ETV Bharat / state

15 ಬೈಕ್ ಕದ್ದ ಭೂಪ: ಪ್ರಕರಣ ಬೇಧಿಸಿದ ಪೊಲೀಸರು

author img

By

Published : Sep 4, 2020, 12:48 AM IST

ಬೇರೆ ಜಿಲ್ಲೆಗಳಲ್ಲಿ ದ್ವಿಚಕ್ರ ವಾಹನ ಕಳ್ಳತನ ಮಾಡುತ್ತಿದ್ದ ಆರೋಪಿ ರಂಜಾನ್ ಹುಸೇನ್ ಎಂಬಾತನನ್ನು ಅಥಣಿ ಪೊಲೀಸರು ಬಂಧಿಸಿದ್ದಾರೆ.

bike thief arrest in athani
ದ್ವಿಚಕ್ರ ವಾಹನ ಕಳ್ಳತನ ಮಾಡುತ್ತಿದ್ದ ಆರೋಪಿ ರಂಜಾನ್ ಹುಸೇನ್ ಬಂಧನ

ಅಥಣಿ: ದ್ವಿಚಕ್ರ ವಾಹನಗಳನ್ನು ಕದಿಯುತ್ತಿದ್ದ ಶಿರಹಟ್ಟಿ ಹಾಲಿ ಯಲ್ಲಮ್ಮವಾಡಿ ನವ ಗ್ರಾಮದ ನಿವಾಸಿ ರಂಜಾನ್ ಹುಸೇನಸಾಬ ಐನಾಪೂರ (27) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

bike thief arrest in athani
ದ್ವಿಚಕ್ರ ವಾಹನ ಕಳ್ಳತನ ಮಾಡುತ್ತಿದ್ದ ಆರೋಪಿ ರಂಜಾನ್ ಹುಸೇನ್ ಬಂಧನ

ತಾಲೂಕಿನಲ್ಲಿ ಈಚೆಗೆ ದ್ವಿಚಕ್ರ ವಾಹನ ಕಳ್ಳತನಗಳ ಪ್ರಕರಣಗಳು ಹೆಚ್ಚಾದ ಹಿನ್ನೆಲೆ ಬೆಳಗಾವಿ ಎಸ್​ಪಿ ಲಕ್ಷ್ಮಣ್ ನಿಂಬರಗಿ ಹಾಗೂ ಅಥಣಿ ಡಿವೈಎಸ್ಪಿ ಎಸ್.ವಿ.ಗಿರೀಶ್ ಅವರ ನೇತೃತ್ವದಲ್ಲಿ ಅಥಣಿ ಪೊಲೀಸರು ತಂಡ ರಚಿಸಿದ್ದರು.

ಅಂದಾಜು 5 ಲಕ್ಷ ರೂಪಾಯಿ ಹಾಗೂ 15 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಬೆಳಗಾವಿ, ಬಾಗಲಕೋಟೆ, ಮತ್ತು ಮಹಾರಾಷ್ಟ್ರ ರಾಜ್ಯದ ವಿವಿಧ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿವೆ.

ಪ್ರಕರಣದ ಜಾಡು ಪತ್ತೆ ಹಚ್ಚಿರುವ ಪಿಎಸ್ಐ ಎಂ.ಡಿ.ಘೋರಿ ಹಾಗೂ ಅಥಣಿ ಪಿಎಸ್ಐ ಕುಮಾರ್ ಹಾಡಕಾರ ಮತ್ತು ತನಿಖಾ ತಂಡದ ಕಾರ್ಯವನ್ನು ಶ್ಲಾಘಿಸಿ, ಆರಕ್ಷಕ ಅಧೀಕ್ಷಕರು ನಗದು ಬಹುಮಾನ ಮತ್ತು ಪ್ರಶಂಸನಾ ಪತ್ರ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.