ETV Bharat / state

ಪಂಡರಾಪುರವರೆಗೆ ಉರುಳುಸೇವೆ ಕೈಗೊಂಡ ಭಕ್ತ: ತನು ಮನವೆಲ್ಲಾ ವಿಠ್ಠಲನ ನಾಮ

author img

By

Published : Sep 1, 2022, 7:11 PM IST

Updated : Sep 1, 2022, 8:24 PM IST

ಭಕ್ತನೊಬ್ಬ ಮಹಾರಾಷ್ಟ್ರ ಪಂಡರಾಪುರ ವಿಠ್ಠಲ ದರ್ಶನಕ್ಕೆ ಉರುಳು ಸೇವೆ ಸಲ್ಲಿಸುತ್ತಾ ಸಾಗಿಸುತ್ತಿದ್ದಾರೆ.ಇವರ ಕಾರ್ಯಕ್ಕೆ ಹಲವರು ಸಾಥ್​ ನೀಡುತ್ತಿದ್ದಾರೆ.

ಪಂಡರಪೂರವರೆಗೆ ಉರುಳುಸೇವೆ ಕೈಗೊಂಡ ಭಕ್ತ
ಪಂಡರಪೂರವರೆಗೆ ಉರುಳುಸೇವೆ ಕೈಗೊಂಡ ಭಕ್ತ

ಅಥಣಿ(ಬೆಳಗಾವಿ): ಲಕ್ಷಾಂತರ ಜನ ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಮನೆಗಳಿಂದ ಸ್ವಂತ ವಾಹನಗಳ ಮೂಲಕ, ಇನ್ನೂ ಕೆಲವರು ಕಾಲ್ನಡಿಗೆಯಲ್ಲಿ, ಇನ್ನೂ ಹಲವರು ದೀಡ ನಮಸ್ಕಾರ ಮೂಲಕ ಪಂಡರಾಪುರಕ್ಕೆ ತೆರಳುತ್ತಾರೆ. ಆದರೆ. ಇಲ್ಲೊಬ್ಬ ಭಕ್ತ ಮಹಾರಾಷ್ಟ್ರ ಪಂಡರಾಪುರ ವಿಠ್ಠಲ ದರ್ಶನಕ್ಕೆ ಉರುಳು ಸೇವೆ ಸಲ್ಲಿಸುತ್ತಾ ಸಾಗಿಸುತ್ತಿದ್ದಾರೆ.

ಉರುಳು ಸೇವೆ ಮಾಡುತ್ತಿರುವ ಭಕ್ತ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಬೇವನೂರಿನ ಗ್ರಾಮದ ಶಹಾಜಿ ಜಾಧವ್. ಇವರು ವಿಠ್ಠಲನ ಅಪ್ಪಟ ಭಕ್ತರಾಗಿದ್ದು, ಅನೇಕ ವರ್ಷಗಳಿಂದ ಪರಮ ಪವಿತ್ರ ವಾರಕರಿ ಸಂಪ್ರದಾಯದೊಂದಿಗೆ ಮುನ್ನಡೆಯುತ್ತಿದ್ದಾರೆ.

ನಿತ್ಯ 4 ಕಿಮೀ ಸಂಚಾರ: ಅಥಣಿ ತಾಲೂಕಿನ ಸಪ್ತಸಾಗರದಿಂದ ಮಹಾರಾಷ್ಟ್ರದ ಪಂಡರಾಪುರದವರೆಗೆ ಉರುಳು ಸೇವೆ ಸಲ್ಲಿಸುತ್ತಾ ನಿತ್ಯ ನಾಲ್ಕು ಕಿಲೋಮೀಟರ್ ಉರುಳು ಸೇವೆ ಸಲ್ಲಿಸುತ್ತಾ ಒಂದು ತಿಂಗಳ ವರೆಗೆ ಬಿಡುವಿಲ್ಲದೇ ಪ್ರಯಾಣ ಬೆಳೆಸಿದ್ದಾರೆ.

