ETV Bharat / state

ವಿವಾಹೇತರ ಸಂಬಂಧದ ಅನುಮಾನ.. ಬಾಳು ನೀಡಿದ ಪತಿಯಿಂದಲೇ ಚಾಕುವಿನಿಂದ ಇರಿದು ಪತ್ನಿಯ ಹತ್ಯೆ!

author img

By

Published : Jun 5, 2023, 12:56 PM IST

ಹೆಂಡತಿ ಮೇಲೆ ಅನೈತಿಕ ಸಂಬಂಧವಿರುವ ಅನುಮಾನದಲ್ಲಿ ಗಂಡನೇ ತನ್ನ ಪತ್ನಿಯನ್ನು ಕೊಲೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಹೆಂಡತಿ ಮೇಲೆ ಅನೈತಿಕ ಸಂಬಂಧ ಅನುಮಾನ
ಹೆಂಡತಿ ಮೇಲೆ ಅನೈತಿಕ ಸಂಬಂಧ ಅನುಮಾನ

ಬೆಂಗಳೂರು: ವಿವಾಹೇತರ ಸಂಬಂಧವಿರುವ ಅನುಮಾನದಲ್ಲಿ ಗಂಡನೇ ತನ್ನ ಪತ್ನಿಯನ್ನು ಬರ್ಬರವಾಗಿ ಕೊಲೆಗೈದಿರುವ ಘಟನೆ ಭಾನುವಾರ ತಡರಾತ್ರಿ ಬಸವೇಶ್ವರ ನಗರ ವ್ಯಾಪ್ತಿಯ ಮಂಜುನಾಥ ನಗರದಲ್ಲಿ ನಡೆದಿದೆ. ನಾಗರತ್ನ (32) ಎಂಬುರನ್ನು ಚಾಕುವಿನಿಂದ ಮನಸೋಯಿಚ್ಛೆ ಹಲ್ಲೆಗೈದು ಆಕೆಯ ಪತಿ ಅಯ್ಯಪ್ಪ ಹತ್ಯೆಗೈದಿದ್ದಾರೆ.

ಪೋಷಕರಿಲ್ಲದೇ ಅನಾಥಾಶ್ರಮದಲ್ಲಿದ್ದ ನಾಗರತ್ನರನ್ನು 12 ವರ್ಷಗಳ ಹಿಂದೆ ಅಯ್ಯಪ್ಪ ಮದುವೆಯಾಗಿದ್ದ. ದಂಪತಿಗೆ 11 ವರ್ಷದ ಮಗ ಹಾಗೂ 7 ವರ್ಷದ ಮಗಳಿದ್ದು, ಅಯ್ಯಪ್ಪನ ಅಕ್ಕನ ಮನೆಯಲ್ಲಿ ಮಕ್ಕಳನ್ನು ಬಿಟ್ಟಿದ್ದರು. ಇತ್ತೀಚೆಗೆ ಹೆಂಡತಿ ಮೇಲೆ ಅನುಮಾನ ಪಡಲಾರಂಭಿಸಿದ್ದ ಅಯ್ಯಪ್ಪ ಪದೇ ಪದೇ ಗಲಾಟೆ ಮಾಡುತ್ತಿದ್ದರಂತೆ.

ಮೂರು ದಿನಗಳಿಂದ ದಂಪತಿ ಮಧ್ಯೆ ಗಲಾಟೆ ನಡೆಯುತ್ತಲೇ ಇತ್ತು. ತಡರಾತ್ರಿ ಇಬ್ಬರ ನಡುವಿನ ಗಲಾಟೆ ವಿಕೋಪಕ್ಕೆ ತಿರುಗಿ ಅಯ್ಯಪ್ಪ ತನ್ನ ಪತ್ನಿ ನಾಗರತ್ನಳ ಮೇಲೆ ಚಾಕುವಿನಿಂದ ಹಲ್ಲೆ ಮಾಡಿ, ಮನಸೋಯಿಚ್ಛೆ ಇರಿದ ಪರಿಣಾಮ ನಾಗರತ್ನ ಸಾವನ್ನಪ್ಪಿದ್ದಾರೆ. ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದ್ದು, ಸ್ಥಳಕ್ಕೆ ಭೇಟಿ ನೀಡಿರುವ ಬಸವೇಶ್ವರ ನಗರ ಪೊಲೀಸರು ಅಯ್ಯಪ್ಪನನ್ನು ವಶಕ್ಕೆ ಪಡೆದಿದ್ದಾರೆ. ಸದ್ಯ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಚಿಕ್ಕಮಗಳೂರು: ಕೇವಲ ಒಂದು ಹಾಡಿಗೆ ನಡೆದ ಗಲಾಟೆ... ಕೊಲೆಯಲ್ಲಿ ಅಂತ್ಯ

