ETV Bharat / state

ಪುರುಷರಿಗೂ ಶಿಶುಪಾಲನ ರಜೆ.. ಆಯನೂರು ಮಂಜುನಾಥ್ - ಸಿಎಂ ಬೊಮ್ಮಾಯಿ ನಡುವೆ ಸ್ವಾರಸ್ಯಕರ ಚರ್ಚೆ

author img

By

Published : Dec 16, 2021, 7:13 PM IST

ಬೆಳಗಾವಿ ವಿಧಾನ ಪರಿಷತ್ ಕಲಾಪದಲ್ಲಿ ಶಿಶುಪಾಲನ ರಜೆ ಕುರಿತಾಗಿ ಸ್ವಾರಸ್ಯಕರ ಚರ್ಚೆ ನಡೆದಿದೆ. ಮಗು ಜನಿಸಿದ ವೇಳೆ ಪತ್ನಿ ನಿಧನವಾದರೆ ಪುರುಷರಿಗೆ ಶಿಶುಪಾಲನ ರಜೆ ನೀಡಲಾಗುತ್ತದೆಯೇ.? ಎಂಬುದಾಗಿ ಆಯನೂರು ಮಂಜುನಾಥ್ ಪ್ರಶ್ನಿಸಿದ್ದಾರೆ.

child-care-leave-for-male-employees-a-debate-in-council
ಆಯನೂರು ಮಂಜುನಾಥ್-ಸಿಎಂ ಬೊಮ್ಮಾಯಿ ನಡುವೆ ಸ್ವಾರಸ್ಯಕರ ಚರ್ಚೆ

ಬೆಳಗಾವಿ: ಶಿಶುಪಾಲನಾ ರಜೆ ಹಾಗೂ ಶಿಶು ಪದದ ವಿಚಾರವಾಗಿ ವಿಧಾನ ಪರಿಷತ್​ನಲ್ಲಿ ಸ್ವಾರಸ್ಯಕರ ಚರ್ಚೆ ನಡೆಯಿತು. ಪ್ರಶ್ನೋತ್ತರ ಅವಧಿಯಲ್ಲಿ ಚುಕ್ಕೆ ಗುರುತಿನ ಪ್ರಶ್ನೆ ಮೇಲಿನ ಚರ್ಚೆಯಲ್ಲಿ ಬಿಜೆಪಿ ಸದಸ್ಯ ಆಯನೂರು ಮಂಜುನಾಥ್ ಮಾತನಾಡಿ, ಕಾನೂನು ನಿಯಮಾವಳಿ ಪ್ರಕಾರ ಶಿಶು ಪಾಲನಾ ರಜೆ ಮಹಿಳೆಗೆ ನೀಡಿದ ರೀತಿ ಪುರುಷರಿಗೂ ರಜೆ ಬೇಕು.

ಸರ್ಕಾರಿ ನೌಕರರಲ್ಲಿ ಶೇ.40 ಹಾಗೂ ಅದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಒಂದೇ ಸಂದರ್ಭ ಹೆರಿಗೆ ರಜೆಗೆ ಹೆಚ್ಚಿನ ಮಹಿಳೆಯರು ರಜೆ ಮೇಲೆ ಹೋದರೆ ಸಾರ್ವಜನಿಕರಿಗೆ ತೊಂದರೆ ಆಗುತ್ತದೆ ಎಂದು ವಾದಿಸಿದರು.

ಆಯನೂರು ಮಂಜುನಾಥ್-ಸಿಎಂ ಬೊಮ್ಮಾಯಿ ನಡುವೆ ಸ್ವಾರಸ್ಯಕರ ಚರ್ಚೆ

ಒಂದು ಕಚೇರಿಯಲ್ಲಿ ಒಮ್ಮೆಲೆ ಹೆಚ್ಚಿನವರು ಈ ರಜೆಯಲ್ಲಿದ್ದರೆ ಸಾರ್ವಜನಿಕರಿಗೆ ಸಮಸ್ಯೆಯಾಗಲಿದೆ. ಇದಕ್ಕೆ ಸರ್ಕಾರ ಸೂಚಿಸುವ ಪರಿಹಾರ ಏನು? ಎಂಬ ಗಂಭೀರ ವಿಚಾರವನ್ನು ಹಾಸ್ಯ ಮಿಶ್ರಿತವಾಗಿ ಪ್ರಸ್ತಾಪ ಮಾಡಿದರು. ಇದಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಸಹ ಅದೇ ದಾಟಿಯಲ್ಲಿ ಉತ್ತರ ನೀಡಿದಾಗ, ಅಷ್ಟು ಸಮಾಧಾನಗೊಳ್ಳದ ಆಯನೂರು ಮಂಜುನಾಥ್ ವಿಷಯದ ಗಂಭೀರತೆ ಅರಿಯುವಂತೆ ವಿಸ್ತೃತ ವಿವರಣೆ ನೀಡಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಸಿಎಂ, ನಾನು ಶೀಘ್ರವೇ ಮಂಜಣ್ಣ ಜತೆ ವಿಶೇಷ ಸಭೆ ನಡೆಸಿ, ಮಾಹಿತಿ ಪಡೆದು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುತ್ತೇನೆ ಎಂದರು. ಮಾತಿನ ಮಧ್ಯೆ ಸಿಎಂ ಬಸವರಾಜ್ ಬೊಮ್ಮಾಯಿ, ಮಗು ಆಗುವುದು ದೇವರ ಕೃಪೆ ಎಂದರು. ಅದಕ್ಕೆ ಸಿಎಂ ಕಾಲೆಳೆಯುವ ಪ್ರಯತ್ನ ಮಾಡಿದ ಆಯನೂರು ಮಂಜುನಾಥ್ ಇದು ದೇವರಲ್ಲ ಪುರುಷರ ಕೃಪೆ ಎಂದರು. ಅದಕ್ಕೆ ಪ್ರತ್ಯುತ್ತರ ನೀಡಿದ ಸಿಎಂ ಇದರಲ್ಲಿ ಅರ್ಧ ಪ್ರಯತ್ನ ಪುರುಷರದ್ದಾದರೆ ದೇವರ ಕೃಪೆ ದೊಡ್ಡದಿದೆ ಎಂದು ಹಾಸ್ಯ ಚಟಾಕಿ ಹಾರಿಸಿದರು.

ಇದನ್ನೂ ಓದಿ: ಹೆಣ್ಣು ಮಕ್ಕಳ ಮದುವೆಯನ್ನು ಇನ್ನು ಈ ವಯಸ್ಸಿನಲ್ಲಿ ಪೋಷಕರು ಮಾಡಬೇಕು..!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.