ETV Bharat / state

ಅಕ್ರಮವಾಗಿ ಸಾಗಿಸುತ್ತಿದ್ದ 4.5 ಲಕ್ಷ ರೂ ಮೌಲ್ಯದ ಗೋವಾ ಮದ್ಯ ವಶ

author img

By

Published : Nov 29, 2020, 3:34 AM IST

ತಾಲೂಕಿನ ಬಾದರವಾಡಿ ಗ್ರಾಮದ ಅಶೋಕ ಸುರೇಶ ಪಾಟೀಲ (25) ಬಂಧಿತ ಆರೋಪಿ. ಇನ್ನೋರ್ವ ಆರೋಪಿ ಲಕ್ಷ್ಮಣ ಸಾಂತೇರಿ ಪಾಟೀಲ ಬಂಧನಕ್ಕೆ ಅಬಕಾರಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ. ಇನ್ನು ಬಂಧಿತ ಆರೋಪಿ ಗೋವಾದಿಂದ ಖಾನಾಪೂರ ಕಣಕುಂಬಿ ಮಾರ್ಗವಾಗಿ ಅಕ್ರಮ ಮದ್ಯವನ್ನು ಸಾಗಿಸುವ ವೇಳೆ ಚೆಕ್​ಪೋಸ್ಟ್​ನಲ್ಲಿ ತಪಾಸಣೆ ನಡೆಸುವಾಗ ಆರೋಪಿ ಸಿಕ್ಕಿಬಿದಿದ್ದಾನೆ.

4.5 ಲಕ್ಷ ಮೌಲ್ಯದ ಗೋವಾ ಮದ್ಯ ವಶ
4.5 ಲಕ್ಷ ಮೌಲ್ಯದ ಗೋವಾ ಮದ್ಯ ವಶ

ಬೆಳಗಾವಿ: ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 4.5 ಲಕ್ಷ ರೂ.ಸಾರಾಯಿ ಸಮೇತ ಓರ್ವ ವ್ಯಕ್ತಿಯನ್ನು ಅಬಕಾರಿ ಇಲಾಖೆ ಪೊಲೀಸರು ಇಂದು ಸಂಜೆ ವಶಕ್ಕೆ ಪಡೆದಿದ್ದಾರೆ.

ತಾಲೂಕಿನ ಬಾದರವಾಡಿ ಗ್ರಾಮದ ಅಶೋಕ ಸುರೇಶ ಪಾಟೀಲ (25) ಬಂಧಿತ ಆರೋಪಿ. ಇನ್ನೋರ್ವ ಆರೋಪಿ ಲಕ್ಷ್ಮಣ ಸಾಂತೇರಿ ಪಾಟೀಲ ಬಂಧನಕ್ಕೆ ಅಬಕಾರಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ. ಇನ್ನು ಬಂಧಿತ ಆರೋಪಿ ಗೋವಾದಿಂದ ಖಾನಾಪೂರ ಕಣಕುಂಬಿ ಮಾರ್ಗವಾಗಿ ಅಕ್ರಮ ಮದ್ಯವನ್ನು ಸಾಗಿಸುವ ವೇಳೆ ಚೆಕ್​ಪೋಸ್ಟ್​ನಲ್ಲಿ ತಪಾಸಣೆ ನಡೆಸುವಾಗ ಆರೋಪಿ ಸಿಕ್ಕಿಬಿದಿದ್ದಾನೆ.

ಆತನ ಬಳಿ 324 ಮದ್ಯದ ಬಾಟಲ್​ಗಳು ಒಟ್ಟು 133.560 ಲೀಟರ್ ಗೋವಾ ಮದ್ಯ ಹಾಗೂ 24 ಬಿಯರ್ ಬಾಟಲ್​ ಹಾಗೂ ವಾಹನವನ್ನು ವಶಕ್ಕೆ ಪಡೆಯಲಾಗಿದೆ. ಬಂಧಿತ ಆರೋಪಿ ಅಶೋಕನಿಂದ ಲಕ್ಷ್ಮಣ ಎಂಬುವವನು ಈ ಮದ್ಯವನ್ನು ಪಡೆದು ಅಕ್ರಮವಾಗಿ ಗ್ರಾಮೀಣ ಪ್ರದೇಶದಲ್ಲಿ ಮಾರಾಟ ಮಾಡುತ್ತಿದ್ದಾನೆ ಎಂದು ತನಿಖೆ ವೇಳೆಯಲ್ಲಿ ಬೆಳಕಿಗೆ ಬಂದಿದೆ. ಈ ವ್ಯಕ್ತಿಗಾಗಿಯೂ ಅಧಿಕಾರಿಗಳು ಜಾಲ ಬೀಸಿದ್ದಾರೆ.

ಅಬಕಾರಿ ಜಂಟಿ ಆಯುಕ್ತ ಡಾ.ವೈ ಮಂಜುನಾಥ, ಉಪ ಆಯುಕ್ತ ಜಯರಾಮೇಗೌಡ, ಉಪ ಅಧೀಕ್ಷಕ ಚೆನ್ನೇಗೌಡ ಎಸ್ ಪಾಟೀಲ ಇವರ ಮಾರ್ಗದರ್ಶನದಲ್ಲಿ ನೀರಿಕ್ಷಕ ಮಂಜುನಾಥ ಗಲಗಲಿ, ಎಸ್.ಎಂ.ಪೂಜಾರ, ಸುನೀಲ ಪಾಟೀಲ, ಎಂ ಎಪ್. ಕಟಗೆನ್ನವರ, ಬಿ ಎಸ್.ಅಟಿಗಲ್ ಅವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.