ETV Bharat / state

ಹಿಂದೂಸ್ಥಾನದಲ್ಲಿ ಗಣಪತಿ ಪ್ರತಿಷ್ಠಾಪನೆ ಮಾಡುತ್ತೇವೆ ಇದು ಪಾಕಿಸ್ತಾನವಲ್ಲ: ಯತ್ನಾಳ್

author img

By

Published : Aug 31, 2022, 10:11 AM IST

ಕುಟುಂಬ ರಾಜಕಾರಣದ ಬಗ್ಗೆ ಮೋದಿಗೆ ಪತ್ರ ಬರೆದಿದ್ದೇನೆ. ಕರ್ನಾಟಕದಲ್ಲಿ ತ್ವರಿತವಾಗಿ ಈ ನಿಯಮ ಜಾರಿ ಮಾಡುವಂತೆ ಕೇಳಿಕೊಂಡಿದ್ದೇನೆ ಎಂದು ಬಸವನಗೌಡ ಯತ್ನಾಳ್ ಹೇಳಿದ್ದಾರೆ.

basangouda-yatnal
ಬಸವನಗೌಡ ಯತ್ನಾಳ್

ಅಥಣಿ(ಬೆಳಗಾವಿ) : ಗಣಪತಿ ಪ್ರತಿಷ್ಠಾಪನೆಗೆ ಪರ್ಮಿಷನ್ ತೆಗೆದುಕೊಳ್ಳಬೇಕೆಂದು ಸರ್ಕಾರ ನಿಯಮಗಳನ್ನು ಜಾರಿ ಮಾಡಿದೆ. ಇದು ಹಿಂದೂಸ್ತಾನ ಪಾಕಿಸ್ತಾನವಲ್ಲ ನಾವು ಅದ್ದೂರಿಯಾಗಿ ಗಣೇಶೋತ್ಸವ ಆಚರಣೆ ಮಾಡುತ್ತೇವೆ ಡಿಜೆ ಬಳಕೆ ಮಾಡುತ್ತೇವೆ. ನೀವು ಏನು ಮಾಡುತ್ತಿರಿ ಮಾಡಿ ಎಂದು ಸರ್ಕಾರಕ್ಕೆ ವಿಜಯಪುರ ಶಾಸಕ ಬಸವನಗೌಡ ಯತ್ನಾಳ್ ಸವಾಲು ಎಸೆಗಿದ್ದಾರೆ.

ಹಿಂದೂಸ್ಥಾನದಲ್ಲಿ ಗಣಪತಿ ಪ್ರತಿಷ್ಠಾಪನೆ ಮಾಡುತ್ತೇವೆ ಇದು ಪಾಕಿಸ್ತಾನವಲ್ಲ

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ರೆಡ್ಡೇರಹಟ್ಟಿ ಗ್ರಾಮದಲ್ಲಿ ಪ್ರಭು ಮಾಧವಾನಂದ ಅಧ್ಯಾತ್ಮಿಕ ಕೇಂದ್ರದಲ್ಲಿ ಶ್ರಾವಣ ಮಾಸ ಮುಕ್ತಾಯ ಸಮಾರಂಭದಲ್ಲಿ ವಿಜಯಪುರ ಶಾಸಕ ಯತ್ನಾಳ್ ಭಾಗವಹಿಸಿ ಮಾತನಾಡಿ, ಗಣಪತಿ ಉತ್ಸವದಲ್ಲಿ ಡಿಜೆ ಬಳಕೆ ಮಾಡುತ್ತೇವೆ ಬೊಂಗಾ (ಮಸೀದಿ ಮೇಲಿನ ಸೌಂಡ್) ಮೇಲಿನ ಧ್ವನಿವರ್ಧಕಗಳನ್ನು ತೆರೆವು ಮಾಡಿ, ಅವುಗಳನ್ನು ತೆರವು ಮಾಡುವರಿಗೆ ನಾವು ಡಿಜೆ ಬಳಕೆ ಮಾಡುತ್ತೇವೆ ಎಂದರು.

ಬಿಜೆಪಿ ಪಕ್ಷದಲ್ಲಿ ಕುಟುಂಬಕ್ಕೆ ಒಂದೇ ಟಿಕೆಟ್ ಎಂದು ನಿಯಮ ಜಾರಿಯಾಗಿದೆ, ಈ ಕುರಿತು ನಾನು ಕೂಡ ಕರ್ನಾಟಕದಲ್ಲಿ ತ್ವರಿತವಾಗಿ ಈ ನಿಯಮ ಜಾರಿ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದೇನೆ. ಅಪ್ಪ ಮಕ್ಕಳಿಗೆ ಹಾಗೂ ಕುಟುಂಬ ರಾಜಕೀಯಕ್ಕೆ ಬಿಜೆಪಿಯಲ್ಲಿ ಟಿಕೆಟ್ ಇಲ್ಲ ಎಂದು ಹೇಳಿ ಮತ್ತೊಮ್ಮೆ ಪರೋಕ್ಷವಾಗಿ ಬಿಎಸ್​ವೈ ಹಾಗೂ ನಿರಾಣಿ ಸಹೋದರ ವಿರುದ್ಧ ಯತ್ನಾಳ್ ಗುಡುಗಿದರು.

ಇದನ್ನೂ ಓದಿ : ಹೆಸರಿನಲ್ಲಿ ರಾಮ, ಉಂಡ ಮನೆಗೆ ಪಂಗನಾಮ: ಸಿದ್ದರಾಮಯ್ಯ ವಿರುದ್ಧ ಶ್ರೀರಾಮುಲು ವಾಗ್ದಾಳಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.