ಗೌಂಡವಾಡ ಘರ್ಷಣೆ: ಸತೀಶ್ ಪಾಟೀಲ್ ‌ಕೊಲೆ ಮಾಡಿದ 10 ಆರೋಪಿಗಳ ಬಂಧನ

author img

By

Published : Jun 22, 2022, 9:53 AM IST

10-people-arrested-in-satish-patil-murder-case

ಬೆಳಗಾವಿಯ ಗೌಂಡವಾಡ ಗ್ರಾಮದಲ್ಲಿ ನಡೆದ ಸತೀಶ್ ಪಾಟೀಲ್ ಕೊಲೆ ಹಾಗೂ ಹಿಂಸಾಚಾರ ಸಂಬಂಧ ಕಾಕತಿ ಠಾಣೆ ‌ಪೊಲೀಸರು 32 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

ಬೆಳಗಾವಿ: ಮೂರು ದಿನಗಳ ‌ಹಿಂದೆ ತಾಲೂಕಿನ ಗೌಂಡವಾಡ ಗ್ರಾಮದಲ್ಲಿ ನಡೆದಿದ್ದ ಸತೀಶ್ ಪಾಟೀಲ್ ಹತ್ಯೆ ಪ್ರಕರಣದಲ್ಲಿ 10 ಮಂದಿಯನ್ನು ಬಂಧಿಸಲಾಗಿದೆ. ಗೌಂಡವಾಡ ‌ಗ್ರಾಮದ ಹತ್ತು ಆರೋಪಿಗಳನ್ನು ಕಾಕತಿ ಠಾಣೆ ‌ಪೊಲೀಸರು ಬಂಧಿಸಿದ್ದಾರೆ.

ಆನಂದ ಕುಟ್ರೆ (60), ಜಾಯಪ್ಪ ನೀಲಜಕರ (52), ಸುರೇಖಾ ನೀಲಜಕರ (47), ಸಂಜನಾ ನೀಲಜಕರ (21), ವೆಂಕಟೇಶ ಕುಟ್ರೆ (50), ದೌಲತ್ ಮುತಗೇಕರ (21), ಲಖನ್ ನೀಲಜಕರ (25), ಲಕ್ಷ್ಮಿ ಕುಟ್ರೆ (45), ಸಂಗೀತಾ ಕುಟ್ರೆ (45) ಹಾಗೂ ಶಶಿಕಲಾ ‌ಕುಟ್ರೆ (50) ಬಂಧಿತರು. ಜೂನ್ 18ರ ರಾತ್ರಿ ಸತೀಶ್ ಪಾಟೀಲ್ ಹತ್ಯೆ ನಡೆದಿತ್ತು. ಕಾರು ಪಾರ್ಕಿಂಗ್ ವಿಚಾರಕ್ಕೆ ಉಂಟಾದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿತ್ತು. ಸತೀಶ್ ‌ಹತ್ಯೆ ಬಳಿಕ ಗ್ರಾಮದಲ್ಲಿ ‌ವಾಹನ, ಬಣವೆಗೆ ಉದ್ರಿಕ್ತರು ಬೆಂಕಿ ಇಟ್ಟಿದ್ದರು.

10-people-arrested-in-satish-patil-murder-case
ಬಂಧಿತ 10 ಮಂದಿ ಆರೋಪಿಗಳು

ಗ್ರಾಮದ ದೇವಸ್ಥಾನದ ಜಾಗವನ್ನು ಗ್ರಾಮದ ಕೆಲ ಪ್ರಭಾವಿಗಳು ಒತ್ತುವರಿ ಮಾಡಿದ್ದರು. ದೇವಸ್ಥಾನದ ಜಾಗ ಮರಳಿ ಸಿಗಬೇಕೆಂದು ಸತೀಶ್ ಪಾಟೀಲ್ ಹೋರಾಟ ಮಾಡ್ತಿದ್ದರು. ಇದೇ ವೈಷಮ್ಯಕ್ಕೆ ಸತೀಶ್ ಪಾಟೀಲ್ ಹತ್ಯೆ ಮಾಡಲಾಗಿದೆ. ಕಾಕತಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿತ್ತು. ಕೊಲೆ ಬಳಿಕ ನಡೆದ ಹಿಂಸಾಚಾರ ಸಂಬಂಧ ಕಾಕತಿ ಠಾಣೆ ‌ಪೊಲೀಸರು 22 ಆರೋಪಿಗಳ ಬಂಧಿಸಿದ್ದಾರೆ. ಕೊಲೆ ಹಾಗೂ ಹಿಂಸಾಚಾರ ಎರಡೂ ಪ್ರಕರಣಗಳ ಸಂಬಂಧ ಬಂಧಿತರ ಸಂಖ್ಯೆ ಒಟ್ಟು 32ಕ್ಕೆ ಏರಿಕೆಯಾಗಿದೆ.

ಇದನ್ನೂ ಓದಿ: 50 ರೂಪಾಯಿಗಾಗಿ ಸ್ನೇಹಿತರ ನಡುವೆ ಜಗಳ.. ಬೆಂಗಳೂರಲ್ಲಿ ಚಾಕು ಇರಿದು ಗೆಳೆಯನ ಕೊಲೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.