ETV Bharat / state

ಬೆಳಗಾವಿಯಲ್ಲಿ ಮಳೆ ಅವಾಂತರ.. ಚಲಿಸುತ್ತಿದ್ದ ಬೈಕ್​ಗಳ ಮೇಲೆ ಬಿದ್ದ ಮರ, ಓರ್ವ ಸಾವು

author img

By

Published : Sep 13, 2022, 1:05 PM IST

Updated : Sep 13, 2022, 1:56 PM IST

ಚಲಿಸುತ್ತಿದ್ದ ಬೈಕ್​ಗಳ ಮೇಲೆ ಬೃಹದಾಕಾರದ ಮರ ಬಿದ್ದ ಪರಿಣಾಮ ಓರ್ವ, ಯುವಕ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಮತ್ತೋರ್ವ ಬೈಕ್​ ಸವಾರ ಗಂಭೀರವಾಗಿ ಗಾಯಗೊಂಡಿದ್ದಾನೆ.

A tree fell on the moving bikes in belagavi
ಚಲಿಸುತ್ತಿದ್ದ ಬೈಕ್​ಗಳ ಮೇಲೆ ಬಿದ್ದ ಮರ

ಬೆಳಗಾವಿ: ಕಳೆದ ಒಂದು ವಾರದಿಂದ ಪಶ್ಚಿಮಘಟ್ಟ ಪ್ರದೇಶ ಸೇರಿ ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದೆ. ಮಳೆಗೆ ಬೃಹದಾಕಾರದ ಮರ ಚಲಿಸುತ್ತಿದ್ದ ಬೈಕ್ ಸವಾರರೊಬ್ಬರ ಮೇಲೆ ಬಿದ್ದ ಪರಿಣಾಮ, ಅವರು ಸ್ಥಳದಲ್ಲೇ ಸಾವಿಗೀಡಾಗಿರುವ ಘಟನೆ ನಗರದಲ್ಲಿ ನಡೆದಿದೆ.

ನಗರದ ಆರ್​ಟಿಓ ಸರ್ಕಲ್ ಬಳಿಯ ಮರಾಠ ಕಾಲೇಜು ಬಳಿ ಬೃಹತ್ ಮರ ಚಲಿಸುತ್ತಿದ್ದ ಎರಡು ಬೈಕ್​ಗಳ ಮೇಲೆ ಬಿದ್ದಿದೆ. ಬೈಕ್​ಗಳು ಜಕಂ ಆಗಿದ್ದು, ಓರ್ವ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮತ್ತೋರ್ವ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ನಗರದ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಚಲಿಸುತ್ತಿದ್ದ ಬೈಕ್​ಗಳ ಮೇಲೆ ಬಿದ್ದ ಮರ

ಸ್ಥಳಕ್ಕೆ ಬೆಳಗಾವಿ ನಗರ ಉಪ ಪೊಲೀಸ್​ ಆಯುಕ್ತ ರವೀಂದ್ರ ಗಡಾದಿ, ಮಾರ್ಕೆಟ್​ ಠಾಣೆಯ ಎಸಿಪಿ ನಾರಾಯಣ ಭರಮನಿ, ಪಿಎಸ್ಐ ವಿಠ್ಠಲ ಹಾವನ್ನವರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಮರವನ್ನು ತೆರುವುಗೊಳಿಸಲಾಯಿತು. ಉತ್ತರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: ಚಾಮರಾಜನಗರ: ಉರುಳಿದ ಬೃಹತ್ ಮರ, ಸ್ವಲ್ಪದರಲ್ಲೇ ಪಾರಾದ ಶಾಸಕ

Last Updated : Sep 13, 2022, 1:56 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.