ETV Bharat / state

ಶಿವಸೇನೆ ವಕ್ತಾರ ಸಂಜಯ್​ ರಾವತ್​ಗೆ ಬೆಳಗಾವಿ ಕೋರ್ಟ್​ನಿಂದ ಸಮನ್ಸ್

author img

By

Published : Nov 28, 2022, 6:18 PM IST

ಪ್ರಚೋದನಾತ್ಮಕ ಭಾಷಣ ಆರೋಪ ಪ್ರಕರಣ ಸಂಬಂಧ ಶಿವಸೇನೆ ವಕ್ತಾರ, ರಾಜ್ಯಸಭೆ ಸದಸ್ಯ ಸಂಜಯ್ ರಾವತ್‌ಗೆ ಬೆಳಗಾವಿ ನ್ಯಾಯಾಲಯವು ಸಮನ್ಸ್​ ಜಾರಿಗೊಳಿಸಿದೆ.

Belagavi court summons to shiv sena leader sanjay raut
ಶಿವಸೇನೆ ವಕ್ತಾರ ಸಂಜಯ್​ ರಾವತ್​ಗೆ ಬೆಳಗಾವಿ ಕೋರ್ಟ್​ನಿಂದ ಸಮನ್ಸ್

ಬೆಳಗಾವಿ: ಪ್ರಚೋದನಾತ್ಮಕ ಭಾಷಣ ಮಾಡಿರುವ ಆರೋಪದ ಮೇಲೆ ಶಿವಸೇನೆ ವಕ್ತಾರ, ರಾಜ್ಯಸಭೆ ಸದಸ್ಯ ಸಂಜಯ್ ರಾವತ್‌ಗೆ ಬೆಳಗಾವಿ ನಾಲ್ಕನೇ ಜೆಎಂಎಫ್‌ಸಿ ನ್ಯಾಯಾಲಯವು ಸಮನ್ಸ್​ ಜಾರಿ ಮಾಡಿದೆ.

ಸಂಜಯ್ ರಾವತ್‌ಗೆ ಡಿಸೆಂಬರ್ 1ಕ್ಕೆ ವಿಚಾರಣೆಗೆ ಹಾಜರಾಗುವಂತೆ ನ್ಯಾಯಾಲಯ ಸಮನ್ಸ್ ಜಾರಿಗೊಳಿಸಿದೆ. 2018ರ ಮೇ 12ರಂದು ಚುನಾವಣೆ ನೀತಿ ಸಂಹಿತೆ ಉಲ್ಲಂಘಿಸಿ ಪ್ರಚೋದನಾತ್ಮಕ ಭಾಷಣ ಮಾಡಿರುವ ಆರೋಪ ಹಿನ್ನೆಲೆಯಲ್ಲಿ ಸಮನ್ಸ್​ ಜಾರಿಯಾಗಿದೆ.

ಪ್ರಚೋದನಾತ್ಮಕ ಭಾಷಣ ಸಂಬಂಧ ಟಿಳಕವಾಡಿ ಠಾಣೆಯಲ್ಲಿ ಚುನಾವಣೆ ಆಯೋಗದ ಅಧಿಕಾರಿಗಳು ದೂರು ದಾಖಲಿಸಿದ್ದರು.

ಇದನ್ನೂ ಓದಿ: ಸಂಜಯ್​ ರಾವುತ್​ಗೆ ಜಾಮೀನು.. ಇಡಿ ಅರ್ಜಿ ವಜಾ ಮಾಡಿದ ಹೈಕೋರ್ಟ್​.. ಶಿವಸೇನಾ ನಾಯಕ ರಿಲೀಸ್​​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.