ETV Bharat / state

ಹುಲಿ ಯಾವತ್ತಿದ್ದರೂ ಹುಲಿಯೇ ಹೊರತು ಇಲಿಯಾಗಲು ಸಾಧ್ಯವಿಲ್ಲ: ಬಸವ ಜಯಮೃತ್ಯುಂಜಯ ಸ್ವಾಮೀಜಿ

author img

By

Published : Oct 18, 2022, 4:00 PM IST

ಅರುಣ್‌ಸಿಂಗ್ ಹೇಳಿಕೆ ಪಂಚಮಸಾಲಿ ಸಮುದಾಯಕ್ಕೆ ನಿರಾಶೆ ತಂದಿದೆ. ಈ ಕುರಿತು ನಳಿನ್‌ ಕುಮಾರ್ ಕಟೀಲ್‌ರವರು ಅರುಣ್ ಸಿಂಗ್‌ಗೆ ತಾಕೀತು ಮಾಡಬೇಕು. ಅರುಣ್ ಸಿಂಗ್‌ರವರಿಗೆ ಪಾಪ ಕರ್ನಾಟಕದ ಬಗ್ಗೆ ಗೊತ್ತಿಲ್ಲ. ಯಾರು ನಾಯಕರು ಅಂತಾ ಕರ್ನಾಟಕದ 7 ಕೋಟಿ ಕನ್ನಡಿಗರಿಗೆ ಗೊತ್ತಿದೆ ಎಂದು ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.

Basavajaya Mrutyunjaya Swamiji
ಬಸವ ಜಯಮೃತ್ಯುಂಜಯ ಸ್ವಾಮೀಜಿ

ಬೆಳಗಾವಿ: ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್ ಹೇಳಿಕೆ ಇಡೀ ಪಂಚಮಸಾಲಿ ಸಮುದಾಯಕ್ಕೆ ನಿರಾಶೆ ಉಂಟುಮಾಡಿದೆ. ಪಕ್ಷದಲ್ಲಿ ದುಡಿಯುತ್ತಿರುವ ಪಂಚಮಸಾಲಿ ಸಮುದಾಯದ ಬಿಜೆಪಿ ಕಾರ್ಯಕರ್ತರು, ನಾಯಕರ ಬಗ್ಗೆ ಅಗೌರವದಿಂದ ಅವಹೇಳನಕರವಾಗಿ ಮಾತನಾಡಬಾರದು. ಈ ಕುರಿತು ನಳಿನ್‌ ಕುಮಾರ್ ಕಟೀಲ್‌ ಅವರು ಅರುಣ್ ಸಿಂಗ್‌ ಅವರಿಗೆ ತಾಕೀತು ಮಾಡಬೇಕೆಂದು ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.

ಮಂತ್ರಿಸ್ಥಾನ ತ್ಯಾಗ ಮಾಡಿ ಹೋರಾಟಕ್ಕೆ ಬಂದ ಯತ್ನಾಳ್​​: ನಗರದಲ್ಲಿ ನಡೆದ ಮಾಧ್ಯಮದಗೋಷ್ಟಿಯಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಕೇವಲ ಶಾಸಕರು, ನಾಯಕರಲ್ಲ ಎಂಬ ಅರುಣ್ ಸಿಂಗ್ ಹೇಳಿಕೆ ವಿಚಾರಕ್ಕೆ ಸ್ವಾಮೀಜಿ ಪ್ರತಿಕ್ರಿಯೆ ನೀಡಿದರು. ಬಸನಗೌಡ ಪಾಟೀಲ್ ಯತ್ನಾಳ್‌ರಿಗೆ ಕಮಿಟ್‌ಮೆಂಟ್ ಇದೆ. ಮಂತ್ರಿಸ್ಥಾನ ತ್ಯಾಗ ಮಾಡಿ ಹೋರಾಟಕ್ಕೆ ನಿಂತುಕೊಂಡಿದ್ದಾರೆ. ಅವರಿಗೆ ಎಷ್ಟೇ ತೊಂದರೆ ಅಡೆ ತಡೆ ಬಂದರೂ ಪಕ್ಷದಲ್ಲಿ ಏನೇ ಟೀಕೆ ಬಂದರೂ, ಅವರು ಪಕ್ಷದ ಒಳಗೆ ಇದ್ದು ಏನು ಕೆಲಸ ಮಾಡಬೇಕೋ ಅದನ್ನು ಮಾಡ್ತಿದ್ದಾರೆ.

