ETV Bharat / state

ಬೆಳಗಾವಿ ಪಾಲಿಕೆ ಚುನಾವಣೆಯ ಬಿಜೆಪಿ ಮೊದಲ‌ ಪಟ್ಟಿ ಘೋಷಣೆ

author img

By

Published : Aug 22, 2021, 10:21 PM IST

ಪಾಲಿಕೆಯ ಚುನಾವಣೆಯ ಅಭ್ಯರ್ಥಿ ಬಗ್ಗೆ ಬಿಜೆಪಿಯಿಂದ ಕೌನ್ಸಿಲಿಂಗ್ ನಡೆಸಲಾಗಿದೆ. 250 ಅರ್ಜಿಗಳು ಬಂದಿದ್ದವು. ಎಲ್ಲರ ಸಂದರ್ಶನ ಮಾಡಿ, ಅವರ ಹಿನ್ನೆಲೆ, ಕ್ರಿಮಿನಲ್ ಬ್ಯಾಕ್ ಗ್ರೌಂಡ್ ಸೇರಿದಂತೆ ಅವರು ಗೆಲುವು ಸಾಧಿಸಿದ ಮೇಲೆ ಯಾವ ರೀತಿ ಅಭಿವೃದ್ಧಿ ಪಡಿಸುತ್ತಾರೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಟಿಕೆಟ್ ನೀಡಲಾಗಿದೆ..

belgavi
ಬಿಜೆಪಿ ಮೊದಲ‌ ಪಟ್ಟಿ ಘೋಷಣೆ

ಬೆಳಗಾವಿ : ಬೆಳಗಾವಿ ಮಹಾನಗರ ಪಾಲಿಕೆಯ ಅಭ್ಯರ್ಥಿಗಳ 58 ವಾರ್ಡ್​​ಗಳ ಪೈಕಿ ಮೊದಲ ಹಂತದಲ್ಲಿ 21ಜನ ಬಿಜೆಪಿ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿದೆ. ಇನ್ನುಳಿದ ಅಭ್ಯರ್ಥಿಗಳ ಪಟ್ಟಿಯನ್ನು ಸೋಮವಾರ ಬೆಳಗ್ಗೆ ಬಿಡುಗಡೆ ಮಾಡಲಾಗುವುದು ಎಂದು ಬೆಳಗಾವಿ ಉಸ್ತುವಾರಿಯಾಗಿರುವ ಶಾಸಕ ಅಭಯ್ ಪಾಟೀಲ ಹೇಳಿದರು.

ಬಿಜೆಪಿ ಮೊದಲ‌ ಪಟ್ಟಿ ಘೋಷಣೆ

ನಗರದಲ್ಲಿ ಮಾತನಾಡಿದ ಅವರು, ಬಿಜೆಪಿ ವರಿಷ್ಠರ ಸೂಚನೆ ಮೇರೆಗೆ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ‌ ಪಕ್ಷದ ಚಿಹ್ನೆಯ ಮೇಲೆ ಸ್ಪರ್ಧೆ ಮಾಡಲು ನಿರ್ಧರಿಸಲಾಗಿದೆ. ಆದ್ರೆ, ಬೇರೆ- ಬೇರೆ ಪಕ್ಷದವರು ಅಭ್ಯರ್ಥಿಗಳ ಆಯ್ಕೆ ಮಾಡುವ ಗೊಂದಲದಲ್ಲಿದ್ದು, ಇನ್ನೂ ಪಾಲಿಕೆಯ ಅಭ್ಯರ್ಥಿಗಳನ್ನು ಘೋಷಣೆ ಮಾಡುವಲ್ಲಿ ಮೀನಾಮೇಷ ಎಣಿಸುತ್ತಿದ್ದಾರೆ ಎಂದು ಕಾಂಗ್ರೆಸ್​ಗೆ ಟಾಂಗ್ ನೀಡಿದರು.

ಕಳೆದ 25 ವರ್ಷಗಳ ಬಳಿಕ ಬೆಳಗಾವಿ ‌ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಚಿಹ್ನೆ ಮೇಲೆ ಚುನಾವಣೆ ಎದುರಿಸಲು ನಿರ್ಧಾರ ಮಾಡಲಾಗಿದೆ. ಬಿಜೆಪಿ ರಾಷ್ಟ್ರದಲ್ಲಿ ಬಲಿಷ್ಠ ಪಕ್ಷವಾಗಿ ಹೊರ ಹೊಮ್ಮುತ್ತಿದೆ. ಬಿಜೆಪಿ ಬೆಳಗಾವಿ ಪಾಲಿಕೆಯ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದೆ. 58ರಲ್ಲಿ 45 ವಾರ್ಡ್ ಗಳಲ್ಲಿ ಗೆಲುವು ಸಾಧಿಸಿ ಪಾಲಿಕೆಯಲ್ಲಿ ಮೇಯರ್ ಸ್ಥಾನವನ್ನ ಅಲಂಕರಿಸುತ್ತೇವೆ ಎಂದರು.

