ETV Bharat / state

ನಮಗೆ ಜಾತಿ ಬೇಡ, ನೆಮ್ಮದಿ ಬೇಕು, ನಾನೊಬ್ಬ ಹಿಂದೂಸ್ತಾನಿ: ಶಾಸಕ ಜಮೀರ್

author img

By

Published : Apr 14, 2022, 5:05 PM IST

ನಾನು ಜಾತಿ ಪರ ಕೆಲಸ ಮಾಡಿದ್ದರೆ ನನ್ನ ವಂಶ ನಿರ್ನಾಮವಾಗಲಿ. ನಮಗೆ ಜಾತಿ ಬೇಡ, ನೆಮ್ಮದಿ ಬೇಕು ಎಂದು ಜಮೀರ್ ಅಹಮದ್ ಖಾನ್ ಹೇಳಿದ್ದಾರೆ.

Zamir
ಜಮೀರ್ ಅಹಮದ್ ಖಾನ್

ಬೆಂಗಳೂರು: ನಾನು ಮುಸ್ಲಿಂ ಆಗಿರಬಹುದು. ಆದರೆ ಅದಕ್ಕೂ ಮುಂಚೆ ನಾನು ಭಾರತೀಯ, ಹಿಂದೂಸ್ತಾನಿ, ಕನ್ನಡಿಗ. ನಮಗೆ ಜಾತಿ ಬೇಡ, ನೆಮ್ಮದಿ ಬೇಕು ಎಂದು ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ಖಾನ್ ಹೇಳಿದ್ದಾರೆ.


ಬಾಬಾ ಸಾಹೇಬ್ ಅಂಬೇಡ್ಕರ್ ಜನ್ಮದಿನ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಅಂಬೇಡ್ಕರ್ ಅವರ ಸಂವಿಧಾನದಿಂದ ನಾವು ನೆಮ್ಮದಿ ಕಾಣುತ್ತಿದ್ದೇವೆ. ನಾನು ಜಾತಿ ಮಾಡಿದ್ದರೆ ನನ್ನ ವಂಶ ನಿರ್ನಾಮವಾಗಲಿ. ರಾಜಕೀಯಕ್ಕೆ ಬಂದ ಮೇಲೆಯೇ ನನಗೆ ಜಾತಿ ಗೊತ್ತಾಗಿರೋದು. ಅದಕ್ಕಿಂತ ಮುಂಚೆ ನನಗೆ ಅದು ಗೊತ್ತಿರಲಿಲ್ಲ ಎಂದು ಹೇಳಿದರು.

ಇದನ್ನೂ ಓದಿ: ಭ್ರಷ್ಟಾಚಾರ ಆರಂಭಿಸಿದ್ದೇ ಕಾಂಗ್ರೆಸ್‌, ಅವರಿಗೆ ಧರಣಿ ಮಾಡುವ ನೈತಿಕತೆ ಇಲ್ಲ: ಸಿಎಂ

ನಿಮ್ಮ ತೊಂದರೆ, ನಿಮ್ಮ ಕಷ್ಟ ಎಲ್ಲವೂ ನನ್ನದೆಂದು ತಿಳಿದಿದ್ದೇನೆ. ಅದರಂತೆಯೇ ಬಾಳುತ್ತಿದ್ದೇನೆ. ಯಾರಲ್ಲೂ ಜಾತಿ ಬರುವುದು ಬೇಡ. ನಾನು ನೀವು ಆಯ್ಕೆ ಮಾಡಿದ ಸೇವಕ, ನಿಮ್ಮ ಸೇವೆಯಲ್ಲೇ ಪ್ರತಿದಿನವನ್ನೂ ಕಳೆಯುತ್ತಿದ್ದೇನೆ ಎಂದರು.

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.