ಸುಮಾರು 220 ಕಿಲೋಮೀಟರ್ ದೂರದ ವರಿಗೆ ಊರು ಸೇವೆ ಮಾಡುತ್ತಾ ಲೋಕ ಕಲ್ಯಾಣಕ್ಕಾಗಿ ಭಕ್ತಿಯ ಪರಾಕಾಷ್ಠೆ ಮೆರೆಯುತಿದ್ದಾರೆ. ನನ್ನ ಗುರುಗಳ ಆಜ್ಞೆಯಂತೆ ಕಳೆದ ಬಾರಿಯು ಯಶಸ್ವಿ ಉರುಳು ಸೇವೆ ಸಲ್ಲಿಸಿದ್ದೆ. ಈ ಬಾರಿಯು ಗುರುಗಳಾದ ವಾಸ್ಕರ್ ಮಹಾರಾಜರ ಅಣತಿಯಂತೆ ಉರುಳುಸೇವೆ ಕೈಗೊಂಡು ಜಗತ್ತಿಗೆ ಒಳಿತಾಗಲಿ, ಕೊರೊನಾ ಮಹಾಮಾರಿ ತೊಲಗಿ ಎಲ್ಲರಿಗೂ ಸುಖ ಶಾಂತಿ ನೆಮ್ಮದಿ ಸಮೃದ್ಧಿ ದೊರಕಲಿ ಎಂದು ಉರುಳುಸೇವೆ ಕೈಗೊಂಡಿದ್ದೇನೆ ಎನ್ನುತ್ತಾರೆ ಶಹಾಜಿ ಜಾಧವ್.

ಪಂಡರಾಪುರವರೆಗೆ ಉರುಳುಸೇವೆ ಕೈಗೊಂಡ ಭಕ್ತ

ಈ ಸಂಪ್ರದಾಯಕ್ಕೆ ದಾಖಲೆ ಇತಿಹಾಸ: ತೀರ್ಥ ಕ್ಷೇತ್ರಗಳಿಗೆ ಕಾಲ್ನಡಿಗೆಯಲ್ಲಿ ತೆರಳುವುದು ಒಂದು ದಿವ್ಯ ಅನುಭವ ಇಂತಹ ಈ ವಾರಕರಿ ಸಂಪ್ರದಾಯಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ನಾಮ ಸಂಕೀರ್ತನೆಯ ಸುಖದಲ್ಲೇ ಸಾಗುವ ಈ ಸಂಪ್ರದಾಯದವರು ಜಾತಿ -ಜನಾಂಗದ ,ಭೇದ- ಭಾವದ ಸಂಪ್ರದಾಯ ಮರೆತು ಜೀವಿಸುತ್ತಾರೆ. ಸಿಟ್ಟನ್ನು ಗೆದ್ದು ಸಮಾಜಮುಖಿ ಬದುಕು ನಡೆಸುವ ಇವರು ದುಶ್ಚಟಗಳಿಗೆ ಬಲಿಯಾಗದೆ ಶಾಖಾಹಾರಿಗಳಾಗಿ ತುಳಸಿ ಮಾಲೆ ಧರಿಸಿ ವಿಠ್ಠಲನ ಪ್ರಾರ್ಥನೆಯ ಅಭಂಗಗಳೊಂದಿಗೆ ಭಕ್ತಿಯ ಜೀವನ ನಡೆಸುತ್ತಾರೆ.

ಇದನ್ನೂ ಓದಿ: ಬೆಂಗಳೂರು: ಶ್ರೀ ಸತ್ಯ ಗಣಪತಿ ದೇವಸ್ಥಾನದಲ್ಲಿ ಪರಿಸರ ಸ್ನೇಹಿ ಗಣೇಶ ಚತುರ್ಥಿ ಆಚರಣೆ

Last Updated :Sep 1, 2022, 8:24 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.