ETV Bharat / state

ಮಗುವಿಗೆ ’ಕನ್ನಡ’ ಎಂದು ಹೆಸರಿಟ್ಟ ನಾದಬ್ರಹ್ಮ... ಈ ಕನ್ನಡತಿ ಗಡಿನಾಡ ಕನ್ನಡಿಗರ ಹೆಮ್ಮೆ!

author img

By

Published : Jan 8, 2021, 8:09 PM IST

Updated : Jan 9, 2021, 12:54 PM IST

ಈ ದಂಪತಿ ಅಪ್ಪಟ ಕನ್ನಡ ಅಭಿಮಾನಿಗಳು, ಕನ್ನಡ ಭಾಷೆಯೆಂದ್ರೆ ಇವರಿಗೆ ಅಪರೂಪದ ಪ್ರೀತಿ. ಭಾಷಾಭಿಮಾನದಿಂದಾಗಿ ಮಗುವಿಗೆ 'ಕನ್ನಡತಿ' ಎಂದು ನಾಮಕರಣ ಮಾಡಿದ್ದರು. ನಾದಬ್ರಹ್ಮ ಹಂಸಲೇಖ ಬೆಂಗಳೂರಿನ ಬೃಹತ್ ವೇದಿಕೆಯಲ್ಲಿ ಈ ಮಗುವಿಗೆ 'ಕನ್ನಡದ ವೃದ್ಧಿ' ಎಂದು ನಾಮಕರಣ ಮಾಡಿದ್ದಾರೆ..

couple-naming-her-daughter-is-named-as-kannada-vrudhi
ಭಾಷಾಪ್ರೇಮ ಮೆರೆದ ಗಡಿನಾಡ ದಂಪತಿ

ಚಿಕ್ಕೋಡಿ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಕನ್ನಡತಿ ಎಂಬ ಧಾರಾವಾಹಿ ಅಭಿಮಾನಕ್ಕೆ ಒಳಗಾಗಿ ಮಗಳಿಗೆ 'ಕನ್ನಡತಿ' ಎಂದು ಹೆಸರನ್ನು ನಾಮಕರಣ ಮಾಡಿ ಕನ್ನಡ ಭಾಷಾಭಿಮಾನವನ್ನು ಮೆರೆದಿರುವ ಘಟನೆ ನಡೆದಿದೆ.

ಬೆಳಗಾವಿ ಜಿಲ್ಲೆ ಚಿಕ್ಕೋಡಿ ಪಟ್ಟಣದ ಸಿದ್ಧನಗೌಡ ಪಾಟೀಲ ಮತ್ತು ಅಶ್ವಿನಿ ಪಾಟೀಲ ದಂಪತಿಗೆ ಇತ್ತೀಚಿಗೆ ಹೆಣ್ಣು ಮಗು ಜನಿಸಿದೆ. ಈ ದಂಪತಿ ಅಪ್ಪಟ ಕನ್ನಡ ಅಭಿಮಾನಿಗಳಾಗಿದ್ದು, ತಮ್ಮ ಮಗಳಿಗೆ 'ಕನ್ನಡದ ವೃದ್ಧಿ' ಎಂದು ಹೆಸರನ್ನು ನಾಮಕರಣ ಮಾಡಿದ್ದಾರೆ.

ಓದಿ: 'ಕನ್ನಡತಿ' ಧಾರಾವಾಹಿಯ ಅಭಿಮಾನಿ ದಂಪತಿ ಮಗುವಿಗೆ ನಾದಬ್ರಹ್ಮ ಇಟ್ಟ ಹೆಸರೇನು ಗೊತ್ತೇ?

ಈ ದಂಪತಿ ಅಪ್ಪಟ ಕನ್ನಡ ಅಭಿಮಾನಿಗಳು, ಕನ್ನಡ ಭಾಷೆಯೆಂದ್ರೆ ಇವರಿಗೆ ಅಪರೂಪದ ಪ್ರೀತಿ. ಭಾಷಾಭಿಮಾನದಿಂದಾಗಿ ಮಗುವಿಗೆ 'ಕನ್ನಡತಿ' ಎಂದು ನಾಮಕರಣ ಮಾಡಿದ್ದರು. ನಾದಬ್ರಹ್ಮ ಹಂಸಲೇಖ ಬೆಂಗಳೂರಿನ ಬೃಹತ್ ವೇದಿಕೆಯಲ್ಲಿ ಈ ಮಗುವಿಗೆ 'ಕನ್ನಡದ ವೃದ್ಧಿ' ಎಂದು ನಾಮಕರಣ ಮಾಡಿದ್ದಾರೆ.

ಸಿದ್ಧನಗೌಡ ಪಾಟೀಲ ಅವರು ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದು, ಕನ್ನಡ ಭಾಷೆಯ ಮೇಲೆ ಅಪಾರ ಪ್ರೀತಿಯಿಂದ ಅವರಿಗೆ ಜನಿಸುವ ಮಗುವಿಗೆ ಕನ್ನಡದ ಹೆಸರನ್ನು ನಾಮಕರಣ ಮಾಡಬೇಕು ಎಂದು ನಿರ್ಧರಿಸಿದ್ದರು.

ಸಿದ್ಧನಗೌಡ ಪಾಟೀಲ ಅವರ ಧರ್ಮ ಪತ್ನಿಯಾದ ಅಶ್ವಿನಿ ಪಾಟೀಲ ಸಹ ಕನ್ನಡ ಅಭಿಮಾನಿಯಾಗಿದ್ದಾರೆ. ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಕನ್ನಡತಿ ಎಂಬ ಧಾರಾವಾಹಿ ಅಭಿಮಾನಕ್ಕೊಳಗಾಗಿ ತಮ್ಮ ಮಗಳಿಗೆ ಅದೇ ಹೆಸರನ್ನು ನಾಮಕರಣ ಮಾಡಲು ಇಚ್ಛಿಸಿದರು ಎಂದು ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.

Last Updated : Jan 9, 2021, 12:54 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.