ETV Bharat / state

ಮಲೆನಾಡು, ಕರಾವಳಿ ಭಾಗಗಳಲ್ಲಿ ಎಲೆಚುಕ್ಕಿ ರೋಗ : ವಿಧಾನಸಭೆಯಲ್ಲಿ ಗಂಭೀರ ಚರ್ಚೆ

author img

By

Published : Dec 21, 2022, 6:22 PM IST

Updated : Dec 21, 2022, 6:44 PM IST

ಮಲೆನಾಡು ಮತ್ತು ಕರಾವಳಿ ಭಾಗಗಳಲ್ಲಿ ಎಲೆಚುಕ್ಕಿ ರೋಗ ಕಳೆದ ಎರಡು ವರ್ಷಗಳಿಂದ ತೀವ್ರವಾಗಿ ಕಾಡುತ್ತಿದೆ. ಅನೇಕ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಳೆದು ನಿಂತ ಅಡಿಕೆ ರೋಗಕ್ಕೆ ತುತ್ತಾದರೆ ರೈತರು ಇದನ್ನು ತಡೆದುಕೊಳ್ಳುವುದಾದರೂ ಹೇಗೆ? ಎಂದು ಆರಗ ಜ್ಞಾನೇಂದ್ರ ಅವರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ವಿಧಾನಸಭೆಯಲ್ಲಿ ಗಂಭೀರ ಚರ್ಚೆ
ವಿಧಾನಸಭೆ

ವಿಧಾನಸಭೆಯಲ್ಲಿ ಗಂಭೀರ ಚರ್ಚೆ

ಬೆಳಗಾವಿ/ಬೆಂಗಳೂರು: ಇತ್ತೀಚಿನ ವರ್ಷಗಳಲ್ಲಿ ಬಾಧಿಸುತ್ತಿರುವ ಎಲೆಚುಕ್ಕಿ ರೋಗ ಹಾಗೂ ಅಡಿಕೆ ಎಲೆಚುಕ್ಕಿ ರೋಗ ಮಲೆನಾಡು ಮತ್ತು ಕರಾವಳಿ ಭಾಗಗಳಲ್ಲಿ ರೈತರನ್ನು ತೀವ್ರವಾಗಿ ಕಾಡುತ್ತಿದ್ದು, ಇದರ ಸಂಕಷ್ಟಗಳ ಕುರಿತು ಸದಸ್ಯರು ವಿಧಾನಸಭೆಯಲ್ಲಿ ಇಂದು ಚರ್ಚೆ ನಡೆಸಿದರು.

ಶಾಸಕ ಉಮಾನಾಥ್ ಕೋಟ್ಯಾನ್ ಅವರ ಪರವಾಗಿ ಶಾಸಕ ಸಂಜೀವ್ ಮಟಂದೂರ್ ಅವರು ಸಚಿವ ಮುನಿರತ್ನ ಅವರಿಗೆ ಪ್ರಶ್ನೆ ಮಾಡಿದ್ದರು. ಸಚಿವರ ಪರವಾಗಿ ಆರಗ ಜ್ಞಾನೇಂದ್ರ ಅವರು ಉತ್ತರಿಸಿ, ಮಲೆನಾಡು ಮತ್ತು ಕರಾವಳಿ ಭಾಗಗಳಲ್ಲಿ ಎಲೆಚುಕ್ಕಿ ರೋಗ ಕಳೆದ ಎರಡು ವರ್ಷಗಳಿಂದ ತೀವ್ರವಾಗಿ ಕಾಡುತ್ತಿದೆ. ಅನೇಕ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಳೆದು ನಿಂತ ಅಡಿಕೆ ರೋಗಕ್ಕೆ ತುತ್ತಾದರೆ ರೈತರು ಇದನ್ನು ತಡೆದುಕೊಳ್ಳುವುದಾದರೂ ಹೇಗೆ? ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ರೋಗ ನಿಯಂತ್ರಣಕ್ಕೆ ಹಲವಾರು ಕ್ರಮ: ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ಎಲೆಚುಕ್ಕಿ ರೋಗ ನಿಯಂತ್ರಣಕ್ಕೆ ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ. ವಿಜ್ಞಾನಿಗಳಿಗೆ ಸಂಶೋಧನೆ ನಡೆಸಿ ಪರಿಹಾರ ನೀಡಲು ತಕ್ಷಣವೇ ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ಎಲೆಚುಕ್ಕಿ ರೋಗ ನಿಯಂತ್ರಣಕ್ಕೆ ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ. ವಿಜ್ಞಾನಿಗಳಿಗೆ ಸಂಶೋಧನೆ ನಡೆಸಿ ಪರಿಹಾರ ನೀಡಲು ತಕ್ಷಣ 20.43 ಕೋಟಿ ರೂ. ಬಿಡುಗಡೆ ಮಾಡಿದ್ದೇವೆ. ಶಿವಮೊಗ್ಗದ ತೋಟಗಾರಿಕೆ ವಿವಿ ಹಾಗೂ ಕೃಷಿ ಇಲಾಖೆ, ಕೃಷಿ ವಿವಿಗಳಲ್ಲಿ ಹಿರಿಯ ವಿಜ್ಞಾನಿಗಳನ್ನು ಸಂಶೋಧನೆ ನಡೆಸಿ ಪರಿಹಾರ ನೀಡಬೇಕೆಂದು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಶಾಶ್ವತವಾದ ಪರಿಹಾರ ಅಗತ್ಯವಿದೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇತ್ತೀಚೆಗೆ ತಮ್ಮ ಸ್ವಕ್ಷೇತ್ರ ತೀರ್ಥಹಳ್ಳಿಗೆ ಭೇಟಿ ನೀಡಿದ ಮೇಲೆ ಅವರನ್ನು ತೋಟಕ್ಕೆ ಕರೆದುಕೊಂಡು ಹೋಗಿ ವಸ್ತುಸ್ಥಿತಿಯನ್ನು ಮನವರಿಕೆ ಮಾಡಿದ್ದೇವೆ. ಎಲೆಚುಕ್ಕಿ ರೋಗ ರೈತರನ್ನು ಹೈರಾಣಾಗಿಸಿದೆ. ಇದಕ್ಕೆ ಶಾಶ್ವತವಾದ ಪರಿಹಾರ ಅಗತ್ಯವಿದೆ. ಇತ್ತೀಚೆಗೆ ಕೇಂದ್ರ ಸರ್ಕಾರದ ಬಳಿ ನಿಯೋಗ ಕೊಂಡೊಯ್ದಿದ್ದೆವು. ಕೇಂದ್ರ ಸರ್ಕಾರವು ನಮಗೆ ಸೂಕ್ತವಾಗಿ ಸ್ಪಂದಿಸಿ ಸಂಶೋಧನೆ ನಡೆಸಲು ಅಗತ್ಯವಿರುವ ಹಣಕಾಸಿನ ನೆರವು ಸೇರಿದಂತೆ ಎಲ್ಲ ರೀತಿಯ ಭರವಸೆ ನೀಡುವುದಾಗಿ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

