:58 PM IST

ರಸ್ತೆ ಪಕ್ಕ ನಿಂತಿದ್ದ ಕ್ಯಾಂಟರ್​ಗೆ ಕಾರು ಗುದ್ದಿದ ಪರಿಣಾಮ ಮೂವರು ಮೃತಪಟ್ಟ ಘಟನೆ ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನಲ್ಲಿ ನಡೆದಿದೆ.

docter
ವೈದ್ಯ ದಂಪತಿ

ಬೆಳಗಾವಿ: ವೈದ್ಯ ದಂಪತಿ ತೆರಳುತ್ತಿದ್ದ ಕಾರು ರಸ್ತೆ ಪಕ್ಕ ನಿಂತಿದ್ದ ಕ್ಯಾಂಟರ್​ಗೆ ಗುದ್ದಿದ ಪರಿಣಾಮ ಮೂವರು ಮೃತಪಟ್ಟಿರುವ ಘಟನೆ ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ನರಸಿಂಗಪುರ ಗ್ರಾಮದ ಬಳಿ ಸಂಭವಿಸಿದೆ.

ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದ ವೈದ್ಯೆ ಡಾ. ಶ್ವೇತಾ ಎಸ್. ಮುರಗೋಡ (40), ಪುತ್ರಿ ಶಿಯಾ ಮುರಗೋಡ (7) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಖ್ಯಾತ ನೇತ್ರ ವೈದ್ಯ ಡಾ. ಸಚಿನ್ ಮುರಗೋಡ ಅವರನ್ನು ಕೆಎಲ್ಇ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ನೀಡಲಾಗಿತ್ತು. ಗಂಭೀರ ಸ್ಥಿತಿಯಲ್ಲಿದ್ದ ಅವರೂ ಕೂಡ ಚಿಕಿತ್ಸೆ ಫಲಿಸದೆ ಅಸುನೀಗಿದ್ದಾರೆ.

Docter died in road accident at belagavi
ಅಪಘಾತದಲ್ಲಿ ನುಜ್ಜಾದ ಕಾರು

ವೈದ್ಯ ದಂಪತಿ ಬೆಳಗಾವಿ ನಗರದಿಂದ ಸಂಕೇಶ್ವರ ಪಟ್ಟಣಕ್ಕೆ ಮರಳುತ್ತಿದ್ದಾಗ ನರಸಿಂಗಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಪುಣೆ-ಬೆಂಗಳೂರು ಹೆದ್ದಾರಿ ಪಕ್ಕದಲ್ಲಿ ನಿಂತಿದ್ದ ಲಾರಿಗೆ ಕಾರು ಡಿಕ್ಕಿ ಹೊಡೆದಿದೆ. ಯಮಕನಮರಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದುರ್ಘಟನೆ ಸಂಭವಿಸಿದೆ.

ಓದಿ: ಬಾದಾಮಿ ಕ್ಷೇತ್ರ ನನಗೆ ದೂರ, ಹತ್ತಿರದ ಕ್ಷೇತ್ರದಲ್ಲೇ ಸ್ಪರ್ಧಿಸಲು ನಿರ್ಧಾರ: ಸಿದ್ದರಾಮಯ್ಯ

Last Updated : Mar 13, 2022, 10:58 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.