ಪಾಲಿಕೆಯ ಚುನಾವಣೆಯ ಅಭ್ಯರ್ಥಿ ಬಗ್ಗೆ ಬಿಜೆಪಿಯಿಂದ ಕೌನ್ಸಿಲಿಂಗ್ ನಡೆಸಲಾಗಿದೆ. 250 ಅರ್ಜಿಗಳು ಬಂದಿದ್ದವು. ಎಲ್ಲರ ಸಂದರ್ಶನ ಮಾಡಿ, ಅವರ ಹಿನ್ನೆಲೆ, ಕ್ರಿಮಿನಲ್ ಬ್ಯಾಕ್ ಗ್ರೌಂಡ್ ಸೇರಿದಂತೆ ಅವರು ಗೆಲುವು ಸಾಧಿಸಿದ ಮೇಲೆ ಯಾವ ರೀತಿ ಅಭಿವೃದ್ಧಿ ಪಡಿಸುತ್ತಾರೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಟಿಕೆಟ್ ನೀಡಲಾಗಿದೆ ಎಂದರು.

ಮೊದಲ ಹಂತದಲ್ಲಿ 21 ಜನರ ಪಟ್ಟಿ ಬಿಡುಗಡೆ:

ವಾರ್ಡ್​​​​ ನಂಬರ್ 1- ಉಷಾ ಚೌಹಾಣ್

ವಾರ್ಡ್​​​​ ನಂಬರ್ 6 -ಸಂತೋಷ ಪಡೆನಕರ

ವಾರ್ಡ್​​​​ ನಂಬರ್13- ನಾಗವೇಣಿ ಶಿಂಧೆ

ವಾರ್ಡ್ ನಂಬರ್ 14-ನಿಖಿಲ ಮುರುಕಟ್ಟೆ

ವಾರ್ಡ್ ನಂಬರ್ 20 -ಲತಾ ಪಾಟೀಲ

ವಾರ್ಡ್ ನಂಬರ್26- ರೇಖಾ ಹೂಗಾರ

ವಾರ್ಡ್ ನಂಬರ್ 31- ವೀಣಾ ವಿಜಯಪುರೆ

ವಾರ್ಡ್ 35 ಲಕ್ಷ್ಮೀ- ರಾಠೋಡ

ವಾರ್ಡ್ ನಂಬರ್ 36 -ರಣಜೀತ ಕಲಾಲ

ವಾರ್ಡ್ ನಂಬರ್ 46- ರೂಪಾ ಚಿಕ್ಕಲದಿನ್ನಿ

ವಾರ್ಡ್ ನಂಬರ್ 48- ಭೂಪಾಲ ಅಲಕನೂರೆ

ವಾರ್ಡ್ 55 ಸವಿತಾ - ಪಾಟೀಲ

ವಾರ್ಡ ನಂಬರ್ 15- ನೇತ್ರಾವತಿ ಭಗವತ್

ವಾರ್ಡ್ ನಂಬರ್22- ರವಿ ಸಾಂಬ್ರೇಕರ್

ವಾರ್ಡ್ ನಂಬರ್ 23 -ಜಯಂತ ಜಾಧವ

ವಾರ್ಡ್ ನಂಬರ್27 -ಸಂದೀಪ ಜಾಧವ

ವಾರ್ಡ್ ನಂಬರ್ 29 -ನಿತೀನ್ ಜಾಧವ

ವಾರ್ಡ್ ನಂಬರ್ 41 -ಮಂಗೇಶ ಪವಾರ್

ವಾರ್ಡ್ ನಂಬರ್ 50 -ಸರೀಕಾ ಪಾಟೀಲ

ವಾರ್ಡ್ ನಂಬರ್ 58- ಪ್ರಿಯಾ ಸಾತಗೌಡರ

ಮೊದಲ ಹಂತದಲ್ಲಿ ಅಭ್ಯರ್ಥಿಗಳ ಪಟ್ಟಿ ಇದ್ದಾಗಿದ್ದು, ಉಳಿದ ವಾರ್ಡ್​​ಗಳ ಪಟ್ಟಿ ಸೋಮವಾರ ಬೆಳಗ್ಗೆ ಬಿಡುಗಡೆ ಮಾಡಲಾಗುವುದು ಎಂದು ಶಾಸಕ ಅಭಯ ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.