ಬಸವ ಜಯಮೃತ್ಯುಂಜಯ ಸ್ವಾಮೀಜಿ

ಮಂತ್ರಿ ಸ್ಥಾನ ಬೇಡ ಮೀಸಲಾತಿ ಬೇಕು ಅನ್ನೋ ಕಮಿಟ್‌ಮೆಂಟ್ ಅವರಿಗೆ ಇದೆ. ಆ ಕಮಿಟ್‌ಮೆಂಟ್ ಎಲ್ಲರಿಗೂ ಬರೋಕೆ ಸಾಧ್ಯವಿಲ್ಲ. ಅರುಣ್ ಸಿಂಗ್‌ ಅವರಿಗೆ ಪಾಪ ಕರ್ನಾಟಕದ ಬಗ್ಗೆ ಗೊತ್ತಿಲ್ಲ. ಯಾರು ನಾಯಕರು ಅಂತಾ ಕರ್ನಾಟಕದ 7 ಕೋಟಿ ಕನ್ನಡಿಗರಿಗೆ ಗೊತ್ತಿದೆ ಎಂದು ಸ್ವಾಮೀಜಿ ಹೇಳಿದರು.

ಪಂಚಮಸಾಲಿ ಸಮುದಾಯಕ್ಕೆ ನಿರಾಶೆ: ಅರುಣ್ ಸಿಂಗ್​ಗಿಂತ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್‌ ಅವರಿಗೆ‌ ನಾನು ಮನವಿ ಮಾಡ್ತೇನೆ, ಪ್ರಧಾನಿ ನರೇಂದ್ರ ಮೋದಿ ಸಾಮಾನ್ಯ ಬಿಜೆಪಿ ಕಾರ್ಯಕರ್ತನನ್ನು ನಾಯಕ ಅಂತಾ ಗೌರವಿಸುತ್ತಾರೆ. ಸ್ವತಃ ಪ್ರಧಾನಮಂತ್ರಿ ಇದ್ದರೂ ಸಹ ನಾನು ಪ್ರಧಾನ ಸೇವಕ ಅಂತಾ ಹೇಳ್ತಾರೆ. ಬಿಜೆಪಿಯಲ್ಲಿರುವ 80 ಪರ್ಸೆಂಟ್ ಪಂಚಮಸಾಲಿಗಳು ಪಕ್ಷ ಕಟ್ಟುವಲ್ಲಿ ದುಡಿದಿದ್ದಾರೆ. ಆ ಸಮುದಾಯದ ನಾಯಕರನ್ನು ಯಾರೂ ಸಹ ಅಗೌರವದಿಂದ ಕಾಣಬಾರದು. ಆದ್ರೆ, ನಿನ್ನೆಯ ಅರುಣ್‌ಸಿಂಗ್ ಹೇಳಿಕೆ ಇಡೀ ಪಂಚಮಸಾಲಿ ಸಮುದಾಯಕ್ಕೆ ನಿರಾಶೆ ಉಂಟು ಮಾಡಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಅರುಣ್ ಸಿಂಗ್‌ ಹೇಳಿಕೆ ಹಿಂಪಡೆಯಲಿ: ಪಂಚಮಸಾಲಿ ಸಮುದಾಯದ ಜನ ಬಹಳ ಮನಸ್ಸಿಗೆ ಬೇಜಾರು ಮಾಡಿಕೊಂಡಿದ್ದಾರೆ. ಒಂದು ಕಡೆ ಯತ್ನಾಳ್ ಗೌಡರ ಬಗ್ಗೆ ಮಾತನಾಡಿದ್ದಾರೆ. ಅರವಿಂದ ಬೆಲ್ಲದ ಬಗ್ಗೆಯೂ ಮಾತನಾಡಿದ್ದಾರೆ. ನಮ್ಮ ಸಮಾಜದವರು ಪಕ್ಷದಲ್ಲಿ ದುಡಿಯುತ್ತಿದ್ದಾರೆ. ಪಕ್ಷದಲ್ಲಿ ದುಡಿಯುತ್ತಿರುವ ಪಂಚಮಸಾಲಿ ಸಮುದಾಯದ ಬಿಜೆಪಿ ಕಾರ್ಯಕರ್ತರು, ನಾಯಕರ ಬಗ್ಗೆ ಅಗೌರವದಿಂದ ಅವಹೇಳನಕರವಾಗಿ ಮಾತನಾಡಬಾರದು. ನಳಿನ್‌ ಕುಮಾರ್ ಕಟೀಲ್‌ರವರು ಅರುಣ್ ಸಿಂಗ್‌ಗೆ ತಾಕೀತು ಮಾಡಬೇಕು. ಅರುಣ್ ಸಿಂಗ್‌ರವರು ತಮ್ಮ ಹೇಳಿಕೆ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

