ETV Bharat / state

10 ದಿನಗಳ ಹಿಂದಷ್ಟೇ ದಾಂಪತ್ಯಕ್ಕೆ ಕಾಲಿಟ್ಟ ನವಜೋಡಿ ಅಪಘಾತದಲ್ಲಿ ಸಾವು

author img

By

Published : Apr 2, 2023, 12:00 PM IST

Updated : Apr 2, 2023, 12:27 PM IST

ನಿಪ್ಪಾಣಿ-ಮುದೋಳ ರಾಜ್ಯ ಹೆದ್ದಾರಿಯಲ್ಲಿ ಭೀಕರ ಅಘಾತ ಸಂಭವಿಸಿದ್ದು ನವದಂಪತಿ ಸಾವಿಗೀಡಾಗಿದ್ದಾರೆ.

road accident in Belagavi
ನಿಪ್ಪಾಣಿ- ಮುದೋಳ ರಾಜ್ಯ ಹೆದ್ದಾರಿಯಲ್ಲಿ ಭೀಕರ ಅಘಾತ

ಬೆಳಗಾವಿ: ಕಳೆದ 10 ದಿನಗಳ ಹಿಂದಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ನವದಂಪತಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ‌ಜಿಲ್ಲೆಯ ಮೂಡಲಗಿ ತಾಲೂಕಿನ ಹಳ್ಳೂರು ಗ್ರಾಮದ ನಿಪ್ಪಾಣಿ- ಮುದೋಳ ರಾಜ್ಯ ಹೆದ್ದಾರಿಯಲ್ಲಿ ನಿನ್ನೆ(ಶನಿವಾರ) ಘಟನೆ ಸಂಭವಿಸಿದೆ. ಇಂದ್ರಜಿತ್​ ಮೋಹನ್ ಡಮ್ಮಣಗಿ(27) ಹಾಗೂ ಕಲ್ಯಾಣಿ ಇಂದ್ರಜಿತ್ ಡಮ್ಮಣಗಿ(24) ಮೃತರು.

ಮಹಾರಾಷ್ಟ್ರದ ಮೂಲದ ದಂಪತಿ ಬಾಗಲಕೋಟೆ ಜಿಲ್ಲೆಯ ಸುಪ್ರಸಿದ್ಧ ಬಾದಾಮಿ ಬನಶಂಕರಿ ದೇವಿ ದರ್ಶನ ಪಡೆದು ಮರಳಿ‌ ಮನೆಗೆ ತೆರಳುವಾಗ ಕಾರು ಹಾಗೂ ಟ್ಯಾಂಕರ್ ಮಧ್ಯೆ ಅಪಘಾತ ಘಟಿಸಿದೆ. ಸ್ಥಳಕ್ಕೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ. ಮೂಡಲಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೈಕ್‌ ಅಪಘಾತದಲ್ಲಿ ಮಹಿಳೆ ಸಾವು: ಎರಡು ಬೈಕ್​ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಓರ್ವ ಮಹಿಳೆ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಕೋಟಬಾಗಿ ಗ್ರಾಮದ ಬಳಿ ನಿನ್ನೆ ನಡೆದಿದೆ. ಹುಕ್ಕೇರಿ ತಾಲೂಕಿನ ಗುಡಸ್ ಗ್ರಾಮದ ನಿಲವ್ವ ಕಾಂಬಳೆ (45) ಮೃತ ದುರ್ದೈವಿ. ತಾಯಿ ನಿಲವ್ವ ಹಾಗೂ ಮಗ ರವೀಂದ್ರ ಕಾಂಬಳೆ ಇಬ್ಬರು ಸಂಕೇಶ್ವರ-ಜೇವರ್ಗಿ ರಾಜ್ಯ ಹೆದ್ದಾರಿಯಲ್ಲಿ ಹುಕ್ಕೇರಿ ಕಡೆಗೆ ಸಂಚರಿಸುತ್ತಿದ್ದಾಗ ಅದೇ ಗ್ರಾಮದ ಬಸವರಾಜ ರಾಜಾಪೂರೆ ಎಂಬುವವರ ಬೈಕ್​​ಗೆ ಗುದ್ದಿ ಘಟನೆ ಸಂಭವಿಸಿದೆ‌.

ಅಪಘಾತದಲ್ಲಿ ನಿಲವ್ವ(ತಾಯಿ) ತಲೆಗೆ ಗಂಭೀರ ಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಇಬ್ಬರೂ ಬೈಕ್ ಚಾಲಕರಿಗೆ ಗಂಭೀರ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ. ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಸ್ತೆ ದಾಟುತ್ತಿದ್ದ ಮಹಿಳೆ ಸಾವು: ಮಾ.30ರಂದು ಮಂಗಳೂರು ನಗರದಲ್ಲಿ ಖಾಸಗಿ ಬಸ್​ ಚಾಲಕನ ನಿರ್ಲಕ್ಷ್ಯತನದ ಚಾಲನೆಯಿಂದಾಗಿ ವೃದ್ಧೆಯೊಬ್ಬರು ಮೃತಪಟ್ಟ ಘಟನೆ ಬೆಂದೂರ್ ವೆಲ್​ನಲ್ಲಿ ಸರ್ಕಲ್​ನಲ್ಲಿ ನಡೆದಿತ್ತು. ಐರಿನ್ ಡಿಸೋಜ(65) ಮೃತ ಮಹಿಳೆ. ಖಾಸಗಿ ಬಸ್​ಗಳ ಧಾವಾಂತಕ್ಕೆ ಒಂದೇ ವಾರದಲ್ಲಿ ನಡೆದ ಎರಡನೇ ಬಲಿಯಾಗಿದೆ. ಮಾರ್ಚ್ 24 ರಂದು ತಾಯಿ ಮತ್ತು ಮಗ ಸಂಚರಿಸುತ್ತಿದ್ದ ದ್ವಿಚಕ್ರ ವಾಹನಕ್ಕೆ ಬಸ್​ ಡಿಕ್ಕಿ ಹೊಡೆದು ಬಾಲಕ ಸ್ಥಳದಲ್ಲಿಯೇ ಸಾವನ್ನಪ್ಪಿದ್ದನು.

ಇದನ್ನೂ ಓದಿ: ಖಾಸಗಿ ಬಸ್ ಚಾಲಕನ ಅಜಾಗರೂಕತೆಗೆ ರಸ್ತೆ ದಾಟುತ್ತಿದ್ದ ಮಹಿಳೆ ಸ್ಥಳದಲ್ಲೇ ಸಾವು.. ದೃಶ್ಯ ಸಿಸಿಟಿವಿಯಲ್ಲಿ ಸೆರೆ

Last Updated : Apr 2, 2023, 12:27 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.