ETV Bharat / state

ಕೊಲೆ ಯತ್ನ ಆರೋಪಿಗೆ ಕೊರೊನಾ: ಕಾಕತಿ ಠಾಣೆ ಪೊಲೀಸರು ಕ್ವಾರಂಟೈನ್​​

author img

By

Published : Jul 8, 2020, 4:58 PM IST

ಕಾಕತಿ ಠಾಣೆ ಪೊಲೀಸರು ಬಂಧಿಸಿದ್ದ ಆರೋಪಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈತನನ್ನು ನಿನ್ನೆಯಷ್ಟೇ ಹಿಂಡಲಗಾ ಜೈಲಿಗೆ ಶಿಫ್ಟ್ ಮಾಡಿದ್ದರು. ಇಂದು ಬೆಳಗ್ಗೆ ಆರೋಪಿಗೆ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಜಿಲ್ಲಾಸ್ಪತ್ರೆಯ ಕೋವಿಡ್ ವಾರ್ಡ್​ಗೆ ಆರೋಪಿಯನ್ನು ದಾಖಲಿಸಲಾಗಿದೆ.

corona-positive
ಕೊಲೆಯತ್ನ ಆರೋಪಿಗೆ ಕೊರೊನಾ ಧೃಡ

ಬೆಳಗಾವಿ: ಕೊಲೆ ಪ್ರಯತ್ನ ಪ್ರಕರಣದಡಿ ಬಂಧಿತನಾಗಿದ್ದ ಆರೋಪಿಗೆ ಕೊರೊನಾ ಸೋಂಕು ದೃಢಪಟ್ಟಿರುವ ಹಿನ್ನೆಲೆ ಕಾಕತಿ ಪೊಲೀಸ್​​ ಠಾಣೆಯನ್ನು ಸೀಲ್​ ಡೌನ್​ ಮಾಡಲಾಗಿದೆ.

ಕಾಕತಿ ಠಾಣೆ ಪೊಲೀಸರು ಬಂಧಿಸಿದ್ದ ಆರೋಪಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈತನನ್ನು ನಿನ್ನೆಯಷ್ಟೇ ಹಿಂಡಲಗಾ ಜೈಲಿಗೆ ಶಿಫ್ಟ್ ಮಾಡಿದ್ದರು. ಇಂದು ಬೆಳಗ್ಗೆ ಆರೋಪಿಗೆ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಜಿಲ್ಲಾಸ್ಪತ್ರೆಯ ಕೋವಿಡ್ ವಾರ್ಡ್​ಗೆ ಆರೋಪಿಯನ್ನು ದಾಖಲಿಸಲಾಗಿದೆ.

40 ವರ್ಷ ವಯಸ್ಸಿನ ಆರೋಪಿಗೆ ಸೋಂಕು ದೃಢವಾದ ಹಿನ್ನೆಲೆಯಲ್ಲಿ ಆರೋಪಿಯನ್ನು ಬಂಧಿಸಿದ್ದ ಕಾಕತಿ ಠಾಣೆ ಪೊಲೀಸರಲ್ಲಿ ಕೊರೊನಾ ಭಯ ಶುರುವಾಗಿದೆ. ಆರೋಪಿಯ ಜೊತೆ ಪ್ರಾಥಮಿಕ ಸಂಪರ್ಕ ಹೊಂದಿದ್ದ ಮೂವರು ಪೊಲೀಸರನ್ನು ಕ್ವಾರಂಟೈನ್ ಮಾಡಲಾಗಿದೆ. ಜೊತೆಗೆ ಪೊಲೀಸ್​ ಠಾಣೆಯನ್ನು ಸೀಲ್​ ಡೌನ್​ ಮಾಡಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.