ಹುಲಿ ಯಾವತ್ತಿದ್ದರೂ ಹುಲಿ: ಹುಲಿ ಯಾವತ್ತಿದ್ದರೂ ಹುಲಿಯೇ ಹೊರತು ಇಲಿಯಾಗಲು ಸಾಧ್ಯವಿಲ್ಲ. ನಮ್ಮ ಸಮಾಜದ ಯಾವುದೇ ವ್ಯಕ್ತಿ ಇರಲಿ ಅವರು ನಾಯಕರು ಎಂದು ಗೌರವ ಕೊಡುತ್ತೇವೆ. ಬಸನಗೌಡ ಪಾಟೀಲ್ ಯತ್ನಾಳ್ ಈವರೆಗೂ ಕೇವಲ ಹಿಂದೂ ನಾಯಕರಾಗಿದ್ದರು. ಈಗ ಪಂಚಮಸಾಲಿ ನಾಯಕರಾಗಿ ಹೊರ ಹೊಮ್ಮಿದ್ದಾರೆ.ಇಡೀ ಸಮಾಜ ಅವರ ಮೇಲೆ ನಂಬಿಕೆ ಇಟ್ಟಿದೆ. ಏಳು ಕೋಟಿ ಕನ್ನಡಿಗರು ಯತ್ನಾಳ್​ ನಾಯಕರು ಅಂತಾ ಒಪ್ಪಿಕೊಂಡಿದ್ದಾರೆ. 21ನೇ ತಾರೀಖು ಯಾರು ನಾಯಕರು ಯಾರು ನಾಯಕರಲ್ಲ ಅಂತಾ ಗೊತ್ತಾಗುತ್ತದೆ ಎಂದರು.

ಇದನ್ನೂ ಓದಿ: ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡದಿದ್ದರೆ 25 ಲಕ್ಷ ಜನರಿಂದ ಉಗ್ರ ಹೋರಾಟ: ಬಸವ ಜಯ ಮೃತ್ಯುಂಜಯ ಶ್ರೀ

