ETV Bharat / state

ಬೆಳಗಾವಿಯಲ್ಲಿ ಆಸ್ತಿಗಾಗಿ ಸಹೋದರರ ಗಲಾಟೆ ಕೇಸ್‌: ಪ್ರತಿವಿಡಿಯೋ ಬಿಡುಗಡೆ ಮಾಡಿದ ಆರೋಪಿಯ ಪತ್ನಿ

author img

By

Published : Sep 14, 2021, 7:01 PM IST

ಬೆಳಗಾವಿಯಲ್ಲಿ ನಡೆದಿದ್ದ ಆಸ್ತಿ ವಿಚಾರಕ್ಕೆ ಸಹೋದರರ ಮಧ್ಯೆ ನಡೆದ ಗಲಾಟೆ ಪ್ರಕರಣಕ್ಕೆ ತಿರುವು​ ಸಿಕ್ಕಿದೆ. ಈ ಘಟನೆ ಸಂಬಂಧ ಇದೀಗ ಆರೋಪಿಯ ಪತ್ನಿ ತನ್ನ ಪತಿ ಮೇಲೆ ಮಾವ ಮಾಡಿದ್ದ ಹಲ್ಲೆಯ ವಿಡಿಯೋ ಬಿಡುಗಡೆ ಮಾಡಿದ್ದಾರೆ.

brothers
ಬೆಳಗಾವಿ ವೈರಲ್​ ವಿಡಿಯೋ

ಬೆಳಗಾವಿ: ಆಸ್ತಿಗಾಗಿ ಇಬ್ಬರು ಸಹೋದರರು ಸೇರಿ ಮತ್ತೋರ್ವ ಸಹೋದರನನ್ನು ಎರಡಂತಸ್ತಿನ ಮನೆ ಮೇಲಿಂದ ನೂಕಲು ಯತ್ನಿಸಿದ್ದ ವಿಡಿಯೋ ವೈರಲ್​ ಆಗಿತ್ತು. ಈ ಬೆನ್ನಲ್ಲೇ, ಇದೀಗ ಆರೋಪಿ ಸಂದೀಪನ ಪತ್ನಿ ವಾಣಿ ಕೂಡ ತನ್ನ ಪತಿ ಮೇಲೆ ಮಾವ ಮಾಡಿದ ಹಲ್ಲೆಯ ವಿಡಿಯೋ ಬಿಡುಗಡೆ ಮಾಡಿದ್ದಾರೆ.

ಬೆಳಗಾವಿ ವೈರಲ್​ ವಿಡಿಯೋ

ಕಬ್ಬಿಣದ ಚೈನ್‌ನಿಂದ ಪತಿ ಮೇಲೆ ಮಾವ ಹಲ್ಲೆ ಮಾಡುತ್ತಿರುವ ವಿಡಿಯೋವನ್ನು ವಾಣಿ ಬಿಡುಗಡೆ ಮಾಡಿದ್ದಾರೆ. ಆಸ್ತಿ ವಿವಾದ ಹಿನ್ನೆಲೆಯಲ್ಲಿ ಅಣ್ಣ ಶ್ರೀಧರ್ ಹಾಗೂ ತಮ್ಮಂದಿರಾದ ಸಂದೀಪ್, ಸುನೀಲ್ ಮಧ್ಯೆ ಗಲಾಟೆ ನಡೆದಿತ್ತು.ಕಡೋಲ್ಕರ್ ಗಲ್ಲಿಯಲ್ಲಿರುವ ಮನೆ ಸಂಬಂಧ ಸಹೋದರರ ಮಧ್ಯೆ ಗಲಾಟೆ ನಡೆದಿತ್ತು.

ಶ್ರೀಧರ್ ಹಾಗೂ ಆತನ ತಂದೆ ವಿಠ್ಠಲ್ ಪ್ರತ್ಯೇಕವಾಗಿ ವಾಸವಿದ್ದರು. ಸಹೋದರರಾದ ಸಂದೀಪ್, ಸುನೀಲ್ ತಾಯಿ ಜೊತೆ ಪ್ರತ್ಯೇಕವಾಗಿ ವಾಸವಾಗಿದ್ದರು. ಆಸ್ತಿ ಹಂಚಿಕೆಗಾಗಿ ಕಳೆದ ಹಲವು ವರ್ಷಗಳಿಂದ ಕಲಹ ಮುಂದುವರಿದಿತ್ತು. ಈ ಕಾರಣಕ್ಕಾಗಿ ಈ ಹಿಂದೆ ತಂದೆ ವಿಠ್ಠಲ್‌ನಿಂದ ಕಿರಿಯ ಮಗ ಸಂದೀಪ್ ಮೇಲೆ ಹಲ್ಲೆ ನಡೆಸಲಾಗಿತ್ತು. ಹಲ್ಲೆಯ ವಿಡಿಯೋವನ್ನು ಈಗ ಸಂದೀಪ್ ಪತ್ನಿ ವಾಣಿ ಬಿಡುಗಡೆ ಮಾಡಿದ್ದಾರೆ.

ಇದನ್ನೂ ಓದಿ:ವೈರಲ್ ವಿಡಿಯೋ.. ಕೌಟುಂಬಿಕ ಕಲಹದ ಕಾರಣಕ್ಕೆ ವ್ಯಕ್ತಿಯನ್ನ ಥಳಿಸಿ ಬಿಲ್ಡಿಂಗ್ ಮೇಲಿಂದ ತಳ್ಳೋದಾ!?

ಆಸ್ತಿ ಹಂಚಿಕೆ ವಿವಾದ ಹಿನ್ನೆಲೆಯಲ್ಲಿ ಕಟ್ಟಡದ ಮೇಲಿಂದ ಅಣ್ಣನನ್ನು ತಳ್ಳಲು ಯತ್ನಿಸಿದ ದೃಶ್ಯ ವೈರಲ್ ಆಗಿತ್ತು. ಈ ಸಂಬಂಧ ಖಡೇಬಜಾರ್ ಠಾಣೆಯಲ್ಲಿ ಶ್ರೀಧರ ದೂರು ನೀಡಿದ್ದರು. ಶ್ರೀಧರ್ ದೂರಿನ ಮೇರೆಗೆ ತಮ್ಮಂದಿರಾದ ಸಂದೀಪ್, ಸುನಿಲ್ ತಾಯಿ ಸುಧಾ, ಸುನಿಲ್ ಪತ್ನಿ ಸಾನಿಯಾ ಅವರನ್ನು ಬಂಧಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.