ETV Bharat / state

ಬೆಂಗಳೂರು: ಸಂಬಂಧ ಒಲ್ಲೆ ಎಂದವಳಿಗೆ ಚಾಕು ಇರಿತ.. ಆರೋಪಿ ಬಂಧನ

author img

By

Published : Jan 16, 2023, 4:10 PM IST

ಬೆಂಗಳೂರಿನಲ್ಲಿ ಮಹಿಳೆಗೆ ಚಾಕು ಇರಿತ - ಆರ್.ಟಿ.ನಗರ ಠಾಣಾ ವ್ಯಾಪ್ತಿಯ ಮಠದಹಳ್ಳಿ ಎಂಬಲ್ಲಿ ಘಟನೆ- ಆರೋಪಿಯನ್ನು ಬಂಧಿಸಿದ ಪೊಲೀಸರು

women-stabbed-in-bengaluru
ಬೆಂಗಳೂರು : ಸಂಬಂಧ ಒಲ್ಲೆ ಎಂದವಳಿಗೆ ಚಾಕು ಇರಿತ.. ಆರೋಪಿ ಬಂಧನ

ಬೆಂಗಳೂರು : ಸಂಬಂಧ ಒಲ್ಲೆ ಎಂದವಳಿಗೆ ಚಾಕು ಇರಿತ.. ಆರೋಪಿ ಬಂಧನ

ಬೆಂಗಳೂರು : ಮಹಿಳೆಯೊಬ್ಬಳಿಗೆ ಚಾಕುವಿನಿಂದ ಇರಿದಿರುವ ಘಟನೆ ತಡರಾತ್ರಿ ಆರ್.ಟಿ.ನಗರ ಠಾಣಾ ವ್ಯಾಪ್ತಿಯ ಮಠದಹಳ್ಳಿಯಲ್ಲಿ ನಡೆದಿದೆ. ಚೂರಿ ಇರಿತಕ್ಕೊಳಗಾದ ಮಹಿಳೆಯನ್ನು ಹಬೀಬಾ ತಾಜ್ (30) ಎಂದು ಗುರುತಿಸಲಾಗಿದೆ. ಮಹಿಳೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆರೋಪಿ ಶೇಕ್ ಮೆಹಬೂಬ್ (32)ನ್ನು ಪೊಲೀಸರು ಬಂಧಿಸಿದ್ದಾರೆ.

ಚಾಕು ಇರಿತಕ್ಕೊಳಗಾದ ಹಬೀಬಾ ತಾಜ್​​ಗೆ ವಿವಾಹವಾಗಿತ್ತು. 6 ವರ್ಷಗಳ ಹಿಂದೆ ಹಿಂದೆ ಪತಿ ತೀರಿಕೊಂಡಿದ್ದ. ಎರಡು ಮಕ್ಕಳ ಜೊತೆಗೆ ವಾಸಮಾಡಿಕೊಂಡಿದ್ದ ಹಬೀಬಾಗೆ ಕಳೆದ ಕೆಲವು ವರ್ಷಗಳ ಹಿಂದೆ ಆರೋಪಿ ಶೇಕ್ ಮೆಹಬೂಬ್​ನ ಪರಿಚಯವಾಗಿತ್ತು. ಆಟೋ ಚಾಲಕನಾಗಿರುವ ಶೇಕ್ ಮೆಹಬೂಬ್​​​​ಗೂ ಮದುವೆಯಾಗಿದ್ದು ಮಕ್ಕಳಿದ್ದಾರೆ. ಆದರೂ ಶೇಕ್​ ಮೆಹಬೂಬ್​ ಹಬೀಬಾಳೊಂದಿಗೆ ಸಲುಗೆಯಿಂದ ಇದ್ದ.

ಇತ್ತೀಚೆಗೆ ಶೇಕ್ ಮೆಹಬೂಬ್ ನಿಂದ ದೂರವಾಗಲು ಯತ್ನಿಸಿದ್ದ ಹಬೀಬಾ, ಬೇರೆ ಮದುವೆಯಾಗಲು ಸಿದ್ಧತೆ ನಡೆಸಿದ್ದರು. ಈ ವಿಚಾರ ತಿಳಿದ ಆರೋಪಿ ತಡರಾತ್ರಿ ಹಬೀಬಾಳ ಮನೆಗೆ ಬಂದು ಕ್ಯಾತೆ ತೆಗೆದಿದ್ದಾನೆ. ಬಳಿಕ ಇಬ್ಬರ ತಾರಕಕ್ಕೇರಿದ್ದು, ಈ ವೇಳೆ ಹಬೀಬಾಗೆ ಶೇಕ್ ಮೆಹಬೂಬ್ ಚಾಕುವಿನಿಂದ ಇರಿದಿದ್ದಾನೆ. ಬಳಿಕ ಸ್ಥಳದಿಂದ ಪರಾರಿಯಾಗಿದ್ದಾನೆ. ಸದ್ಯ ಗಾಯಾಳು ಮಹಿಳೆಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.

ಈ ಸಂಬಂಧ ಮಹಿಳೆಯ ಸಹೋದರ ಆರ್.ಟಿ.ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ ಎಂದು ಉತ್ತರ ವಿಭಾಗದ ಡಿಸಿಪಿ ವಿನಾಯಕ್ ಪಾಟೀಲ್ ತಿಳಿಸಿದ್ದಾರೆ.