ಅರುಣ್ ಸಿಂಗ್ ಮಾತನಾಡಿದ್ದು ಅವರ ಪಕ್ಷಕ್ಕೆ ಬಿಟ್ಟಿದೆ. ಆದರೆ,ಅವರು ನಾಯಕರಲ್ಲ ಅಂತಾ ಹೇಳಿದ್ದು ನೋವಾಗಿದೆ. ಕೆಲ ಪಂಚಮಸಾಲಿ ಸಮುದಾಯದ ನಾಯಕರು ಬಹಿರಂಗ ಸಮಾವೇಶಗಳಲ್ಲಿ ಭಾಗಿಯಾಗದ ವಿಚಾರಕ್ಕೆ ನಮ್ಮ ಸಮಾಜದ ನಾಯಕರು ಪಕ್ಷದ ಚೌಕಟ್ಟಿನಲ್ಲಿರೋದ್ರಿಂದ ಕೆಲವರು ಓಪನ್ ಆಗಿ ಬರ್ತಾರೆ, ಕೆಲವರು ಬರಲ್ಲ. ಮುಂದೆ ಒಂದು ದಿನ ಓಪನ್ ಆಗಿ ಬರಲೇಬೇಕು. ಯಾರು ಓಪನ್ ಆಗಿ ಬರೋದಿಲ್ವೋ 2023ರ ಚುನಾವಣೆಯಲ್ಲಿ ಸರಿಯಾಗಿ ಪಾಠ ಕಲಿಸುತ್ತೇವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಹುಕ್ಕೇರಿಯಲ್ಲಿ ಪಂಚಮಸಾಲಿ ಬೃಹತ್ ಸಮಾವೇಶ: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿ ಅಕ್ಟೋಬರ್ 21ರಂದು ಹುಕ್ಕೇರಿಯಲ್ಲಿ ಲಿಂಗಾಯತ ಪಂಚಮಸಾಲಿ ಬೃಹತ್ ಸಮಾವೇಶ ಮಾಡಲಾಗುತ್ತಿದೆ.‌ ಅದೇ ದಿನ ಕಿತ್ತೂರು ಕರ್ನಾಟಕದ ಪ್ರಥಮ ರಾಷ್ಟ್ರಮಾತೆ ಚನ್ನಮ್ಮ ರವರ 244ನೇ ಜಯಂತಿ, 199ನೇ ವಿಜಯೋತ್ಸವ ಮಾಡಲಾಗುವುದು.ಅಕ್ಟೋಬರ್ 21ರೊಳಗೆ ಮೀಸಲಾತಿ ಘೋಷಿಸದಿದ್ರೆ ಅಂತಿಮ ಹಂತದ ಹೋರಾಟದ ದಿನಾಂಕ ನಿಗದಿ ಮಾಡುತ್ತೇವೆ. 25ಲಕ್ಷ ಜನ ಸೇರಿಸಿ ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ದಿನಾಂಕ ನಿಗದಿ ಮಾಡುತ್ತೇವೆ ಎಂದರು.

ಸಚಿವ ಮುರುಗೇಶ್ ನಿರಾಣಿ ಕುರಿತು ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ನಾನು ಅವರ ಬಗ್ಗೆ ಹೇಳೋದಕ್ಕೆ ಹೋಗಲ್ಲ. ಅವರು ಏನು ಮಾಡ್ತಿದ್ದಾರೆ ಏನಿಲ್ಲ ನಿಮಗೆಲ್ಲಾ ಗೊತ್ತೆ ಇದೆ. ನಾನು ಅವರ ಬಗ್ಗೆ ಏನೂ ಹೇಳೋಕೆ ಹೋಗಲ್ಲ. ಅವರು ನಮ್ಮ ಸಮುದಾಯದವರು ಇರೋದ್ರಿಂದ ದೇವರು ಅವರಿಗೆ ಯಾವಾಗ ಬುದ್ಧಿ ಕೊಡ್ತಾನೆ ಕೊಟ್ಟು ನಮ್ಮ ಹೋರಾಟಕ್ಕೆ ಬೆಂಬಲ ನೀಡುವ ಪ್ರಯತ್ನ ಆಗಬೇಕು. ಅವರ ಬಗ್ಗೆ ನಾನು ಏನೂ ಹೇಳಲ್ಲ, ಅವರೇನು ಮಾಡ್ತಿದ್ದಾರೆ ನಿಮಗೆಲ್ಲ ಗೊತ್ತಿದೆ.ನಮ್ಮ ಸಮಾಜದ ಇಬ್ಬರು ಸಚಿವರು, ಶಾಸಕರು ನಮ್ಮ ಹೋರಾಟಕ್ಕೆ ಪ್ರಾಮಾಣಿಕ ಬೆಂಬಲ ಕೊಡ್ತಿದ್ದಾರೆ. ವಿರೋಧ ಮಾಡ್ತಿದ್ದಾರೋ ಬೆಂಬಲ ನೀಡ್ತಿದ್ದಾರೋ ಹೇಳೋಕೆ ಹೋಗಲ್ಲ ಎಂದು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.