ಶಾಶ್ವತ ಪರಿಹಾರ ಕಂಡುಕೊಳ್ಳಬೇಕು: ಈ ಸಂದರ್ಭದಲ್ಲಿ ಶಾಸಕ ರಾಜುಗೌಡ ಮಾತನಾಡಿ, ಎಲೆಚುಕ್ಕಿ ರೋಗ ಮಲೆನಾಡಿನಲ್ಲಿ ಕಾಣಿಸಿಕೊಳ್ಳುತ್ತಿರುವುದರಿಂದ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ನನ್ನ ಕ್ಷೇತ್ರದಲ್ಲೇ ಅನೇಕ ಮಂದಿ ಸಾವಿಗೆ ಶರಣಾಗಿದ್ದಾರೆ. ಸರ್ಕಾರ ಪರಿಹಾರ ಒದಗಿಸಬೇಕು ಎಂದು ಮನವಿ ಮಾಡಿದರು. ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ ಶಾಸಕ ಸಿ. ಟಿ ರವಿ ಅವರು, ರಾಸಾಯನಿಕ ಬಳಕೆ ಕೂಡ ಎಲೆಚುಕ್ಕಿ ರೋಗಕ್ಕೆ ಕಾರಣ ಎಂದು ವಿಜ್ಞಾನಿಗಳು ಹೇಳುತ್ತಿದ್ದಾರೆ. ನಮಗೆ ತಕ್ಷಣ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ಸಲಹೆ ಮಾಡಿದರು.

ಮಾಜಿ ಸ್ಪೀಕರ್ ರಮೇಶ್ ಕುಮಾರ್ ಮಾತನಾಡಿ, ನಮ್ಮಲ್ಲಿ ಇಷ್ಟು ದೊಡ್ಡ ವಿಶ್ವವಿದ್ಯಾನಿಲಯಗಳಿವೆ. ಸಂಶೋಧನಾ ಕೇಂದ್ರಗಳಿವೆ. ಉಪಕುಲಪತಿಗಳು ಸೇರಿದಂತೆ ಘಟನಾಘಟಿಗಳಿದ್ದಾರೆ. ಒಂದು ಎಲೆಚುಕ್ಕಿ ರೋಗಕ್ಕೆ ಸಂಶೋಧನೆ ನಡೆಸಿ ಔಷಧಿ ಕಂಡು ಹಿಡಿಯಲು ಸಾಧ್ಯವಾಗಿದ್ದರೆ ಹೇಗೆ? ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಉಪನಾಯಕ ಯು. ಟಿ ಖಾದರ್ ಸೇರಿದಂತೆ ಮತ್ತಿತರರು ಎಲೆಚುಕ್ಕಿ ರೋಗಕ್ಕೆ ಶಾಶ್ವತ ಪರಿಹಾರ ಮತ್ತು ಬೆಳೆ ನಷ್ಟಕ್ಕೆ ಪರಿಹಾರ ಕೊಡಬೇಕೆಂದು ಮನವಿ ಮಾಡಿದರು.

ಓದಿ: ಎಲೆಚುಕ್ಕಿ ರೋಗದ ಖರ್ಚನ್ನು ಸರ್ಕಾರವೇ ಭರಿಸಲಿದೆ: ಸಿಎಂ ಬೊಮ್ಮಾಯಿ ಅಭಯ

Last Updated : Dec 21, 2022, 6:44 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.