ಬೆಂಗಳೂರಿನ ಕಾಲೇಜಿನಲ್ಲಿ ಯುವತಿಗೆ ಚಾಕು ಇರಿತ : ಬೆಂಗಳೂರಿನ ಪ್ರತಿಷ್ಠಿತ ಕಾಲೇಜುವೊಂದರಲ್ಲಿ ಪಾಗಲ್ ಪ್ರೇಮಿಯೊಬ್ಬ ಪ್ರೀತಿಸಲು ನಿರಾಕರಿಸಿದ್ದಕ್ಕೆ ಯುವತಿಯನ್ನು ಬರ್ಬರವಾಗಿ ಕೊಲೆ ಮಾಡಿ, ಬಳಿಕ ತಾನು ಆತ್ಮಹತ್ಯೆಗೆ ಯತ್ನಿಸಿದ್ದ ಘಟನೆ ಇತ್ತೀಚೆಗೆ ನಡೆದಿತ್ತು. ಯಲಹಂಕ ರಾಜನಕುಂಟೆ ಬಳಿಯ ಕಾಲೇಜಿನಲ್ಲಿ ಕೋಲಾರ ಮುಳುಬಾಗಿಲು ಮೂಲದ 19 ವರ್ಷದ ಯುವತಿಯನ್ನು ಪವನ್ ಕಲ್ಯಾಣ್ ಎಂಬ ಯುವಕ ಬರ್ಬರವಾಗಿ ಕೊಲೆ ಮಾಡಿ ಬಳಿಕ ತಾನು ಆತ್ಮಹತ್ಯೆಗೆ ಯತ್ನಿಸಿದ್ದ. ಯುವತಿಯನ್ನು ಕೊಲೆಗೈದ ಆರೋಪಿ ಪವನ್ ವಿರುದ್ದ ಎಫ್​ಐಆರ್ ದಾಖಲಾಗಿತ್ತು.

ಪ್ರೀತಿ ನಿರಾಕರಿಸಿದ್ದಕ್ಕೆ ಚಾಕು ಇರಿದಿದ್ದ ಪಾಗಲ್​ ಪ್ರೇಮಿ : ಆರೋಪಿ ಪವನ್​ ಯುವತಿಯ ಸಂಬಂಧಿಕನಾಗಿದ್ದ. ಇದರಿಂದಾಗಿ ಪವನ್​ ಯುವತಿ ಹಿಂದೆ ಬಿದ್ದಿದ್ದ. ಇನ್ನು ಯುವತಿ ಜೊತೆ ಓಡಾಡದಂತೆ ಯುವತಿಯ ಪೋಷಕರು ಎಚ್ಚರಿಕೆ ನೀಡಿದ್ದರಂತೆ. ಆದರೂ ಯುವತಿ ಹಿಂದೆ ಆರೋಪಿ ಪವನ್ ಓಡಾಡುತ್ತಿದ್ದ ಎಂದು ಯುವತಿ ಪೋಷಕರು ಆರೋಪಿಸಿದ್ದರು. ಘಟನೆ ಸಂಬಂಧ ಹೆಚ್ಚಿನ ತನಿಖೆ ಕೈಗೊಂಡಿದ್ದೇವೆ ಎಂದು ಬೆಂಗಳೂರು ಗ್ರಾಮಾಂತರ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಹೇಳಿದ್ದರು.

ಖಾಸಗಿ ಕಾಲೇಜಿನಲ್ಲಿ ಎಂಟೆಕ್ ವ್ಯಾಸಂಗ​ ವಿದ್ಯಾರ್ಥಿನಿ ಪಾಗಲ್​ ಪ್ರೇಮಿಯ ಕೃತ್ಯಕ್ಕೆ ಬಲಿಯಾಗಿದ್ದಳು. ಅಷ್ಟೇ ಅಲ್ಲದೆ, ಪಾಗಲ್​ ಪ್ರೇಮಿ ತಾನೂ ಸಹ ಚಾಕುವಿನಿಂದ ಇರಿದುಕೊಂಡಿದ್ದ. ತಕ್ಷಣ ಎಚ್ಚೆತ್ತುಕೊಂಡ ಭದ್ರತಾ ಸಿಬ್ಬಂದಿ ಯುವತಿಯನ್ನು ಆಸ್ಪತ್ರೆಗೆ ಸಾಗಿಸಿದ್ದರು. ಆದರೆ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಯುವತಿ ಕೊನೆಯುಸಿರೆಳೆದಿದ್ದಳು. ಆರೋಪಿ ಯುವಕ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಇದನ್ನೂ ಓದಿ : ಕಾಲೇಜಿನಲ್ಲಿ ಎಂ ಟೆಕ್​ ವಿದ್ಯಾರ್ಥಿನಿಗೆ ಚಾಕುವಿನಿಂದ ಇರಿದು ಕೊಂದ ವಿದ್ಯಾರ್ಥಿ.. ಬೆಚ್ಚಿಬಿದ್ದ ಬೆಂಗಳೂರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.