ETV Bharat / state

ಮಳೆಗೆ ಧಾರವಾಡ, ಉತ್ತರ ಕನ್ನಡ ಬೆಳಗಾವಿ ಜಿಲ್ಲೆಯಲ್ಲಿ 400 ಕೋಟಿ ಹಾನಿ: ಡಿಸಿಎಂ ಕಾರಜೋಳ

author img

By

Published : Jul 23, 2021, 6:14 PM IST

Updated : Jul 23, 2021, 7:23 PM IST

ಬೆಳಗಾವಿ, ಧಾರವಾಡ, ಉತ್ತರ ಕನ್ನಡ ಜಿಲ್ಲೆ‌ ಸೇರಿ 400 ಕೋಟಿಯಷ್ಟು ಹಾನಿ ಆಗಿದ್ದು, ಸಿಎಂ ನೇತೃತ್ವದಲ್ಲಿ ನಡೆಯುತ್ತಿರುವ ವಿಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಹಣ ಬಿಡುಗಡೆ ಒತ್ತಾಯ ಮಾಡಲಾಗುತ್ತದೆ ಎಂದು ಡಿಸಿಎಂ‌ ಗೋವಿಂದ ಕಾರಜೋಳ ಹೇಳಿದರು.

karajola
karajola

ಬೆಳಗಾವಿ: ಧಾರವಾಡ, ಉತ್ತರ ಕನ್ನಡ ಬೆಳಗಾವಿ ಜಿಲ್ಲೆಯ ಪುನರ್ ನಿರ್ಮಾಣಕ್ಕೆ ಸೇರಿ 400 ಕೋಟಿಯಷ್ಟು ಅಗತ್ಯವಿದೆ. ರಸ್ತೆ ದುರಸ್ಥಿಗೆ ತಕ್ಷಣವೇ 50 ಕೋಟಿ ರೂಪಾಯಿ ಬೇಕಾಗುತ್ತದೆ ಎಂದು ಡಿಸಿಎಂ‌ ಗೋವಿಂದ ಕಾರಜೋಳ ಹೇಳಿದರು.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೆಳಗಾವಿ 26 ಜಿಲ್ಲಾ ಮುಖ್ಯ ರಸ್ತೆ, 21 ರಾಜ್ಯ ಹೆದ್ದಾರಿ ಸಂಪರ್ಕ ಕಡಿತವಾಗಿದೆ‌. ಹೀಗಾಗಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚಾರ ಡೈವರ್ಟ್ ಮಾಡಲಾಗಿದೆ. ಇನ್ನು ಮಳೆಗೆ ಹಾನಿ ಆಗಿರುವ ರಸ್ತೆ ದುರಸ್ತಿಗೆ 50 ಕೋಟಿ ರೂಪಾಯಿ ಬೇಕಾಗುತ್ತದೆ. ಇದಲ್ಲದೇ ಬೆಳಗಾವಿ, ಧಾರವಾಡ, ಉತ್ತರ ಕನ್ನಡ ಜಿಲ್ಲೆ‌ ಸೇರಿ 400 ಕೋಟಿಯಷ್ಟು ಹಾನಿ ಆಗಿದ್ದು, ಸಿಎಂ ನೇತೃತ್ವದಲ್ಲಿ ನಡೆಯುತ್ತಿರುವ ವಿಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಹಣ ಬಿಡುಗಡೆ ಒತ್ತಾಯ ಮಾಡಲಾಗುತ್ತದೆ ಎಂದರು.

ಡಿಸಿಎಂ ಕಾರಜೋಳ ಪ್ರತಿಕ್ರಿಯೆ

ಕಳೆದ 24 ಗಂಟೆಯಲ್ಲಿ 300 ಮಿಲಿ ಮೀಟರ್‌ಗಿಂತಲೂ ಹೆಚ್ಚು ಮಳೆ ಆಗಿದೆ. ಹೀಗಾಗಿ ಕೊಯ್ನಾ ಡ್ಯಾಂ ಅಧಿಕಾರಿಗಳ ಜತಗೆ ನಿರಂತರ ಸಂಪರ್ಕ ಇಟ್ಟುಕೊಳ್ಳಲಾಗಿದ್ದು, ಜನರಿಗೆ ತೊಂದರೆ ಆಗದಂತೆ ನಿರಾಶ್ರಿತರ ಕೇಂದ್ರ, ಜಾನುವಾರು ರಕ್ಷಣೆಗೆ ಕ್ರಮ ಕೈಗೊಳ್ಳುವುದರ ಜೊತಗೆ ನೋಡಲ್ ಅಧಿಕಾರಿಗಳನ್ನು ಸಹ ನೇಮಕ ಮಾಡಲಾಗಿದೆ ಎಂದರು.

Last Updated : Jul 23, 2021, 7:23 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.