ಹಾವೇರಿಯಲ್ಲಿ ಅಪಘಾತ ಇಬ್ಬರು ಸಾವು: ಮರಳಿನ ಟಿಪ್ಪರ್ ಮತ್ತು ಕಾರು ನಡುವೆ ಅಪಘಾತ ಸಂಭವಿಸಿ ಇಬ್ಬರು ಸಾವನ್ನಪ್ಪಿರುವ ಘಟನೆ ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನ ಅಂಕಸಾಪುರ ಗ್ರಾಮದ ಬಳಿ ಸಂಭವಿಸಿದೆ. ಮೃತರನ್ನು ಮಾಲತೇಶ ಕುಂದ್ರಳ್ಳಿ (21) ಮತ್ತೊಬ್ಬನನ್ನು ಮಾಲತೇಶ (24) ಎಂದು ಗುರುತಿಸಲಾಗಿದೆ. ರಾಣೇಬೆನ್ನೂರಿನ ಲಲಿತಾ ಪಾಟೀಲ ಹಾಗೂ ನಾಗರಾಜ್ ಎಂಬುವವರು ಗಂಭೀರ ಗಾಯಗೊಂಡಿದ್ದು, ಹೆಚ್ಚಿನ‌ ಚಿಕಿತ್ಸೆಗೆ ದಾವಣಗೆರೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರಿನಲ್ಲಿದ್ದ ಸವಾರರು ರಾಣೆಬೆನ್ನೂರಿಂದ ಅಂಕಸಾಪುರ ಗ್ರಾಮದ ಕಡೆ ಹೋಗುತ್ತಿದ್ದ ವೇಳೆ ರಾಣೆಬೆನ್ನೂರು ಗ್ರಾಮೀಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ದುರ್ಘಟನೆ ನಡೆದಿದೆ.

ಅಪಘಾತಕ್ಕೀಡಾದ ಟಿಪ್ಪರ್​ ಹಾಗು ಕಾರು
ಅಪಘಾತಕ್ಕೀಡಾದ ಟಿಪ್ಪರ್​ ಹಾಗು ಕಾರು

ಚಿಕ್ಕಮಗಳೂರಿನಲ್ಲಿ ಹಾಡಿಗಾಗಿ ಕೊಲೆ: ಶಾಸಕರ ಅಭಿನಂದನಾ ಕಾರ್ಯಾಕ್ರಮದಲ್ಲಿ ಕಾರ್ಯಕರ್ತರ ನಡುವೆ ಒಂದು ಸಾಂಗ್​ಗಾಗಿ ಗಲಾಟೆ ನಡೆದು ಓರ್ವ ಯುವಕನ ಹತ್ಯೆಯಾಗಿರುವ ಘಟನೆ ಇತ್ತೀಚೆಗೆ ನಡೆದಿತ್ತು. ಕಾಂಗ್ರೆಸ್ ಅಭ್ಯರ್ಥಿ ಜಿ. ಹೆಚ್. ಶ್ರೀನಿವಾಸ್ ಗೆಲುವು ಸಾಧಿಸಿದ ಹಿನ್ನೆಲೆ ನೂತನ ಶಾಸಕರಿಗೆ ಅಭಿನಂದನಾ ಕಾರ್ಯಾಕ್ರಮವನ್ನು ತರೀಕೆರೆ ಪಟ್ಟಣದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ಆರ್ಕೆಸ್ಟ್ರಾ ಕೂಡ ಇತ್ತು. ಈ ಕಾರ್ಯಕ್ರಮದಲ್ಲಿ ಕಾಂಗ್ರೆಸ್​ ಕಾರ್ಯಕರ್ತರ ಸ್ನೇಹಿತನ ಗುಂಪಿನ ಮಧ್ಯೆಯೇ ಒಂದು ಹಾಡು ಪ್ಲೇ ಮಾಡುವ ವಿಷಯಕ್ಕೆ ಜಗಳ ನಡೆದಿದೆ. ಆಗ ಹೇಗೋ ಜಗಳ ತಣ್ಣಗಾಗಿದೆ. ಆದರೆ ನಂತರ ಮತ್ತೇ ರಾತ್ರಿ ಇದೇ ವಿಷಯವಾಗಿ ಗಲಾಟೆ ನಡೆದು ವರುಣ್​ ಎಂಬ ಯುವಕನಿಗೆ ಅವನದೇ ಗೆಳಯರು ಚೂರಿ ಇರಿದಿದ್ದಾರೆ. ಇದರಿಂದ ಅತೀ ರಕ್ತಸ್ರಾವವಾಗಿ ವರುಣ್​ ಆಸ್ಪತ್ರೆಯಲ್ಲಿ ಅಸುನೀಗಿದ್ದಾನೆ.

ಇದನ್ನೂ ಓದಿ: ಬಾರ್​ ಮುಚ್ಚುವ ಸಮಯವಾಯ್ತು ಅಂದದಷ್ಟೇ.. ಶಿವಮೊಗ್ಗದಲ್ಲಿ ಪೊಲೀಸರ ಮುಂದೆಯೇ ಕ್ಯಾಷಿಯರ್ ಕೊಲೆ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.