ETV Bharat / state

ಸಿಡಿ ಮಹಾನಾಯಕನೇ ಡಿಕೆಶಿ: ರಮೇಶ್ ಜಾರಕಿಹೊಳಿ ಆರೋಪ

author img

By

Published : Jan 30, 2023, 7:38 PM IST

Updated : Jan 30, 2023, 7:51 PM IST

ಸಿಡಿ ಮಹಾನಾಯಕನೇ ಡಿ.ಕೆ ಶಿವಕುಮಾರ್​ - ಚನ್ನರಾಜ್​ ಹಟ್ಟಿಹೊಳಿ ವಿರುದ್ಧ ರಮೇಶ್ ಜಾರಕಿಹೊಳಿ ವಾಗ್ದಾಳಿ - ಡಿಕೆ ಶಿವಕುಮಾರ್​ ವಿರುದ್ಧ ಆರೋಪ

dk-shivakumar-is-behind-in-cd-case-says-former-minister-ramesh-jarkiholi
ಸಿಡಿ ಮಹಾನಾಯಕನೇ ಡಿಕೆಶಿ: ರಮೇಶ್ ಜಾರಕಿಹೊಳಿ ಆರೋಪ

ಸಿಡಿ ಮಹಾನಾಯಕನೇ ಡಿಕೆಶಿ: ರಮೇಶ್ ಜಾರಕಿಹೊಳಿ ಆರೋಪ

ಬೆಳಗಾವಿ : ನನ್ನ ವ್ಯಕ್ತಿತ್ವ ರಾಜ್ಯದ ಜನರಿಗೆ ಗೊತ್ತು. ಈ ಚನ್ನರಾಜ್ ಹಟ್ಟಿಹೊಳಿ ಅಂತವರಿಗೆ ನಾನು ಉತ್ತರ ನೀಡುವ ಅಗತ್ಯತೆ ಇಲ್ಲ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ಚನ್ನರಾಜ ಹಟ್ಟಿಹೊಳಿ ಆರೋಪದ ಬಳಿಕ ಮತ್ತೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಮೇಶ್ ಜಾರಕಿಹೊಳಿ, ಮಿಸ್ಟರ್ ಚನ್ನರಾಜ ಹಟ್ಟಿಹೊಳಿ ಹಾಗೂ ಹೆಬ್ಬಾಳ್ಕರ್​ ಏನು ಎಂಬುದು ಇಡೀ ರಾಜ್ಯಕ್ಕೆ ಗೊತ್ತಿದೆ.

ಅವರು ಕಳೆದ ನಾಲ್ಕು ವರ್ಷದಿಂದ ಹರ್ಷ ಶುಗರ್ಸ್​ ಕಾರ್ಖಾನೆಯಲ್ಲಿ ಗೋಲ್​ಮಾಲ್​ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು. 8 ಲಕ್ಷ ಕಬ್ಬು ಕ್ರಶಿಂಗ್ ಮಾಡಿ 12 ಲಕ್ಷ ತೋರಿಸುತ್ತಾರೆ. ವರ್ಷದಲ್ಲಿ ಸಾವಿರಾರು ಕೋಟಿ ರೂಪಾಯಿ ಭ್ರಷ್ಟಾಚಾರ ಮಾಡಲಾಗಿದೆ ಎಂದು ಗಂಭೀರ ಆರೋಪ ಮಾಡಿದರು.

ಸೌಭಾಗ್ಯ ಲಕ್ಷ್ಮಿ ಕಾರ್ಖಾನೆಯಲ್ಲಿ ಭ್ರಷ್ಟಾಚಾರ ನಡೆದಿಲ್ಲ: ಸೌಭಾಗ್ಯ ಲಕ್ಷ್ಮಿ ಕಾರ್ಖಾನೆಗೂ ನನಗೂ ಸಂಬಂಧವಿಲ್ಲ. ಇದನ್ನು ನನ್ನ ಮಗ ನಡೆಸುತ್ತಾನೆ. ಕಾರ್ಖಾನೆಯಲ್ಲಿ ಯಾವುದೇ ಅವ್ಯವಹಾರ ಮಾಡಿಲ್ಲ. ಆದರೂ ಕೆಲವು ಸಕ್ಕರೆ ಕಾರ್ಖಾನೆಗಳು ರಿಕವರಿಯಲ್ಲಿ ಮೋಸ ಮಾಡುತ್ತದೆ. ಈ ಮೂಲಕ ಕೋಟ್ಯಂತರ ರೂಪಾಯಿ ಭ್ರಷ್ಟಾಚಾರ ನಡೆಸುತ್ತಾರೆ ಎಂದು ಹೇಳಿದರು.

ಸಿಡಿ ಮಹಾನಾಯಕ ಡಿಕೆಶಿ: ಡಿಕೆಶಿ ನನ್ನ ಬಗ್ಗೆ ಸ್ಪಷ್ಟವಾಗಿ ಮಾತನಾಡಿರುವ ಆಡಿಯೋ ಇದೆ. ಡಿಕೆಶಿ ಹಾಗೂ ಸಿಡಿ ಗ್ಯಾಂಗ್​ಗೆ ಶಿಕ್ಷೆ ಆಗಬೇಕು. ಸಿಡಿ ಮಹಾನಾಯಕನೇ ಡಿಕೆ ಶಿವಕುಮಾರ್​. ಅಧಿಕಾರಿಗಳ, ರಾಜಕಾರಣಿಗಳ ಸಾಕಷ್ಟು ವಿಡಿಯೋ ಅವರ ಬಳಿ ಇದೆ. ಈ ಮೂಲಕ ಬ್ಲಾಕ್​ಮೇಲ್​ ರಾಜಕಾರಣ ಮಾಡುತ್ತಿದ್ದಾರೆ ಎಂದರು. ಇಂಥವರ ಕಡೆ ಅಧಿಕಾರ ಕೊಟ್ಟರೆ ರಾಜ್ಯದ ಪರಿಸ್ಥಿತಿ ಹೇಗೆ ಎಂದು ಪ್ರಶ್ನಿಸಿದರು.

ಇದನ್ನೂ ಓದಿ : ರಮೇಶ್ ಜಾರಕಿಹೊಳಿಗೆ ವೈಯಕ್ತಿಕವಾಗಿ ಹಗುರವಾಗಿ ಮಾತಾಡುವ ಹೊಲಸು ಚಟವಿದೆ : ಚನ್ನರಾಜ್ ಹಟ್ಟಿಹೊಳಿ

Last Updated :Jan 30, 2023, 7:51 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.