ETV Bharat / state

ಯುಪಿಎಸ್ಸಿಯಲ್ಲಿ ಬೆಳಗಾವಿಗೆ ಮೂರು ರ‍್ಯಾಂಕ್​: ಸಚಿವ ಜಾರಕಿಹೊಳಿ ಹರ್ಷ

author img

By

Published : Aug 4, 2020, 8:34 PM IST

ಯುಪಿಎಸ್​ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ಬೆಳಗಾವಿ ಜಿಲ್ಲೆಯ ಮೂವರು ಸಾಧಕರಿಗೆ ಜಿಲ್ಲಾ ಉಸ್ತುವಾರಿ ಸಚಿವರು ಅಭಿನಂದಿಸಿದ್ದಾರೆ.

Achievement in UPSC Exam: Congratulations from Minister
ಜಿಲ್ಲಾ ಉಸ್ತುವಾರಿ ಸಚಿವ ರಮೇಶ್​ ಜಾರಕಿಹೊ

ಬೆಳಗಾವಿ: ಕೇಂದ್ರ ಲೋಕಸೇವಾ ಆಯೋಗ ನಡೆಸಿದ 2019 ನೇ ಸಾಲಿನ ಯುಪಿಎಸ್ಸಿ ಪರೀಕ್ಷೆಯಲ್ಲಿ ಬೆಳಗಾವಿ ಜಿಲ್ಲೆಯ ಮೂವರು ತೇರ್ಗಡೆ ಹೊಂದಿದ್ದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್​ ಜಾರಕಿಹೊಳಿ ಸಂತಸ ವ್ಯಕ್ತಪಡಿಸಿದ್ದಾರೆ.

ಹುಕ್ಕೇರಿ ತಾಲೂಕಿನ ಯರನಾಳ ಗ್ರಾಮದ ಪ್ರಫುಲ್ ದೇಸಾಯಿ (532 ರ‍್ಯಾಂಕ್​) ರಾಯಭಾಗ ತಾಲೂಕಿನ ಗಜಾನನ ಬಾಲೆ (663 ರ‍್ಯಾಂಕ್​) ಹಾಗೂ ಚಿಕ್ಕೋಡಿಯ ಪ್ರಿಯಾಂಕಾ ಕಾಂಬಳೆ (670 ನೇ ರ‍್ಯಾಂಕ್​) ನಲ್ಲಿ ತೇರ್ಗಡೆ ಹೊಂದಿದ್ದಾರೆ. ಈ ಮೂವರಿಗೂ ಸಚಿವ ಜಾರಕಿಹೊಳಿ ಅಭಿನಂದಿಸಿದ್ದಾರೆ. ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಗೈಯುವ ಮೂಲಕ ಬೆಳಗಾವಿ ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದಾರೆ. ಈ ಮೂವರು ಸಾಧಕರು ಯುವಕರಿಗೆ ಆದರ್ಶವಾಗಲಿ ಎಂದು ಆಶಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.